ಬೆಂಗಳೂರು: ಸೆಪ್ಟೆಂಬರ್ 17 ಕ್ಕೆ ಮಾಜಿ ಸಚಿವ ಡಿಕೆ ಶಿವಕುಮಾರ್ ಇಡಿ ಕಸ್ಟಡಿ ಮುಗಿಯುವ ಹಿನ್ನೆಲೆ, ಅಂದು ದೆಹಲಿಗೆ ಬಾರದಂತೆ ಡಿಕೆಶಿ ಬೆಂಬಲಿಗರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಪತ್ರದ ಮೂಲಕ ಸಂಸದ ಡಿ ಕೆ ಸುರೇಶ್ ಮನವಿ ಮಾಡಿಕೊಂಡಿದ್ದಾರೆ.
ಈ ಹಿಂದೆ ಕೋರ್ಟ್ ಕಲಾಪದ ವೇಳೆ ಡಿ.ಕೆ ಶಿವಕುಮಾರ್ ಬೆಂಬಲಿಗರು ಗದ್ದಲ ಮಾಡಿದ್ದರು. ಈ ವಿಚಾರಕ್ಕೆ ಬೆಂಬಲಿಗರ ವರ್ತನೆ ಕಂಡು ನ್ಯಾಯಾಧೀಶರು ಗರಂ ಆಗಿದ್ದರು. ಅದ್ದರಿಂದ ಈ ಸಲ ಕೋರ್ಟ್ ಕಲಾಪದ ವೇಳೆ ಈ ರೀತಿಯ ಘಟನೆ ನಡೆಯಬಾರದು ಎಂದು ಡಿಕೆ ಸುರೇಶ್ ಸೋದರನ ಪರವಾಗಿ ಈ ಮನವಿ ಮಾಡಿಕೊಂಡಿದ್ದಾರೆ.
Advertisement
Advertisement
Advertisement
ಈ ವಿಚಾರವಾಗಿ ಪತ್ರ ಬರೆದಿರುವ ಡಿಕೆ ಸುರೇಶ್, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಸೆಪ್ಟಂಬರ್ 17ರ ಗುರುವಾರ ಯಾರು ದೆಹಲಿಗೆ ಬಾರದಂತೆ ಡಿಕೆ. ಶಿವಕುಮಾರ್ ಅವರ ಪರವಾಗಿ ಕೋರಿಕೊಳ್ಳುತ್ತೇನೆ. ತುಂಬಾ ಜನ ಬೆಂಬಲಿಗರು ಬರುವುದರಿಂದ ಕೋರ್ಟ್ ಕಲಾಪದ ವೇಳೆ ಗದ್ದಲವಾಗುತ್ತದೆ. ಕೋರ್ಟ್‍ನಲ್ಲಿ ವಿಚಾರಣೆಗೆ ಯಾವ ತೊಂದರೆಯಾಗದೆ ಸುಗಮವಾಗಿ ಕಲಾಪ ನಡೆಯುವಂತೆ ನೋಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಅದ್ದರಿಂದ ನಾನು ನಿಮ್ಮಲ್ಲಿ ಕೋರಿಕೊಳ್ಳುತ್ತೇನೆ ಮತ್ತು ಎಲ್ಲರೂ ಇದಕ್ಕೆ ಬೆಂಬಲ ಸೂಚಿಸುತ್ತೀರಾ ಎಂದು ನಂಬಿದ್ದೇನೆ ಎಂದು ಪತ್ರ ಬರೆದಿದ್ದಾರೆ.