ಚೆನ್ನೈ: ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ರಾಜ್ಯಸಭಾ ಸಂಸದ ಎನ್ಆರ್ ಇಳಂಗೋವನ್ ಅವರ ಪುತ್ರ ರಾಕೇಶ್(22) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಮತ್ತೊರ್ವ ಪ್ರಯಾಣಿಕನೊಂದಿಗೆ ಪುದುಚೇರಿಯಿಂದ ಚೆನ್ನೈಗೆ ರಾಕೇಶ್ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕಾರು ವಾಹನವು ರಸ್ತೆ ವಿಭಜಕಕ್ಕೆ (ಡಿವೈಡರ್) ಡಿಕ್ಕಿ ಹೊಡೆದ ಪರಿಣಾಮ ರಾಕೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದಾರೆ ಮತ್ತು ಮತ್ತೋರ್ವ ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಆಪ್‍ಗೆ ಅಭಿನಂದನೆ ಕೋರಿದ ನವಜೋತ್ ಸಿಂಗ್ ಸಿಧು
ಸದ್ಯ ಈ ಘಟನೆ ಕುರಿತಂತೆ ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದೀಗ ಗಾಯಾಳು ಪ್ರಯಾಣಿಕನನ್ನು ಸಮೀಪದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಾಜಿ ಹಿರಿಯ ವಕೀಲರಾದ ಎನ್‍ಆರ್ ಇಳಂಗೋವನ್ ಅವರು 2020ರಲ್ಲಿ ತಮಿಳುನಾಡಿನಿಂದ ರಾಜ್ಯಸಭಾ ಸದಸ್ಯರಾದರು. ಇದೇ ಮೊದಲ ಅವರ ಮೊದಲ ಅವಧಿಯಾಗಿದೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಎಎಪಿ ಮುನ್ನಡೆ – ಭಗವಂತ್ ಮಾನ್ ಮನೆಯಲ್ಲಿ ಸಂಭ್ರಮಾಚರಣೆ ಶುರು