ಚೆನ್ನೈ: ತಮಿಳುನಾಡು ಬಿಜೆಪಿ (Tamil Nadu BJP) ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ಲೋಕಸಭಾ ಚುನಾವಣೆಯಲ್ಲಿ (Lok Sabha Election) ಸೋತಿದ್ದಕ್ಕೆ ಡಿಎಂಕೆ (DMK) ಕಾರ್ಯಕರ್ತರು ಮೇಕೆಯನ್ನು ನಡು ರಸ್ತೆಯಲ್ಲಿ ಕೊಂದು ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಣ್ಣಾಮಲೈ ಫೋಟೋ ವನ್ನು ಮೇಕೆ ಕತ್ತಿಗೆ ನೇತು ಹಾಕಿ ನಡು ರಸ್ತೆಗೆ ತಂದು ಒಂದೇ ಏಟಿಗೆ ತಲೆಯನ್ನು ಕತ್ತರಿಸಿ ಡಿಎಂಕೆ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಫುಲ್ ವೈರಲ್ ಆಗಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ಹಗರಣ – ಇಂದೇ ನಾಗೇಂದ್ರ ರಾಜೀನಾಮೆ ಸಾಧ್ಯತೆ!
Advertisement
Advertisement
DMK workers/supporters have beheaded a goat with a photo of Annamalai.
This is the hatred: how dare Annamalai contest the election? And, these people are talking about saving Democracy. pic.twitter.com/6Lvq7HEg6H
— Anshul Saxena (@AskAnshul) June 5, 2024
Advertisement
ಬಿಜೆಪಿ ನಾಯಕ ಅಮರ್ ಪ್ರಸಾದ್ ರೆಡ್ಡಿ ಅವರು ಈ ವಿಡಿಯೋವನ್ನು ಅಪ್ಲೋಡ್ ಮಾಡಿ ಮುಖ್ಯಮಂತ್ರಿ ಸ್ಟಾಲಿನ್ ನಿಮಗೆ ನಾಚಿಕೆಯಾಗಬೇಕು. ನಿಮ್ಮ ಅನಾಗರಿಕ ವರ್ತನೆ ಸ್ವೀಕಾರಾರ್ಹವಲ್ಲ. ದಯವಿಟ್ಟು ನಿಮ್ಮ ಕಾರ್ಯಕರ್ತರಿಗೆ ಮೂಲಭೂತ ಸಭ್ಯತೆಯನ್ನು ಪ್ರದರ್ಶಿಸಿಲು ಹೇಳಿ. ತಮಿಳುನಾಡು ಪೊಲೀಸರು ವೀಕ್ಷಕರಾಗುವ ಬದಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಿಂದ ಹೊರಟ ಚಾರಣಿಗರಿಗೆ ನಿಜಕ್ಕೂ ಆಗಿದ್ದೇನು?
Advertisement
ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಣ್ಣಾಮಲೈ 1,18,068 ಮತಗಳ ಅಂತರದಿಂದ ಸೋತಿದ್ದರು. ಡಿಎಂಕೆ ಗಣಪತಿ ರಾಜ್‌ಕುಮಾರ್ ಅವರು 5,68,200 ಮತಗಳನ್ನು ಪಡೆದರೆ ಅಣ್ಣಾಮಲೈ 4,50,132 ಮತಗಳನ್ನು ಗಳಿಸಿದ್ದಾರೆ. ಎಐಡಿಎಂಕೆಯ ಸಿಂಗಯ್ ಜಿ ರಾಮಚಂದ್ರನ್ ಅವರು 2,36,490 ಮತಗಳು ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ.