ರಾಮನಗರ: ಸಚಿವ ಆರ್. ಅಶೋಕ್ (R Ashok) ಜೊತೆಯಲ್ಲಿ ಇರುವವರೆಲ್ಲ ಕುಂಟ್ಕೊಂಡೆ ಓಡಾಡುತ್ತಾರೆ ಎಂದು ಸಂಸದ ಡಿ.ಕೆ ಸುರೇಶ್ (DK Suresh) ತಿರುಗೇಟು ನೀಡಿದರು.
ಡಿಕೆಶಿ ಹಾಗೂ ಹೆಚ್‌ಡಿಕೆ ಈಗ ಜೋಡೆತ್ತಲ್ಲಾ, ಕುಂಟೆತ್ತು ಎಂಬ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿ, ಇಂದು ರಾಮನಗರದಲ್ಲಿ (Ramnagar) ಮಾಧ್ಯಮದವರೊಂದಿಗೆ ಮಾತನಾಡಿದರು. ಅಶೋಕ್ ಜೊತೆಯಲ್ಲಿ ಇರುವವರೆಲ್ಲ ಕುಂಟುಕೊಂಡೇ ಓಡಾಡುತ್ತಾರೆ. ಬಿಜೆಪಿ (BJP) ಎಲ್ಲಾ ವಿಚಾರದಲ್ಲೂ ಕುಂಟುಕೊಂಡು ಬಂದಿದೆ. ಮಾಧ್ಯಮದಲ್ಲಿ ತೋರಿಸಿದ್ದೀರಾ ಯಾರ ಯಾರ ಸಿಡಿ ಬಂತು ಅಂತಾ. ಯಾರು ಲಂಚದಲ್ಲಿ ಸಿಕ್ಕಿಹಾಕಿಕೊಂಡು ರಾಜೀನಾಮೆ ಕೊಟ್ಟರು. ಬಿಜೆಪಿ ಕಾರ್ಯಕರ್ತರ ಆತ್ಮಹತ್ಯೆಗೆ ಯಾರು ಕಾರಣ? ಸುಮಾರು ಎಂಟು ಕೋಟಿ ಹಣ ವಿಚಾರದಲ್ಲಿ ಅವರೇ ಕುಂಟೆತ್ತು ಎಂದು ಕಿಡಿಕಾರಿದರು.
ಜಿಲ್ಲೆಯ ಅಭಿವೃದ್ಧಿ ಮಾಡದ ಇವರು ಜಗಳಕ್ಕೆ ಮಾತ್ರ ಸೀಮಿತ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಆರ್. ಅಶೋಕ್ ಅವರಿಗೆ ಅಭಿವೃದ್ಧಿ ಅಂದ್ರೆ ಗೊತ್ತಿದ್ಯಾ ಕೇಳಿ. ತಾಲೂಕು ಕಚೇರಿ, ಸರ್ವೇ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಯುತ್ತಿರುವ ಲಂಚವನ್ನು ತಡೆಯಲು ಹೇಳಿ. ಆ ಮೇಲೆ ಅಭಿವೃದ್ಧಿ ಬಗ್ಗೆ ಅಶೋಕ್ ಮಾತಾಡಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ಪತ್ರ ಬರೆದ 8 ಪಕ್ಷಗಳು – ಏನಿದೆ ಅದರಲ್ಲಿ? – ಪತ್ರ ಬರೆದವರಿಂದ ದೂರ ಉಳಿದ ಕಾಂಗ್ರೆಸ್
ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಿರುದ್ಯೋಗಿಗಳಾಗಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಟಾಂಗ್ ನೀಡಿದ ಅವರು, ಬಿಜೆಪಿ ಅವರಿಗೆ ಭಯ ಇದೆ. ದೇಶದ ಹಾಗೂ ರಾಜ್ಯದ ಜನರನ್ನು ನಿರುದ್ಯೋಗಿಗಳಾಗಿ ಮಾಡಿದ್ದೇವೆ. ಯುವಕರು ಬುದ್ಧಿವಂತರಾಗಿದ್ದಾರೆ. ನೀವು ಹಾಕಿದ ನಿರುದ್ಯೋಗ ಟೋಪಿಯನ್ನು ಯುವಕರು ನಿಮಗೆ ಹಾಕುತ್ತಾರೆ ಎಂದರು. ಇದನ್ನೂ ಓದಿ: ಇಮ್ರಾನ್ ಖಾನ್ ಅರೆಸ್ಟ್ ಮಾಡಲು ಮನೆಗೆ ಹೋದ ಪೊಲೀಸರು – ಎಷ್ಟು ಹುಡುಕಿದ್ರೂ ಪತ್ತೆಯಾಗ್ಲಿಲ್ಲ ಪಾಕ್ ಮಾಜಿ ಪಿಎಂ