ಬೆಂಗಳೂರು: ಕೆಲವೊಂದು ರಾಜಕೀಯ ಬದಲಾವಣೆಗಳು ಹಾಗೂ ಒಳ ಜಗಳ, ಬೇರೆ ಪಕ್ಷಕ್ಕೆ ವಲಸೆ ಹೋದದ್ದು, ಇದೆಲ್ಲಾ ಕಾಂಗ್ರೆಸ್‍ಗೆ ದೊಡ್ಡ ಹೊಡೆತ ಕೊಟ್ಟಿದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕನಿಷ್ಟ ಎರಡು ರಾಜ್ಯಗಳಲ್ಲಿ ಆದರೂ ಅಧಿಕಾರ ಹಿಡಿಯುತ್ತೇವೆ ಅಂದುಕೊಂಡಿದ್ದೆವು. ಆದರೆ ಆ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಸಿಗಲಿಲ್ಲ. ಆದರೂ ಎರಡು ರಾಜ್ಯದಲ್ಲಿ ಅತಂತ್ರ ಫಲಿತಾಂಶ ಇದೆ. ಆದರೆ, ಅಲ್ಲಿ ಅಧಿಕಾರ ಹಿಡಿಯಬೇಕು ಅಂದರೆ ಹಣ ಬಲಬೇಕು. ರಾಜಕೀಯದಲ್ಲಿ ಈಗ ಹಣ ಬಲದ ಪ್ರಯೋಗ ನಡೆದಿದೆ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನೂರಾರು ವರ್ಷಗಳ ಇತಿಹಾಸವಿರೋ ಕಾಂಗ್ರೆಸ್ ಜ್ಞಾನೋದಯ ಮಾಡಿಕೊಳ್ಳುವ ಫಲಿತಾಂಶ ಇದಾಗಿದೆ: ಎಚ್‍ಡಿಕೆ
Advertisement
Advertisement
ಇನ್ನು ಯುಪಿಯಲ್ಲಿ ಐಟಿ, ಇಡಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದೆಲ್ಲದರ ಕಾರಣದಿಂದ ಕಾಂಗ್ರೆಸ್ ಹಿನ್ನಡೆಯನ್ನು ಅನುಭವಿಸಿದೆ. ಉತ್ತರ ಭಾರತದ ಚುನಾವಣೆಯೇ ಬೇರೆ, ದಕ್ಷಿಣ ಭಾರತದ ಚುನಾವಣೆಯೇ ಬೇರೆಯಾಗಿದೆ. ದಕ್ಷಿಣ ಭಾರತದಲ್ಲಿ ಮತ್ತೆ ಅಧಿಕಾರಕ್ಕೆ ತರುತ್ತೇವೆ. ಈ ಚುನಾವಣೆ ಫಲಿತಾಂಶ ದಕ್ಷಿಣ ಭಾರತದಲ್ಲಿ ಪ್ರಭಾವ ಬೀರೋದಿಲ್ಲ ಎಂದು ಅಭಿಮತ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಾದಯಾತ್ರೆ ನಿಲ್ಲಿಸಿ ತೀರ್ಥಯಾತ್ರೆ ಮಾಡಿ – ಕಾಂಗ್ರೆಸ್‍ಗೆ ಆರ್.ಅಶೋಕ್ ಸಲಹೆ