ರಾಮನಗರ: ಕರ್ನಾಟಕದಲ್ಲಿ ಕಾಂಗ್ರೆಸ್ ಕುಗ್ಗಿದೆ ಎನ್ನೋದು ಸುಳ್ಳು. ಕರ್ನಾಟಕದಲ್ಲಿ ಕಾಂಗ್ರೆಸ್ ಸದೃಢವಾಗಿದೆ. ನಮ್ಮಲ್ಲಿ ಬಿಜೆಪಿ ಗೆಲುವು ಪರಿಣಾಮ ಬೀರಲ್ಲ. ಮತ್ತೆ ಎದ್ದು ಬರುವ ಸಾಮರ್ಥ್ಯ ನಮಗಿದೆ ಎಂದು ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿರುವ ಕುರಿತಾಗಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ರಾಮನಗರದ (Ramanagara) ವಿಜಯಪುರ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಜನ ಕಾಂಗ್ರೆಸ್ ಮೇಲಿನ ವಿಶ್ವಾಸ ಕಡಿಮೆ ಮಾಡಿದ್ದಾರೆ. ಇದರ ಬಗ್ಗೆ ಪಕ್ಷದ ನಾಯಕರು ಚರ್ಚೆ ಮಾಡುತ್ತಾರೆ. ಚುನಾವಣೆಯಲ್ಲಿ ಸೋಲು – ಗೆಲುವು ಸಾಧ್ಯವಾಗಿದ್ದು, ಎಲ್ಲಾ ಚುನಾವಣೆಗಳು ಒಂದೇ ರೀತಿ ಇರುವುದಿಲ್ಲ. ಪಂಜಾಬ್‍ನಲ್ಲಿ ನಮ್ಮ ಪಕ್ಷದಲ್ಲಿ ಗೊಂದಲ ಉಂಟಾಯಿತು. ಸಿಎಂ ಆಗಿದ್ದವರು ಬಿಜೆಪಿಗೆ ಹೋದ್ರು, ಇದೆಲ್ಲವೂ ಸಮಸ್ಯೆ ಆಗಿತ್ತು ಎಂದು ಚುನಾವಣೆಯಲ್ಲಿ ಸೋಲಲು ಕಾರಣವಾಗಿರುವ ಅಂಶಗಳ ಕುರಿತಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ: ಉಕ್ರೇನ್ ಅಧ್ಯಕ್ಷ
ಕರ್ನಾಟಕದಲ್ಲಿ ಕಾಂಗ್ರೆಸ್ ಕುಗ್ಗಿದೆ ಎನ್ನೋದು ಸುಳ್ಳು. ಕರ್ನಾಟಕದಲ್ಲಿ ಕಾಂಗ್ರೆಸ್ ಸದೃಢವಾಗಿದೆ. ನಮ್ಮಲ್ಲಿ ಬಿಜೆಪಿ ಗೆಲುವು ಪರಿಣಾಮ ಬೀರಲ್ಲ. ಮತ್ತೆ ಎದ್ದು ಬರುವ ಸಾಮರ್ಥ್ಯ ನಮಗಿದೆ. ಯಾರಿಗೂ ಆತಂಕ ಬೇಡ ಎಂದು ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಜನ ಬಿಜೆಪಿ ವಿರುದ್ಧ ಬೇಸತ್ತಿದ್ದಾರೆ. ಮಾಧ್ಯಮಗಳು ವಸ್ತುಸ್ಥಿತಿಯನ್ನು ತೋರಿಸಬೇಕು. ಐಟಿ, ಇಡಿ, ಸಿಬಿಐ ವಿಚಾರಗಳ ಫಲಿತಾಂಶ ಇದಾಗಿದೆ. ಎಲ್ಲದಕ್ಕೂ ಅಂತ್ಯ ಇದೇ, ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ. ಚಂದ್ರ ಹುಟ್ಟುತ್ತಾನೆ, ಮುಳುಗುತ್ತಾನೆ. ಕಾಂಗ್ರೆಸ್ ನಾಯಕತ್ವ ಬದಲಾವಣೆ ವಿಚಾರ ಇದ್ದರೆ ನೀವೇ ತೋರಿಸುತ್ತೀರಿ, ನೋಡೋಣ. ಹಿಂದೆ ಒಂದು, ಎರಡು ಸೀಟ್ ಗೆದ್ದಿದ್ದವರು ಇವತ್ತು ದೇಶ ಆಳುತ್ತಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದು ಕಿಡಿಕಾರಿದ್ದಾರೆ.