– ಐಶ್ವರ್ಯ ಗೌಡ ವಂಚನೆ ಪ್ರಕರಣ ಸಂಬಂಧ ದೂರು ಕೊಡಲು ನಿರ್ಧಾರ
ಬೆಂಗಳೂರು: ಡಿಕೆ ಸುರೇಶ್ (DK Suresh) ತಂಗಿ ಎಂದು ಹೇಳಿ ಐಶರ್ಯಾ ಗೌಡ ವಂಚನೆ ಪ್ರಕರಣ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲು ಮಾಜಿ ಸಂಸದ ಡಿಕೆ ಸುರೇಶ್ ನಿರ್ಧರಿಸಿದ್ದಾರೆ.
Advertisement
ಈ ಕುರಿತು ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ನನ್ನ ಹೆಸರು ದುರ್ಬಳಕೆ ಆಗಿದೆ. ನಮಗೆ ಇರೋದು ಒಬ್ಬಳೇ ತಂಗಿ. ನಮ್ಮ ಅಣ್ಣಾನೆ ಬೇಜಾರು ಮಾಡಿಕೊಂಡಿದ್ದಾನಂತೆ. ನನಗೆ ಗೊತ್ತಿಲ್ಲದೆ ಇವನಿಗೆ ಇನ್ನೊಬ್ಬಳು ತಂಗಿ ಯಾರು ಅಂತ ಎಂದು ಡಿಕೆ ಸುರೇಶ್ ಮುಗುಳುನಕ್ಕರು. ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಎಂ.ಜಿ ರಸ್ತೆಯಿಂದ ಹೆಚ್ಚುವರಿ ಬಸ್ ಸಂಚಾರ – ಮುಂಜಾನೆ 2 ಗಂಟೆವರೆಗೂ ಸಾರಿಗೆ ಲಭ್ಯ
Advertisement
ನನ್ನ ಹೆಸರು ಬಳಕೆ ಮಾಡಿದ್ರೆ ಕ್ರಮ ತಗೊಳ್ಳಿ ಅಂತ ಪೊಲೀಸರಿಗೆ ಹೇಳ್ತೀನಿ, ಪೊಲೀಸರಿಗೆ ದೂರು ಕೊಡ್ತೀನಿ ಅಂತಾ ತಿಳಿಸಿದ್ರು. ಒಂದು ಕಾರ್ಯಕ್ರಮಕ್ಕೆ ಕರೆದಿದ್ದರು. ಆ ಕಾರ್ಯಕ್ರಮಕ್ಕೆ ಹೋಗಿದ್ದೆ, ಇನ್ನೊಂದು ಕಾರ್ಯಕ್ರಮಕ್ಕೆ ಕರೆದಿದ್ದರು ಆದ್ರೆ ನಾನು ಹೋಗಿಲ್ಲ ಅಂದ್ರು. ಇದನ್ನೂ ಓದಿ: ಮನಮೋಹನ್ ಸಿಂಗ್ ಅಂತ್ಯಕ್ರಿಯೆ ವಿಚಾರದಲ್ಲಿ ಕೆಟ್ಟ ರಾಜಕೀಯ ಮಾಡ್ಬೇಡಿ – ರಾಹುಲ್‌ಗೆ ಬಿಜೆಪಿ ತಿರುಗೇಟು
Advertisement
Advertisement
ಪೊಲೀಸ್ ಕಮಿಷನರ್‌ಗೆ ಎರಡು ಮೂರು ದಿನದಲ್ಲಿ ಪತ್ರ ಬರೆಯಲಿದ್ದೇನೆ. ಬೆಳ್ಳಿ ಗದೆ ನಾವು ಮನೆಗೆ ತರಲ್ಲ, ಅಲ್ಲೆ ಬೆಳ್ಳಿ ಗದೆಯನ್ನ ಕೊಟ್ಟು ಬಂದಿದ್ದೇನೆ. ನಾನು ನಮ್ಮ ಅಣ್ಣಾ ಯಾವುದನ್ನೂ ಮನೆಗೆ ತರಲ್ಲ. ಪೊಲೀಸ್ ಕಮೀಷನರ್‌ಗೆ ದೂರು ಕೊಡೋಕೆ ಡ್ರಾಫ್ಟ್ ಸಿದ್ದಪಡಿಸಿದ್ದೇನೆ. ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ 3-4 ದಿನದಲ್ಲಿ ದೂರು ನೀಡುತ್ತೇನೆ. ನಮಗೆ ಇರೋದು ಒಬ್ಬಳೇ ತಂಗಿ ನಮ್ಮ ಅಣ್ಣಾನೆ ಬೇಜಾರು ಮಾಡಿಕೊಂಡಿದ್ದಾನಂತೆ ನನಗೆ ಗೊತ್ತಿಲ್ಲದೆ ಇವನಿಗೆ ಇನ್ನೊಬ್ಬಳು ತಂಗಿ ಯಾರು ಅಂತ ಎಂದು ಡಿಕೆಸು ಮುಗುಳುನಕ್ಕರು.