ಬೆಂಗಳೂರು: ಮಹಿಳೆಯಾಗಿ ಕಣ್ಣೀರಿಡುವುದು ಬೇಡ. ಮಹಿಳೆಯಲ್ಲಿ ಬೇರೆಯವರ ಕಣ್ಣೊರೆಸುವ ಶಕ್ತಿ ಇದೆ ಎಂದು ದಿವಂಗತ, ಕೇಂದ್ರ ಸಚಿವ ಅನಂತಕುಮಾರ್ ಪತ್ನಿ ತೇಜಸ್ವಿನಿ ಅವರು ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತಕುಮಾರ್ ಸ್ಪರ್ಧಿಸೋದು ಬಹುತೇಕ ಖಚಿತವಾಗಿತ್ತು. ಆದ್ರೆ ಕೊನೆ ಗಳಿಗೆಯಲ್ಲಿ ತೇಜಸ್ವಿ ಸೂರ್ಯರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಸುವ ವೇಳೆಯೂ ಸ್ಥಳೀಯ ಬಿಜೆಪಿ ಮುಖಂಡರು ಗೈರಾಗುವ ಮೂಲಕ ಅಸಮಾಧಾನ ಹೊರಹಾಕಿದ್ದರು. ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ತೇಜಸ್ವಿನಿ ಅನಂತಕುಮಾರ್ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು.
Advertisement
Advertisement
ತಮ್ಮ ನಿವಾಸಕ್ಕೆ ಆಗಮಿಸಿದ ತೇಜಸ್ವಿ ಅವರಿಗೆ ಮಾಧ್ಯಮಗಳ ಮುಂದೆ ಹೇಗಿರಬೇಕು ಎಂಬ ಪ್ರಬುದ್ಧತೆಯ ಮಾತುಗಳನ್ನು ಹೇಳುವ ಮೂಲಕ ಕುಟುಕಿದರು. ಪಕ್ಷದ ತೀರ್ಮಾನಕ್ಕೆ ಬದ್ಧಳಾಗಿದ್ದು, ತೇಜಸ್ವಿ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಖಚಿತಪಡಿಸಿದರು.
Advertisement
ತೇಜಸ್ವಿನಿ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಮಹಿಳೆಯರಲ್ಲಿ ಕಣ್ಣೀರು ತರಿಸುವ ಮೂರ್ಖರು ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ. ನೀವು ಗೆದ್ದಾಗಿದೆ, ಸಾಧಕಿಯ ಅನುಭವದ ಮಾತು ಎಂದು ಬರೆದಿದ್ದಾರೆ. ಇನ್ನು ಕೆಲವರು ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಮಾನ ಸಿಗಲಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಮಹಿಳೆಯಾಗಿ ಕಣ್ಣೀರಿಡುವುದು ಬೇಡ. ಮಹಿಳೆಯಲ್ಲಿ ಬೇರೆಯವರ ಕಣ್ಣೊರೆಸುವ ಶಕ್ತಿಯಿದೆ.
Do not feel weak and shed tears. Woman has abilities to wipe other's tears.
— Tejaswini AnanthKumar (@Tej_AnanthKumar) March 27, 2019