– ಕ್ಷೇತ್ರ ವಿಂಗಡಣೆ 30 ವರ್ಷಗಳ ಕಾಲ ಮುಂದೂಡಿ
– ತಮಿಳುನಾಡು ಸರ್ವಪಕ್ಷಗಳ ಸಭೆ ನಿರ್ಣಯ
ಚೆನ್ನೈ: ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆ (Lok Sabha) ಕ್ಷೇತ್ರಗಳ ಪುನರ್‌ವಿಂಗಡಣೆ ಮತ್ತು ತ್ರಿಭಾಷಾ ಸೂತ್ರ (Three Language Formula) ಜಾರಿ ವಿಚಾರದಲ್ಲಿ ತಮಿಳುನಾಡು (Tamil Nadu) ಸರ್ಕಾರ ನಿರ್ಣಾಯಕ ಸಮರ ಸಾರಿದೆ.
ಇಂದು ಸಿಎಂ ಸ್ಟಾಲಿನ್ (CM Stalin) ಕರೆದಿದ್ದ ತಮಿಳುನಾಡು ಸರ್ವ ಪಕ್ಷ ಸಭೆಯಲ್ಲಿ ಮಹತ್ವದ ತೀರ್ಮಾನ ಪ್ರಕಟವಾಗಿದೆ. 2026ರ ಜನಗಣತಿ ಆಧಾರದಡಿ ಲೋಕಸಭೆ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಬಾರದು. ಈ ಪ್ರಕ್ರಿಯೆಯನ್ನು ಮುಂದಿನ 30 ವರ್ಷಕ್ಕೆ ಮುಂದೂಡಬೇಕು. ಅಲ್ಲಿಯವರೆಗೂ 1971ರ ಜನಗಣತಿ ಆಧಾರದ ಮೇಲೆ ಹಾಲಿ ಇರುವ ಲೋಕಸಭೆ ಕ್ಷೇತ್ರಗಳೇ ಮುಂದುವರೆಯಬೇಕು ಎಂದು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿದೆ.
Advertisement
இந்தி எதிர்ப்புப் போர்வையில், வளையலைத் திருடும் குன்னூர் நகர்மன்ற 25-வது வார்டு திமுக கவுன்சிலர் திரு ஜாகிர் உசேன்.
திருட்டையும் திமுகவையும் எப்போதும் பிரிக்கவே முடியாது! pic.twitter.com/1wQKadFcnY
— K.Annamalai (@annamalai_k) March 4, 2025
Advertisement
ಈಗ ಏನಾದರೂ ಕ್ಷೇತ್ರಗಳ ಪುನರ್‌ವಿಂಗಡಣೆ ಆದರೆ ತಮಿಳುನಾಡು 12 ಸ್ಥಾನ ಕಳೆದುಕೊಳ್ಳುತ್ತದೆ ಎಂಬ ಆತಂಕನ್ನು ವ್ಯಕ್ತಪಡಿಸಿದೆ. ತ್ರಿಭಾಷಾ ಸೂತ್ರವನ್ನು ತೀವ್ರವಾಗಿ ವಿರೋಧಿಸಿದ ಡಿಎಂಕೆ ತಮಿಳುನಾಡಿನ ಎಲ್ಲಾ ಕೇಂದ್ರ ಕಚೇರಿಗಳಲ್ಲಿ ಹಿಂದಿಯನ್ನು (Hindi) ತೊಲಗಿಸಬೇಕು. ರೈಲುಗಳಿಗೆ ಹಿಂದಿಯಲ್ಲಿ ಹೆಸರಿಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ. ಇದನ್ನೂ ಓದಿ: ಕುಂಭಮೇಳ | ಯುಪಿಯ ಮೂರು ಹೆದ್ದಾರಿಗಳಲ್ಲಿ 40 ಲಕ್ಷ ದಾಖಲೆಯ ವಾಹನಗಳ ಸಂಚಾರ
Advertisement
ಹಿಂದಿ ಹೇರಿಕೆ ಖಂಡಿಸಿ ನಡೆಸಲಾದ ಪ್ರತಿಭಟನೆಯಲ್ಲಿ ಡಿಎಂಕೆ ಕೌನ್ಸಿಲರ್ ಜಾಕೀರ್ ಹುಸೇನ್ (DMK Councillor Zakir Hussain) ತಮ್ಮ ಪಕ್ಕ ನಿಂತಿದ್ದ ಮಹಿಳೆಯ ಕೈ ಬಳೆ ಎಳೆಯುತ್ತಿರುವ ವಿಡಿಯೋ ವೈರಲ್ ಆಗಿದೆ.
Advertisement
ಈ ವಿಡಿಯೋವನ್ನು ಇಟ್ಟುಕೊಂಡು ಬಿಜೆಪಿ ಡಿಎಂಕೆ ವಿರುದ್ಧ ಕಿಡಿಕಾರಿದೆ. ಹಿಂದಿ ವಿರೋಧಿ ಪ್ರತಿಜ್ಞೆ ಹೆಸರಲ್ಲಿ ಬಳೆ ಕಳ್ಳತನಕ್ಕೆ ಇಳಿದಿದ್ದಾರೆ..ಕಳ್ಳರಿಗೂ ಡಿಎಂಕೆಗೂ ವ್ಯತ್ಯಾಸವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಟೀಕಿಸಿದ್ದಾರೆ.