ಬೆಂಗಳೂರು: ಅಸೆಂಬ್ಲಿಯನ್ನು ಹುಚ್ಚಾಸ್ಪತ್ರೆ ಮಾಡಲು ಹೊರಟಿದ್ದೀರಾ ಎಂದು ಶಾಸಕರ ವಿರುದ್ಧ ವಿಧಾನಸಭೆ ಸಭಾಪತಿ ರಮೇಶ್ ಕುಮಾರ್ ಅವರು ಗರಂ ಆಗಿ ಪ್ರಶ್ನೆ ಮಾಡಿದ್ದಾರೆ.
ನಾನು ಕರೆಯದೆ ಯಾರೂ ಸಹ ಎದ್ದು ನಿಂತು ಮಾತನಾಡುವಂತಿಲ್ಲ. ಸಂಸದೀಯ ವ್ಯವಸ್ಥೆಯ ಶಿಸ್ತು ಮೀರಿದರೆ ಸುಮ್ಮನಿರಲ್ಲ ಎಂದು ಶಾಸಕರನ್ನು ಎಚ್ಚರಿಸಿದ ಅವರು, ಲಿಂಗಾಯತ ಧರ್ಮ ವಿಚಾರವಾಗಿ ಬಿಜೆಪಿಯ ರಾಜಕುಮಾರ್ ಪಾಟೀಲ್, ಪಾಟೀಲ್ ನಡಹಳ್ಳಿ ಮತ್ತು ಸಚಿವ ಡಿಕೆ ಶಿವಕುಮಾರ್, ಸಚಿವ ಜಮೀರ್ ಅಹ್ಮದ್ ಮಧ್ಯೆ ವಾಗ್ವಾದ ನಡೆದಿದ್ದಕ್ಕೆ ಸ್ಪೀಕರ್ ರಮೇಶ್ ಕುಮಾರ್ ಬಿಸಿ ಮುಟ್ಟಿಸಿದರು.
Advertisement
ನೀರಾವರಿ ಇಲಾಖೆಯಲ್ಲಿ ಕೆಲಸ ಆಗಿಲ್ಲ ಎಂದು ಶಾಸಕ ಗೋವಿಂದ ಕಾರಜೋಳ ಟೀಕಿಸಿದರು. ಇದಕ್ಕೆ ತಿರುಗೇಟು ಕೊಡುವ ಬರದಲ್ಲಿ ಸಚಿವ ಶಿವಾನಂದ ಪಾಟೀಲ್ ಅವರು ಎಂ.ಬಿ.ಪಾಟೀಲ್ ಅವರನ್ನು ನಿಮ್ಮ ಯತ್ನಾಳ್ ಹೊಗಳುತ್ತಾರೆ. ಆದರೆ ನೀವು ತೆಗಳುತ್ತಿರುವಿರಿ. ಇದಕ್ಕೆ ಬಿಜೆಪಿಗರು ಕಿಡಿಕಾರಿದರು. ಸಚಿವರು ತಮ್ಮ ಮಾತನ್ನು ವಾಪಸ್ ಪಡೆದರು. ಈ ವೇಳೆ ಇದು ಪಾಟೀಲರ ಜಗಳವೇ ಅಂತಾ ಬೊಮ್ಮಾಯಿ ಕಿಚಾಯಿಸಿದರು. ಆಗ ಪಾಟೀಲರ ನಡುವೆ ಶೆಟ್ಟರಿಗೆ ಏನು ಕೆಲಸ ಅಂತಾ ಯತ್ನಾಳ್ ಕಾಲೆಳೆದರು. ವಿಚಾರ ಗೊತ್ತಾಯ್ತು ಬಿಡಿ ಅಂತ ಸ್ಪೀಕರ್ ಹಾಸ್ಯ ಚಟಾಕಿ ಹಾರಿಸಿದರು.