ಚೆನ್ನೈ: ಡಿಎಂಕೆ ಫೈಲ್ಸ್ (DMK Files) ರಿಲೀಸ್ ಮಾಡಿ ಭ್ರಷ್ಟಾಚಾರದ ಆರೋಪ ಹೊರಿಸಿದ್ದ ರಾಜ್ಯ ಬಿಜೆಪಿ (BJP) ಮುಖ್ಯಸ್ಥ ಕೆ ಅಣ್ಣಾಮಲೈ (Annamalai) ವಿರುದ್ಧ ತಮಿಳುನಾಡು ಸರ್ಕಾರ (Tamil Nadu Government) ಬುಧವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದೆ. ಅಣ್ಣಾಮಲೈ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಅವರ ಮಾನಹಾನಿ ಮಾಡುತ್ತಿದ್ದಾರೆ ಎಂದು ಪಕ್ಷ ಆರೋಪಿಸಿದೆ.
2011ರಲ್ಲಿ ಚೆನ್ನೈ ಮೆಟ್ರೋ ಒಪ್ಪಂದವನ್ನು ಸರಿಪಡಿಸಲು ಎಂಕೆ ಸ್ಟಾಲಿನ್‌ಗೆ 200 ಕೋಟಿ ರೂ. ನೀಡಲಾಗಿದೆ ಎಂದು ಅಣ್ಣಾಮಲೈ ಇತ್ತೀಚೆಗೆ ಆರೋಪಿಸಿದ್ದರು. ಸ್ಟಾಲಿನ್ ಅವರ ಪಕ್ಷವಾದ ಡಿಎಂಕೆ ನಾಯಕರು 1.34 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇವೆಲ್ಲವನ್ನೂ ಭ್ರಷ್ಟಾಚಾರದ ಮೂಲಕ ಗಳಿಸಿದ್ದಾರೆ. ಮುಖ್ಯಮಂತ್ರಿ ಅವರ ಕುಟುಂಬ ಸದಸ್ಯರು ರಾಜ್ಯದಲ್ಲಿ ಹೂಡಿಕೆ ಮಾಡುತ್ತಿರುವ ದುಬೈ ಕಂಪನಿಯ ನಿರ್ದೇಶಕರು ಎಂದು ಅಣ್ಣಾಮಲೈ ಆರೋಪಿಸಿದ್ದರು.
ಈ ಬಗ್ಗೆ ವಾಗ್ದಾಳಿ ನಡೆಸಿರುವ ಡಿಎಂಕೆ ವಕ್ತಾರ ಟಿಕೆಎಸ್ ಇಳಂಗೋವನ್, ಅಣ್ಣಾಮಲೈ ಅವರಿಗೆ ಶಿಕ್ಷೆ ನೀಡುವುದೇ ಉತ್ತಮ ಕ್ರಮ. ಇದಕ್ಕೆ ಹೋಲಿಸಿದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏನೂ ಹೇಳಿರಲಿಲ್ಲ. ಆದರೂ ಅವರನ್ನು ಅನರ್ಹಗೊಳಿಸಲಾಗಿದೆ. ಇದೀಗ ಅಣ್ಣಾಮಲೈ ವಿರುದ್ಧ ಮೊಕದ್ದಮೆ ಹೂಡಲು ಬೇಕಾದಷ್ಟು ಕಾರಣಗಳಿವೆ ಎಂದಿದ್ದಾರೆ. ಇದನ್ನೂ ಓದಿ: ರಾಮನಗರ, ಉಡುಪಿಯಲ್ಲಿ ಭರ್ಜರಿ ಮತದಾನ – ಬೆಂಗಳೂರಿನಲ್ಲಿ ಮಧ್ಯಾಹ್ನದ ಬಳಿಕ ನೀರಸ ಪ್ರತಿಕ್ರಿಯೆ
ಈ ಹಿಂದೆ ಡಿಎಂಕೆಯ ಲೀಗಲ್ ನೋಟಿಸ್ ಬಳಿಕ ಅಣ್ಣಾಮಲೈ ಕ್ಷಮೆಯಾಚಿಸಲು ನಿರಾಕರಿಸಿದ್ದು, ಅವರು ಈ ಪ್ರಕರಣವನ್ನು ನ್ಯಾಯಾಲಯದಲ್ಲಿಯೇ ಎದುರಿಸಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates