ಡೆಹ್ರಾಡೂನ್: ನೈನಿತಾಲ್‍ನ ಜಿಲ್ಲಾಧಿಕಾರಿ ಪತ್ನಿ ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ಮಗುವಿಗೆ ಚಿಕಿತ್ಸೆ ಕೊಡಿಸಿದ್ದು, ಅವರ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜಿಲ್ಲಾಧಿಕಾರಿಯ ಸವೀನ್ ಬಂಸಾಲ್ ಅವರ ಪತ್ನಿ ಸುರಭಿ ಬಂಸಾಲ್ ಅವರು ತಮ್ಮ ಪರಿಚಯವನ್ನು ಮಾಡಿಸದೇ ಸಾಮಾನ್ಯರಂತೆ ಲೈನಿನಲ್ಲಿ ನಿಂತು ಸ್ಲಿಪ್ ಪಡೆದುಕೊಂಡಿದ್ದಾರೆ. ಅರ್ಧ ಗಂಟೆ ಲೈನಿನಲ್ಲಿ ನಿಂತ ಬಳಿಕ ಅವರ ಸರದಿ ಬಂತು.
Advertisement
Advertisement
ಮಗುವಿಗೆ ಚಿಕಿತ್ಸೆ ಕೊಡಿಸಲು ಸುರಭಿ ಬಂಸಾಲ್ ಅವರು ಬಿಡಿ ಪಾಂಡೆ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಅವರು ತಮ್ಮ ಪತಿ ಸವೀನ್ ಬಂಸಾಲ್ ಹೆಸರು ಹೇಳಿ ವಿಐಪಿ ಸೌಲಭ್ಯ ಬಳಸಿಕೊಳ್ಳುವ ಬದಲು ಸಾಮಾನ್ಯರಂತೆ ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ.
Advertisement
Advertisement
ಮಕ್ಕಳ ವೈದ್ಯ ಡಾ. ಎಂ.ಎಸ್ ರಾವತ್ ಅವರು ಮಗುವಿಗೆ ಚಿಕಿತ್ಸೆ ನೀಡಿದ್ದಾರೆ. ಅಷ್ಟರಲ್ಲಿ ಜಿಲ್ಲಾಧಿಕಾರಿ ಪತ್ನಿ ಸಾಮಾನ್ಯರಂತೆ ಯಾವುದೇ ವಿಐಪಿ ಸೌಲಭ್ಯ ಬಳಸದೇ ತಮ್ಮ ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ ಎಂಬ ವಿಷಯ ಆಸ್ಪತ್ರೆ ತುಂಬಾ ಹರಡಿತ್ತು. ಬಳಿಕ ಸುರಭಿ ಬಂಸಾಲ್ ಸರಳತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.