ಪಾಟ್ನಾ: ಶಾಲೆಯಲ್ಲಿ ಕುರ್ತಾ ಪೈಜಾಮಾ ಧರಿಸಿದ್ದಕ್ಕೆ ಶಾಲೆಯ ಮುಖ್ಯೋಪಾಧ್ಯಾಯನಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್(ಡಿಎಂ) ತರಾಟೆಗೆ ತೆಗೆದುಕೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಡಿಎಂ ಮುಖ್ಯೋಪಾಧ್ಯಾಯನಿಗೆ ನಿಂದಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದರೊಂದಿಗೆ, ಇದೀಗ ಶಿಕ್ಷಕರು ಭಾರತೀಯ ಉಡುಗೆ ಕುರ್ತಾ, ಪೈಜಾಮಾ ಧರಿಸುವುದು ಅಪರಾಧವೇ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಇದನ್ನೂ ಓದಿ: ಒಂದೇ ಆಟೋದಲ್ಲಿ 27 ಮಂದಿ ಪ್ರಯಾಣ- ದಿಗ್ಭ್ರಮೆಗೊಂಡ ಪೊಲೀಸರು
Advertisement
Does wearing “Kurta Pyjama” by a teacher is now crime in India??
This DM is ordering ‘show cause’ and ‘salary cut’ notice just for wearing “Kurta Pyjama”.
The way this English Babu DM is behaving, is it anyhow acceptable @jsaideepak and @JaipurDialogues sir?? pic.twitter.com/wr8MUsrSFV
— Saurabh Pathak (@SaurabhPathakJi) July 10, 2022
Advertisement
ಬಿಹಾರದ ಲಖಿಸರಾಯ್ ಜಿಲ್ಲೆಯ ಡಿಎಂ ಸಂಜಯ್ ಕುಮಾರ್ ಸಿಂಗ್ ಅವರು, ಬಾಲಕಿಯರ ಪ್ರಾಥಮಿಕ ಶಾಲೆಯ ಬಾಲ್‌ಗುಡಾರ್ ಅವರನ್ನು ಕುರ್ತಾ, ಪೈಜಾಮ ಧರಿಸಿದ್ದಕ್ಕಾಗಿ ಗದರಿದ್ದಾರೆ. ನೀನು ಶಿಕ್ಷಕ ಅಲ್ಲ ರಾಜಕಾರಣಿಯಂತೆ ಕಾಣಿಸುತ್ತಿದ್ದೀಯ ಎಂದು ನಿಂದಿಸಿದ್ದಾರೆ. ಇದನ್ನೂ ಓದಿ: ಶೋಭಾ ಕರಂದ್ಲಾಜೆ ನೋಡಲು ನೆರೆ ನೀರಿನಲ್ಲಿ ಈಜಿ ಬಂದ ಜನ
Advertisement
ಸರ್ಕಾರದ ಆದೇಶದ ಮೇರೆಗೆ ಡಿಎಂ ಸಂಜಯ್ ಕುಮಾರ್ ಶಾಲೆಗೆ ತಪಾಸಣೆಗೆ ಬಂದಿದ್ದಾಗ ಮುಖ್ಯೋಪಾಧ್ಯಾಯರ ಉಡುಗೆ ಕಂಡು ಛೀಮಾರಿ ಹಾಕಿದ್ದಾರೆ. ಬಳಿಕ ಸ್ಥಳದಲ್ಲೇ ಅವರು ಶಿಕ್ಷಣಾಧಿಕಾರಿಗಳಿಗೆ ಕರೆ ಮಾಡಿ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸುವಂತೆ ಕೇಳಿದ್ದಾರೆ ಹಾಗೂ ವೇತನ ಕಡಿತಗೊಳಿಸಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.