ಮಡಿಕೇರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಿದ್ದರೂ ನಮ್ಮ ನಾಯಕರೇ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
Advertisement
ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗುವುದರ ಬಗ್ಗೆ ನನಗೂ ಸರಿಯಾಗಿ ಗೊತ್ತಿಲ್ಲ. ಸದ್ಯಕ್ಕೆ ಸಿದ್ದರಾಮಯ್ಯ ಅವರು ಸಿಎಲ್‍ಪಿ ನಾಯಕರಿದ್ದಾರೆ. ಸಿದ್ದರಾಮಯ್ಯ ಅವರು ಎಲ್ಲಿದ್ದರೂ ನಮ್ಮ ನಾಯಕರೇ. ಪ್ರಸ್ತುತ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರ ರಾಜಕಾರಣದಲ್ಲಿದ್ದಾರೆ. ಅಗತ್ಯವಿದ್ದಾಗ ರಾಜ್ಯ ರಾಜಕಾರಣಕ್ಕೆ ಸಲಹೆಗಳನ್ನು ನೀಡಿದ್ದಾರೆ. ಈ ಹಿಂದೆ ಆಸ್ಕರ್ ಫರ್ನಾಂಡಿಸ್, ವೀರಪ್ಪ ಮೊಯ್ಲಿ ಹೀಗೆ ರಾಜ್ಯದ ಹಲವರು ರಾಷ್ಟ್ರ ರಾಜಕಾರಣದಲ್ಲಿ ಇದ್ದರು. ರಾಷ್ಟ್ರ ರಾಜಕಾರಣ ರಾಜ್ಯಕ್ಕೇನು ಹೊಸದಲ್ಲ. ರಾಷ್ಟ್ರ ರಾಜಕಾರಣಕ್ಕೆ ಬೇಕಾದರೆ ವರಿಷ್ಟರಾದ ಸೋನಿಯಾಜಿ ಇದ್ದಾರೆ. ಅವರು ನಿರ್ಧರಿಸುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಇಬ್ಬರು ಬಿಜೆಪಿ ಶಾಸಕರು ಬುಡಾ ಅಧ್ಯಕ್ಷರಿಗೆ ಸಹಕಾರ ಕೊಡುತ್ತಿಲ್ಲ: ಸತೀಶ್ ಜಾರಕಿಹೊಳಿ
Advertisement
Advertisement
ಇನ್ನೂ ಬಿಎಸ್‍ವೈಗೆ ಸೋನಿಯಾಗಾಂಧಿ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡಿಸಿದ್ದಾರೆ ಎನ್ನುವ ಎಚ್‍ಡಿಕೆ ಆರೋಪ ಬಗ್ಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಹಿರಿಯ ರಾಜಕಾರಣಿಯಾಗಿದ್ದಾರೆ. ಅವರಿಗೆ ಬಿಜೆಪಿ ಮೂಲಗಳಿಂದ ಮಾಹಿತಿ ಸಿಕ್ಕಿರಬಹುದೇನೋ. ಆದರೆ ಕುಮಾರಸ್ವಾಮಿ ಅವರ ಮಾತನ್ನು ನಂಬಿ ನಾನು ಪ್ರತಿಕ್ರಿಯಿಸಲಾರೆ. ನಾವು ಸದ್ಯ ವಿರೋಧ ಪಕ್ಷದ ಸ್ಥಾನದಲ್ಲಿದ್ದೇವೆ. ಜೆಡಿಎಸ್‍ನವರು ಬಿಜೆಪಿಯೊಂದಿಗೆ ಅಧಿಕಾರದ ಹೊಂದಾಣಿಕೆಯ ಹೊಸ್ತಿಲಿನಲ್ಲಿದ್ದಾರೆ. ಈಗ ಅವರಿಗೆ ಮಾಹಿತಿ ಇರಬಹುದು ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಬಿಡಿ ಹೇಳಿಕೆಗೆ ಶಿವರಾಜ್ ಪಾಟೀಲ್ ಸ್ಪಷ್ಟನೆ
Advertisement