ಚೆನ್ನೈ: ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ಆರೋಗ್ಯ ಮತ್ತೆ ಗಂಭೀರವಾಗಿದೆ. ಇಷ್ಟು ದಿನ ಚೆನ್ನೈನ ಗೋಪಾಲಪುರಂನ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಶುಕ್ರವಾರ ರಾತ್ರೋರಾತ್ರಿ ವಿಶೇಷ ಅಂಬ್ಯುಲೆನ್ಸ್ ಮೂಲಕ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರುಣಾನಿಧಿಯವರ ಆರೋಗ್ಯ ಗಂಭೀರವಾಗಿದ್ದು, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಅಂತ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಆದರೆ ಮಾಜಿ ಸಚಿವ ಎ. ರಾಜ ಪ್ರತಿಕ್ರಿಯಿಸಿ, ಕರುಣಾನಿಧಿ ಆರೋಗ್ಯ ಸ್ಥಿರವಾಗಿದೆ. ರಕ್ತದೊತ್ತಡ ಕಡಿಮೆಯಾಗಿದ್ದಕ್ಕೆ ಆಸ್ಪತ್ರೆಗೆ ದಾಖಲಿಸಿದ್ದೇವೆ ಅಂತ ಹೇಳಿದ್ದಾರೆ. ಇಂದು ಗುಲಾಂ ನಬಿ ಆಜಾದ್ ಸೇರಿದಂತೆ ಹಲವರು ಕರುಣಾನಿಧಿ ಆರೋಗ್ಯ ವಿಚಾರಿಸಲಿದ್ದಾರೆ.
Advertisement
Chennai: MK Stalin, Kanimozhi, A Raja leave Kauvery Hospital, where DMK President Karunanidhi is admitted following a drop in blood pressure. #TamilNadu pic.twitter.com/vtwBncfRST
— ANI (@ANI) July 27, 2018
Advertisement
ಹಿರಿಯ ಪುತ್ರ ಅಳಗಿರಿ, ಪುತ್ರಿ ಕನ್ನಿಮೋಳಿ, ಕಿರಿಯ ಪುತ್ರ ಸ್ಟಾಲಿನ್ ಸೇರಿದಂತೆ ಕುಟುಂಬಸ್ಥರು ಮತ್ತು ಡಿಎಂಕೆ ನಾಯಕರು ಆಸ್ಪತ್ರೆಯತ್ತ ದೌಡಾಯಿಸಿದ್ರು. ಕಾವೇರಿ ಆಸ್ಪತ್ರೆ ಬಳಿ ಬೆಂಬಲಿಗರು ಜಮಾಯಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Advertisement
ಡಿಎಂಕೆ ಮುಖಸ್ಥ ಎಂ. ಕರುಣಾನಿಧಿ ಆರೋಗ್ಯ ಬಿಗಡಾಯಿಸಿದ್ದು, ಶುಕ್ರವಾರ ಚೆನ್ನೈನ ಅವರ ಮನೆಯನ್ನೇ ಆಸ್ಪತ್ರೆ ಮಾಡಿಕೊಂಡು ಕಾವೇರಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡ್ತಿದ್ದರು. 94 ವರ್ಷದ ವಯೋವೃದ್ಧ ರಾಜಕಾರಣಿ ಕರುಣಾನಿಧಿ ಅವರಿಗೆ ವಯೋಸಹಜ ಕಾರಣಗಳಿಂದಾಗಿ ಆರೋಗ್ಯ ಕ್ಷೀಣಿಸಿದ್ದು, ಮೂತ್ರನಾಳ ಸೋಕಿನ ಕಾರಣ ಜ್ವರ ಬಂದಿದೆ. ವಿಷಯ ತಿಳಿದ ಡಿಎಂಕೆ ಕಾರ್ಯಕರ್ತರು, ನಾಯಕರು ಭಾರೀ ಸಂಖ್ಯೆಯಲ್ಲಿ ಗೋಪಾಲಪುರದಲ್ಲಿರುವ ಕರುಣಾನಿಧಿ ನಿವಾಸದ ಮುಂದೆ ಸೇರಿದ್ದರು. ಕಮಲ್‍ಹಸನ್, ಎಐಎಡಿಎಂಕೆ ನಾಯಕರು ಎಂಕೆ ಸ್ಟಾಲಿನ್ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
Advertisement
#WATCH: DMK president M. Karunanidhi being taken to Chennai's Kauvery Hospital.#TamilNadu pic.twitter.com/uJ06YHOU5B
— ANI (@ANI) July 27, 2018
DMK President Karunanidhi has been admitted to the ICU of the hospital following a drop in blood pressure. His BP has been stabilised with medical management. He is being monitored and treated by a panel of expert doctors: Kauvery Hospital, Chennai #TamilNadu pic.twitter.com/qsLW12C0c3
— ANI (@ANI) July 27, 2018