ಬೆಂಗಳೂರು: ಡಿಸಿಎಂ ಡಿಕೆಶಿವಕುಮಾರ್ (DK Shivakumar) ಒಂದು ವಾರದಿಂದ ಭೂಮಿ ಮೇಲೆ ಇಲ್ಲದಂತೆ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸಿನಿಮಾ ನಟರ ವಿರುದ್ದ ಡಿಕೆಶಿವಕುಮಾರ್ ನೀಡಿದ್ದ ನಟ್ಟು-ಬೋಲ್ಟ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಟರು ಇವರಿಗೆ ಯಾವ ರೀತಿ ಸಪೋರ್ಟ್ ಮಾಡಬೇಕು. ನಟ್ಟು-ಬೋಲ್ಟ್ ಲೂಸ್ ಆದರೆ ರಿಪೇರಿ ಮಾಡೋಕೆ ಅ ಕೆಲಸ ಮಾಡೋರು ಬಹಳ ಜನ ಇದ್ದಾರೆ. ರಾಜ್ಯದಲ್ಲಿ ಒಳ್ಳೆ ಆಡಳಿತ ಕೊಡಲಿ ಅಂತ 138 ಸೀಟು ನೀಡಿದ್ದಾರೆ. ನಟರು, ಜನರ ನೆಟ್ಟು-ಬೋಲ್ಡ್ ರಿಪೇರಿ ಮಾಡಲು ಇವರಿಗೆ ಅಧಿಕಾರ ಕೊಟ್ಟಿಲ್ಲ. ಡಿಕೆಶಿ ಮಾತನ್ನ ಯಾರು ಸಿರಿಯಸ್ ಆಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಡಿಕೆ ಶಿವಕುಮಾರ್ ಒಂದು ವಾರದಿಂದ ಅವರ ಮಾತು ಕೇಳಿದರೆ ಅವರು ಭೂಮಿ ಮೇಲೆ ಇಲ್ಲ. ಅವರ ಮಾತುಗಳಿಗೆ ಉತ್ತರ ಕೊಡದೇ ಸುಮ್ಮನೆ ಇರುವುದು ಉತ್ತಮ ಎನ್ನುವುದು ನನ್ನ ಅಭಿಪ್ರಾಯ ಎಂದು ತಿಳಿಸಿದರು.
ಇದನ್ನೂ ಓದಿ: ಕುಂಭಮೇಳದಲ್ಲಿ ನಾನು ಭಾಗಿಯಾದರೆ ತಪ್ಪೇನಿದೆ: ಸ್ವಪಕ್ಷದ ನಾಯಕರಿಗೆ ಡಿಕೆಶಿ ಟಾಂಗ್
ಶಿವಕುಮಾರ್ ಸದ್ಗುರು (Sadhguru Jaggi Vasudev) ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಅದು ಅವರವರ ಇಚ್ಚೆ. ಅವರ ಮನಸಿನ ಭಾವನೆ. ಅದಕ್ಕೆ ನಾವು ಟೀಕೆ ಮಾಡೋದು ಅನಾವಶ್ಯಕ. ಪ್ರತಿಯೊಬ್ಬರಿಗೂ ಅವರೇ ತೀರ್ಮಾನ ತೆಗೆದುಕೊಳ್ಳೋಕೆ ಅಂಬೇಡ್ಕರ್ ಸಂವಿಧಾನದಲ್ಲಿ ಅವಕಾಶ ಕೊಟ್ಟಿದ್ದಾರೆ. ಡಿಕೆಶಿ ಅಲ್ಲಿಗೆ ಹೋಗಿರೋದು ದೊಡ್ಡ ವಿಶೇಷ ಏನು ಕಾಣುತ್ತಿಲ್ಲ. ಅದಕ್ಕೆ ಮಹತ್ವ ನೀಡುವುದು ಬೇಡ ಎಂದರು.
ಡಿಕೆಶಿ ಬಿಜೆಪಿಗೆ ಬರುವುದಕ್ಕೆ ಬಿಜೆಪಿ ಅವರೇ ಸ್ವಾಗತ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ಮಾತಾಡಿದರೆ ನನಗೇನು ಸಂಬಂಧವಿದೆ ಎಂದರು.