ನವದೆಹಲಿ: ಡೀಲಿಮಿಟೇಷನ್ (Delimitation) ವಿರುದ್ಧ ಪ್ರತಿಭಟನಾ ಸಂದೇಶ ಒಳಗೊಂಡ ಟಿ-ಶರ್ಟ್ಗಳನ್ನು ಧರಿಸಿ ಡಿಎಂಕೆ ಸಂಸದರು ಸದನಕ್ಕೆ ಬಂದ ಹಿನ್ನೆಲೆ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಈ ಕಾರಣದಿಂದಾಗಿ ಸ್ಪೀಕರ್ ಓಂ ಬಿರ್ಲಾ (Om Birla) ಹಲವು ಬಾರಿ ಸದನ ಮೊಟಕುಗೊಳಿಸಿದರು.
ಡಿಎಂಕೆ (DMK) ಸಂಸದರು ‘ನ್ಯಾಯಯುತ ಡೀಲಿಮಿಟೇಷನ್’, ‘ತಮಿಳುನಾಡು ಹೋರಾಡುತ್ತದೆ, ತಮಿಳುನಾಡು ಗೆಲ್ಲುತ್ತದೆ’ ಎಂಬ ಘೋಷಣೆಗಳು ಬರೆದ ಟಿ-ಶರ್ಟ್ಗಳನ್ನು ಧರಿಸಿ ಸದನಕ್ಕೆ ಆಗಮಿಸಿದರು. ಇದು ಸಂಸದೀಯ ನಿಯಮಗಳು ಮತ್ತು ಮರ್ಯಾದೆಗೆ ವಿರುದ್ಧವಾಗಿದೆ ಎಂದು ಓಂ ಬಿರ್ಲಾ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೈಸೂರು ಪೊಲೀಸರೇ ದಂಧೆ ನಡೆಸುತ್ತಿದ್ದಾರೆ, ಇದಕ್ಕೆ ಕಡಿವಾಣ ಹಾಕಿ: ಗೃಹ ಇಲಾಖೆಗೆ ಹೆಚ್.ವಿಶ್ವನಾಥ್ ಒತ್ತಾಯ
ಸದನವು ನಿಯಮಗಳು ಮತ್ತು ಪದ್ಧತಿಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಸಂಸದರು ಸದನದ ಘನತೆ ಮತ್ತು ಗೌರವವನ್ನು ಕಾಪಾಡಬೇಕು. ಆದರೆ ಕೆಲವು ಸಂಸದರು ನಿಯಮಗಳನ್ನು ಪಾಲಿಸದೆ ಘನತೆಗೆ ಧಕ್ಕೆ ತರುತ್ತಿದ್ದಾರೆ, ಇದು ಸ್ವೀಕಾರಾರ್ಹವಲ್ಲ ಎಂದು ಓಂ ಬಿರ್ಲಾ ಹೇಳಿದರು. ಇದನ್ನೂ ಓದಿ: ವಿದ್ಯುತ್ ದರ ಹೆಚ್ಚಳ – ಬೆಲೆ ಏರಿಕೆಯ ಗ್ಯಾರಂಟಿ ಕೊಟ್ಟ ಕಾಂಗ್ರೆಸ್: ವಿಜಯೇಂದ್ರ
ಪ್ರತಿಭಟನೆಯ ಭಾಗವಾಗಿ, ಡಿಎಂಕೆ ಸಂಸದರು ಕ್ಷೇತ್ರ ಪುನರ್ ವಿಂಗಡನೆ ವಿಷಯವನ್ನು ಲೋಕಸಭೆಯಲ್ಲಿ ಚರ್ಚೆಗೆ ಒತ್ತಾಯಿಸಿದರು. ಆದರೆ, ಜನಗಣತಿ ಇನ್ನೂ ನಡೆದಿಲ್ಲದ ಕಾರಣ ಈ ವಿಷಯ ಸರ್ಕಾರದ ವ್ಯಾಪ್ತಿಯಲ್ಲಿಲ್ಲ ಎಂದು ಸ್ಪೀಕರ್ ತಿರಸ್ಕರಿಸಿದರು. ಈ ಘಟನೆಯಿಂದ ಸದನದಲ್ಲಿ ಗೊಂದಲ ಉಂಟಾಗಿ, ಮೊದಲು ಮಧ್ಯಾಹ್ನ 12 ಗಂಟೆವರೆಗೆ ಮತ್ತು ನಂತರ 2 ಗಂಟೆವರೆಗೆ ಸದನವನ್ನು ಮೊಟಕುಗೊಳಿಸಲಾಯಿತು. ಇದನ್ನೂ ಓದಿ: 8 ವಿದ್ಯಾರ್ಥಿನಿಯರ ಮೇಲೆ ರೇಪ್ ಆರೋಪ – ಬಂಧಿತ ಪ್ರಾಧ್ಯಾಪಕನ ಕಂಪ್ಯೂಟರ್‌ನಲ್ಲಿತ್ತು 65 ಸೆಕ್ಸ್ ವಿಡಿಯೋ
ರಾಜ್ಯಸಭೆಯಲ್ಲಿಯೂ ಇದೇ ರೀತಿಯ ದೃಶ್ಯಗಳು ಕಂಡುಬಂದವು. ಡಿಎಂಕೆ ಸಂಸದರ ಟಿ-ಶರ್ಟ್ ಪ್ರತಿಭಟನೆಗೆ ಆಕ್ಷೇಪ ವ್ಯಕ್ತವಾದ ಕಾರಣ ಮಧ್ಯಾಹ್ನದ ವೇಳೆಗೆ ಮೂರು ಬಾರಿ ಸದನವನ್ನು ಮೊಟಕುಗೊಳಿಸಲಾಯಿತು. ಅಧ್ಯಕ್ಷ ಜಗದೀಪ್ ಧನ್‌ಖರ್ ಅವರು ವಿಷಯವನ್ನು ಪಕ್ಷದ ಮುಖಂಡರೊಂದಿಗೆ ಚರ್ಚಿಸಿದರೂ ಗೊಂದಲ ಮುಂದುವರಿಯಿತು. ಇದನ್ನೂ ಓದಿ: ಐಪಿಎಲ್ 2025: ಮೊದಲ 3 ಪಂದ್ಯಗಳಿಗೆ ರಾಜಸ್ಥಾನ ರಾಯಲ್ಸ್‌ಗೆ ರಿಯಾನ್ ಪರಾಗ್ ಕ್ಯಾಪ್ಟನ್
ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್ ವಿಂಗಡನೆಯಿಂದ ತಮಿಳುನಾಡು ಮತ್ತು ಇತರ ದಕ್ಷಿಣ ರಾಜ್ಯಗಳಿಗೆ ಸಂಸದೀಯ ಸ್ಥಾನಗಳ ಕಡಿತಕ್ಕೆ ಕಾರಣವಾಗಲಿದೆ ಎಂದು ಡಿಎಂಕೆ ವಾದಿಸುತ್ತಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ನೀಡಿಲ್ಲ ಎಂದು ಆರೋಪಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಿದೆ. ಇದನ್ನೂ ಓದಿ: ಸಚಿವರ ಮೇಲೆ 2 ಸಲ ಹನಿಟ್ರ್ಯಾಪ್ ಯತ್ನ – ಸತೀಶ್ ಜಾರಕಿಹೊಳಿ ಬಾಂಬ್