ಮೋದಿ, ಯೋಗಿ ಫೋಟೋಗಳೊಂದಿಗೆ ಉಚಿತ ಆಹಾರ ಪ್ಯಾಕೆಟ್‍ಗಳನ್ನು ವಿತರಿಸುವಂತಿಲ್ಲ

Public TV
1 Min Read
cm and pm photo

ಲಕ್ನೋ: ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ಫೋಟೋಗಳೊಂದಿಗೆ ಉಚಿತ ಆಹಾರ ಪ್ಯಾಕೆಟ್ ಗಳನ್ನು ವಿತರಿಸಬೇಡಿ ಎಂದು ಉತ್ತರ ಪ್ರದೇಶದ ಆಹಾರ ಸುರಕ್ಷತಾ ಆಯುಕ್ತರು ಇಂದು ಆದೇಶ ನೀಡಿದ್ದಾರೆ.

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾದಲ್ಲಿ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಇಂದಿನಿಂದಲೇ ಮಾದರಿ ನೀತಿ ಸಂಹಿತೆಯನ್ನು ಜಾರಿಯಾಗಿದೆ. ಇದನ್ನೂ ಓದಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ – ಇಂದು ಮಧ್ಯಾಹ್ನ 3.30ಕ್ಕೆ ಚುನಾವಣಾ ಆಯೋಗದಿಂದ ದಿನಾಂಕ ಪ್ರಕಟ

UP authorities order not to distribute free food packets with photographs of PM, CM | Elections News – India TV

ಇಂದು ಆಹಾರ ಆಯುಕ್ತ ಸೌರಭ್ ಬಾಬು ಅವರು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಪಿಎಂ, ಸಿಎಂ ಫೋಟೋಗಳೊಂದಿಗೆ ಉಚಿತ ಆಹಾರ ಪ್ಯಾಕೆಟ್‍ಗಳನ್ನು ವಿತರಿಸಬೇಡಿ ಎಂದು ಆದೇಶ ಹೊರಡಿಸಿದ್ದಾರೆ.

modi and yogi

ಈ ಕುರಿತು ಮಾತನಾಡಿದ ಅವರು, ಉತ್ತರ ಪ್ರದೇಶದ ಆಹಾರ ಆಯುಕ್ತರು ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರ ಭಾವಚಿತ್ರ ಹಾಕಿ ಪ್ಯಾಕೆಟ್ ಅನ್ನು ವಿತರಿಸಲಾಗುತ್ತಿತ್ತು. ಈ ಪ್ಯಾಕೆಟ್ ನಲ್ಲಿ ‘ಸೋಚ್ ಇಮಾಂದಾರ್, ಕಾಮ್ ದಮ್ದಾರ್’ (ಪ್ರಾಮಾಣಿಕ ಚಿಂತನೆ, ಬಲವಾದ ಕೆಲಸ) ಎಂಬ ಅಡಿಬರಹ ಸಹ ಇತ್ತು. ಆದರೆ ಇನ್ಮುಂದೆ ಈ ರೀತಿ ಉಚಿತ ಆಹಾರ ಪ್ಯಾಕೆಟ್‍ಗಳನ್ನು ವಿತರಿಸದಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಣ್ಣು ಮಾರಿ ಮನೆ ನಡೆಸಿದ 60ರ ಅಜ್ಜಿ ಮೂರೇ ವರ್ಷದಲ್ಲಿ ಹೈರಾಣಾದ ಕಥೆ

vote

403 ವಿಧಾನಸಭಾ ಸ್ಥಾನಗಳಲ್ಲಿ ಮತದಾನ ನಡೆಯಲಿದ್ದು, ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *