ಚೆನ್ನೈ: ಪ್ರತ್ಯೇಕ ದ್ರಾವಿಡ ರಾಷ್ಟ್ರ ಸಂಭವಿಸಿದಲ್ಲಿ ಇದಕ್ಕೆ ತಮ್ಮ ಸ್ವಾಗತವಿದ್ದು, ಅಂತಹ ಪರಿಸ್ಥಿತಿ ಬರುತ್ತದೆಂದು ಆಶಿಸುತ್ತೇನೆ ಎಂದು ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಹೇಳಿದ್ದಾರೆ.
ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಪ್ರತಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ಪ್ರತ್ಯೇಕ ದ್ರಾವಿಡ ರಾಷ್ಟ್ರ ಬೇಡಿಕೆ ಪ್ರಶ್ನೆಗೆ ಉತ್ತರಿಸಿ ದಕ್ಷಿಣ ಐದು ರಾಜ್ಯಗಳನ್ನು ಒಳಗೊಂಡ ದ್ರಾವಿಡ ರಾಷ್ಟ್ರ ಸ್ಥಾಪನೆಗೆ ನಮ್ಮ ಬೆಂಬಲವಿದೆ, ಅಂತಹ ಪರಿಸ್ಥಿತಿ ಬರುತ್ತದೆಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.
Advertisement
Advertisement
ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ತಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರ ಸರಿಯಾದ ಬೆಂಬಲ ನೀಡುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ನೇತೃತ್ವದ ಎನ್‍ಡಿಎ ಒಕ್ಕೂಟದಿಂದ ಹೊರನಡೆದಿದ್ದಾರೆ. ಈ ವೇಳೆಯಲ್ಲೇ ಎಂಕೆ ಸ್ಟಾಲಿನ್ ಪ್ರತ್ಯೇಕ ದ್ರಾವಿಡ ನಾಡು ಬೇಡಿಕೆಗೆ ಬೆಂಬಲ ಸೂಚಿಸಿದ್ದಾರೆ.
Advertisement
ಇದೇ ವೇಳೆ ತಮಿಳುನಾಡು ಸಿಎಂ ಹಾಗೂ ಎಐಎಂಡಿಕೆ ನಾಯಕ ಪಳನಿಸ್ವಾಮಿ ಅವರಿಗೆ ಪತ್ರ ಬರೆದಿರುವ ಕುರಿತು ತಿಳಿಸಿರುವ ಅವರು, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧ ಮಂಡಿಸಲಿರುವ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಸೂಚಿಸಲು ಮನವಿ ಮಾಡಿರುವುದಾಗಿ ತಿಳಿಸಿದರು. ಎಐಎಂಡಿಕೆ ಪಕ್ಷವು ಲೋಕಸಭೆಯಲ್ಲಿ ಮೂರನೇ ಅತೀ ದೊಡ್ಡ ಪಕ್ಷವಾಗಿದೆ.
Advertisement
ದ್ರಾವಿಡ ನಾಡು ರಾಷ್ಟ್ರ ಕಲ್ಪನೆಯೂ ತಮಿಳು, ಮಲೆಯಾಳಂ, ತೆಲುಗು ಮತ್ತು ಕನ್ನಡ ಬಾಷೆ ಮಾತನಾಡುವ ರಾಷ್ಟ್ರಗಳ ಮಾತೃಭೂಮಿಯ ಕಲ್ಪನೆಯಾಗಿದೆ. 1940 ರಲ್ಲಿ ತಮಿಳುನಾಡಿನ ಇವಿ ರಾಮಸ್ವಾಮಿ ಪೆರಿಯಾರ್ ಅವರು ಈ ಕಲ್ಪನೆಯನ್ನು ರೂಪಿಸಿದರು. ಈ ವೇಳೆ ತಮಿಳರ ಆತ್ಮಾಭಿಮಾನ ಎಂಬ ಹೆಸರಿನಲ್ಲಿ ಆಂದೋಲನವನ್ನು ಮುನ್ನೆಡೆಸಿ `ದ್ರಾವಿಡ ಮುನೇತ್ರ ಕಳಗಂ'(ಡಿಎಂಕೆ) ಪಕ್ಷವನ್ನು ಸ್ಥಾಪಿಸಿದ್ದರು. ಡಿಎಂಕೆ ಪಕ್ಷದ ಸ್ಥಾಪಕ ತತ್ವಗಳಲ್ಲಿ ಪ್ರತ್ಯೇಕ ದ್ರಾವಿಡ ರಾಷ್ಟ್ರ ನಿರ್ಮಾಣವೂ ಮೂಲ ಅಂಶವಾಗಿದೆ.