ಬೆಂಗಳೂರು: ಇತ್ತೀಚೆಗೆ ರಾಜ್ಯಾದ್ಯಂತ ಮಕ್ಕಳ ಕಳ್ಳರ ವದಂತಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೆ ಈ ಸುಳ್ಳು ವದಂತಿಗೆ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ.
ಮಕ್ಕಳ ಕಳ್ಳರು ಎಂದು ಶಂಕಿಸಿ ಜನರು ಇಬ್ಬರನ್ನು ಥಳಿಸಿ ಕೊಲೆ ಮಾಡಿದ್ದಾರೆ. ಆದ್ದರಿಂದ ಈ ರೀತಿಯ ಸುಳ್ಳು ವದಂತಿಗೆ ಜನರು ಗಾಬರಿಯಾಗಬಾರದೆಂದು ಪೊಲೀಸರು ಜನಜಾಗೃತಿ ಅಭಿಯಾನವನ್ನು ಮಾಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಪೊಲೀಸರ ಜನಜಾಗೃತಿ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.
Advertisement
ಬೆಂಗಳೂರು ನಗರ ಪೊಲೀಸರು ಮಕ್ಕಳ ಕಳ್ಳರಿದ್ದಾರೆ ಎಂದು ಸುಳ್ಳು ವದಂತಿ ಬಗ್ಗೆ ಒಂದು ಪಾಂಪ್ಲೆಟ್ ಮಾಡಿಸಿ ನಗರದಲ್ಲಿ ಹಂಚುತ್ತಿದ್ದು, ಜನರಲ್ಲಿ ಮನವಿ ಮಾಡುತ್ತಿದ್ದಾರೆ. ಈ ಅಭಿಯಾನದಲ್ಲಿ ಯಶ್ ಪಾಲ್ಗೊಂಡಿದ್ದು, ಪಾಂಪ್ಲೆಟ್ ಹಿಡಿದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
Advertisement
#ಜನಜಾಗೃತಿ ಅಭಿಯಾನದಲ್ಲಿ #ಯಶ್.ಸ್ಸು ಕಂಡ ಪೊಲೀಸರು, ಮಕ್ಕಳ ಕಳ್ಳರಿದ್ದಾರೆಂಬ ಸುಳ್ಳು ವದಂತಿಗಳನ್ನು ನಂಬದಂತೆ ಮತ್ತು ಪ್ರೋತ್ಸಾಹಿಸದಂತೆ ಸಾರ್ವಜನಿಕರಿಗೆ ಮನವಿ ಮಾಡುವುದನ್ನು ಮುಂದುವರೆಸಿರುತ್ತಾರೆ…….
"Do Not Entertain False Rumors"
|#FalseRumourOnChildkidnappers |@BlrCityPolice |#WeServe |#WeProtect | pic.twitter.com/gGhxDfyB0Z
— Laxman B. Nimbargi, IPS (@DCPWestBCP) June 1, 2018
Advertisement
ಮಕ್ಕಳ ಕಳ್ಳರ ಗುಂಪು ಇದೆ ಎಂದು ನಂಬಬಾರದು. ಒಂದು ವೇಳೆ ಯಾವುದೇ ರೀತಿ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ನಮ್ಮ 100 ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡಿ, ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸರು ಮನವಿ ಮಾಡಿದ್ದಾರೆ.
Advertisement
ಪೊಲೀಸರ ಮತ್ತು ನಟ ಯಶ್ ಅವರ ಜಾಗೃತಿ ಮೂಡಿಸುತ್ತಿರುವ ಫೋಟೋ ಹಾಕಿ, “ಜನಜಾಗೃತಿ ಅಭಿಯಾನದಲ್ಲಿ ಯಶಸ್ಸು ಕಂಡ ಪೊಲೀಸರು, ಮಕ್ಕಳ ಕಳ್ಳರಿದ್ದಾರೆಂಬ ಸುಳ್ಳು ವದಂತಿಗಳನ್ನು ನಂಬದಂತೆ ಮತ್ತು ಪ್ರೋತ್ಸಾಹಿಸದಂತೆ ಸಾರ್ವಜನಿಕರಿಗೆ ಮನವಿ ಮಾಡುವುದನ್ನು ಮುಂದುವರೆಸಿರುತ್ತಾರೆ” ಎಂದು ಬರೆದು ಡಿಸಿಪಿ ರವಿ.ಡಿ ಚೆನ್ನಣ್ಣನವರ್ ಟ್ವೀಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೇ ಕೊನೆಯಲ್ಲಿ “ಸುಳ್ಳು ವದಂತಿಯನ್ನು ಮನರಂಜನೆ ಮಾಡಬೇಡಿ (Do Not Entertain False Rumors)” ಎಂದು ಬರೆದು ಟ್ವೀಟ್ ಮಾಡಿದ್ದಾರೆ.