– ಸುಳ್ಳನ್ನ ನಿಜದ ತಲೆಯ ಮೇಲೆ ಹೊಡೆದಂತಿದೆ ಬಜೆಟ್
– ಇದೊಂದು ಜುಮ್ಲಾ ಬಜೆಟ್: ‘ಕೈ’ ಸಂಸದರ ವಾಗ್ದಾಳಿ
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಸುಳ್ಳನ್ನ ನಿಜದ ತಲೆಯ ಮೇಲೆ ಹೊಡೆದಂತಿದೆ. ಇದೊಂದು ಸುಳ್ಳು ಭರವಸೆಗಳ ಬಜೆಟ್ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಬಜೆಟ್ ಮಂಡನೆ ಬಳಿಕ ದೆಹಲಿಯಲ್ಲಿ ಮಾತನಾಡಿದ ಅವರು, ಉದ್ಯೋಗ ಸೃಷ್ಟಿ ಬಗ್ಗೆ ಮಾತನಾಡಿಲ್ಲ, ಜಿಡಿಪಿ 10 ಪರ್ಸೆಂಟ್ ಏರುತ್ತದೆ ಎನ್ನುತ್ತಾರೆ. ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಇದೊಂದು ಜುಮ್ಲಾ ಬಜೆಟ್ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಬೆಂಗ್ಳೂರಿಗೆ ಸಬ್ ಅರ್ಬನ್ ಯೋಜನೆ ನೀಡಿದಕ್ಕೆ ಸೀತಾರಾಮನ್‍ಗೆ ಧನ್ಯವಾದ: ಜ್ಯೋಶಿ
Advertisement
Advertisement
ಬೆಂಗಳೂರಿಗೆ ನೀಡಿರುವ ಸಬ್ ಅರ್ಬನ್ ರೈಲು ಕೂಡ ಮೂರು ವರ್ಷಗಳ ಹಿಂದಿನ ಘೋಷಣೆಯಾಗಿದ್ದು, ಅದಕ್ಕೆ ಅನುದಾನ ನೀಡಿದ್ದಾರೆ. ರಾಜ್ಯಕ್ಕೆ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ಬೆಲೆ ಏರಿಕೆ ಹೆಚ್ಚಿದೆ. ರೈತರ ಆದಾಯ ದ್ವಿಗುಣ ಅಂತಾರೆ. ಅದು ಹೇಗೆ ಎನ್ನುವುದು ಎಲ್ಲೂ ಹೇಳಿಲ್ಲ. ಕರ್ನಾಟಕ ದೃಷ್ಟಿಯಿಂದ ಹೇಳುವುದಾದರೆ ರಾಜ್ಯಕ್ಕೆ ಕೊಡೋ ಸಾಲ ಕೊಟ್ರೆ ಸಾಕು ಎಂದು ಟೀಕಿಸಿದರು. ಇದನ್ನೂ ಓದಿ: ಆದಾಯ ತೆರಿಗೆಯಲ್ಲಿ ಭಾರೀ ಕಡಿತ
Advertisement
ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಮಕ್ಕಳು ಪಾಠ ಒಪ್ಪಿಸುವ ರೀತಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ್ದಾರೆ. ಬಜೆಟ್‍ನಲ್ಲಿ ಹೊಸತನ ಯಾವುದು ಇಲ್ಲ. ಮೂರು ವರ್ಷದಿಂದ ಹೇಳಿದ್ದನ್ನೇ ಮತ್ತೆ ಹೇಳುತ್ತಿದ್ದಾರೆ. ಇದೊಂದು ಜುಮ್ಲಾ ಬಜೆಟ್ ಎಂದರು.
Advertisement
ಏರ್ ಇಂಡಿಯಾ ಮಾರಲು ಹೊರಟಿರುವ ಸರ್ಕಾರ ಈಗ ಎಲ್‍ಐಸಿಯನ್ನು ಮಾರಾಲು ನಿರ್ಧರಿಸಿದೆ. ಎಲ್ಲವನ್ನೂ ಖಾಸಗೀಕರಣ ಮಾಡಲು ಕೇಂದ್ರ ಮುಂದಾಗಿದ್ದು ಜನರು ಹೆಚ್ಚು ನಂಬಿದ್ದ ಎಲ್‍ಐಸಿಯ ಶೇರು ಮಾರಾಟ ಸರಿಯಲ್ಲ ಎಂದು ರಾಜ್ಯಸಭಾ ಸಂಸದ ಜಿ.ಸಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.