ಶೋಭಾ ಕರಂದ್ಲಾಜೆ ವಿರುದ್ಧ ಚುನಾವಣಾ ಆಯೋಗಕ್ಕೆ ಡಿಎಂಕೆ ದೂರು

Public TV
1 Min Read
ShobhaKarandlaje

ನವದೆಹಲಿ: ಬಿಜೆಪಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ವಿರುದ್ದ ಕೇಂದ್ರ ಚುನಾವಣಾ ಆಯೋಗಕ್ಕೆ (Chief Election Commission) ಡಿಎಂಕೆ (DMK) ದೂರು ನೀಡಿದೆ.

ರಾಮೇಶ್ವರಂ ಕೆಫೆ ಸ್ಫೋಟ (Rameshwaram Cafe Blast) ಪ್ರಕರಣದ ಹಿಂದೆ ತಮಿಳುನಾಡಿನ (Tamil Nadu) ಜನರಿದ್ದಾರೆ. ತಮಿಳುನಾಡು ಕರ್ನಾಟಕದ ಜನರ ಮಧ್ಯೆ ಕೋಮು ದ್ವೇಷದ ಭಾಷಣ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ರಾಷ್ಟ್ರೀಯ ತನಿಖಾ ದಳ (NIA) ಯಾರನ್ನೂ ಬಂಧನ ಮಾಡಿಲ್ಲ. ಹೀಗಾಗಿ ಪ್ರಜಾಪತ್ರಿನಿಧಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ದೂರು ನೀಡಿದೆ. ಇದನ್ನೂ ಓದಿ: ನಾನು ಸ್ಪರ್ಧಿಸೋದು ಖಚಿತ, ವಿಜಯೇಂದ್ರ ರಾಜೀನಾಮೆ ಕೊಡೋದು ನಿಶ್ಚಿತ: ಈಶ್ವರಪ್ಪ ಭವಿಷ್ಯ

 

ತಮಿಳುನಾಡಿನಲ್ಲಿ ಟ್ರೈನಿಂಗ್ ಪಡೆದು, ಬಾಂಬ್ ಇಡಲು ಬೆಂಗಳೂರಿಗೆ (Bengaluru) ರಾಮೇಶ್ವರಂ ಕೆಫೆಗೆ ಶಂಕಿತ ಬಂದಿದ್ದಾನೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಎನ್‌ಐಎ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಆದರೆ ಎನ್‌ಐಎ ಇಲ್ಲಿಯವರೆಗೆ ಯಾರನ್ನೂ ಬಂಧಿಸಿದಲ್ಲ ಎಂದು ಡಿಎಂಕೆ ದೂರಿನಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಕಾಂಗ್ರೆಸ್‌ 2ನೇ ಪಟ್ಟಿ ಇಂದು ಬಿಡುಗಡೆ – ಸಂಭಾವ್ಯ ಅಭ್ಯರ್ಥಿಗಳು ಯಾರು?

ಶೋಭಾ ಕರಂದ್ಲಾಜೆ ಹೇಳಿದ್ದೇನು?
ಮಂಗಳವಾರ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಬೆಂಗಳೂರಿನ ನಗರ್ತಪೇಟೆಯಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, ತಮಿಳುನಾಡಿನ ಜನರು ಅಲ್ಲಿ ತರಬೇತಿ ಪಡೆದುಕೊಂಡು ಬಾಂಬ್ ಇಡುತ್ತಾರೆ ಎಂದು ಹೇಳಿಕೆ ನೀಡಿದ್ದರು.

ತನ್ನ ಹೇಳಿಕೆ ವಿವಾದವಾಗುತ್ತಿದ್ದಂತೆ ಎಕ್ಸ್‌ನಲ್ಲಿ ಕರಂದ್ಲಾಜೆ ಕ್ಷಮೆ ಕೇಳಿದ್ದರು. ನನ್ನ ತಮಿಳು ಸಹೋದರ ಸಹೋದರಿಯರಿಗೆ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ತಿಳಿಸಿದ್ದರು.

Share This Article