ನಾವು ಯಾರಿಗೂ ವಿಷ ಹಾಕುವವರಲ್ಲ- ಹೆಚ್‍ಡಿಕೆಗೆ ಡಿಕೆ ಸುರೇಶ್ ತಿರುಗೇಟು

Public TV
1 Min Read
DK SURESH

ರಾಮನಗರ: ನಾನು ಯಾರಿಗೂ ವಿಷ ಹಾಕುವವರಲ್ಲ. ನಾನು ಎಲ್ಲರಿಗೂ ಒಳ್ಳೆಯದನ್ನ ಬಯಸುವವರು ಎಂದು ಹೇಳುವ ಮೂಲಕ ಹೆಚ್ ಡಿ ಕುಮಾರಸ್ವಾಮಿಗೆ (HD Kumaraswamy) ಸಂಸದ ಡಿ.ಕೆ ಸುರೇಶ್ (DK Suresh) ತಿರುಗೇಟು ನೀಡಿದ್ದಾರೆ.

ದೇವೇಗೌಡರ (HD Devegowda) ಬದುಕಿಗೆ ವಿಷ ಹಾಕಿದ್ದೇ ಡಿ.ಕೆ.ಬ್ರದರ್ಸ್ ಎಂಬ ಮಾಜಿ ಸಿಎಂ ವಾಗ್ದಾಳಿ ವಿಚಾರಕ್ಕೆ ಹಾರೋಹಳ್ಳಿಯಲ್ಲಿ ಪ್ರತಿಕ್ರಿಯಿಸಿ, ನಾವು ಯಾರಿಗೂ ವಿಷ ಹಾಕುವವರಲ್ಲ. ನಾವು ಎಲ್ಲರಿಗೂ ಒಳ್ಳೆಯದನ್ನ ಬಯಸುವವರು. ಅವರು ಏನು ಮಾತನಾಡಿದ್ದಾರೋ ಗೊತ್ತಿಲ್ಲ. ಅವರ ಆರೋಗ್ಯ ಚೆನ್ನಾಗಿಲ್ಲ ಅಂತ ಆಸ್ಪತ್ರೆಗೆ ಹೋಗ್ತಿದ್ದಾರೆ. ಆದಷ್ಟು ಬೇಗ ಆಸ್ಪತ್ರೆಯಿಂದ ಗುಣಮುಖರಾಗಿ ಬರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ ಎಂದರು.

DK SHIVAKUMAR HDK

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗಿಫ್ಟ್ ಹಂಚಿಕೆ ಆರೋಪದ ಕುರಿತು ಮಾತನಾಡಿ, ಈ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಕುಮಾರಸ್ವಾಮಿ ಏನೇನ್ ಹೇಳ್ತಾರೋ ಗೊತ್ತಿಲ್ಲ. ಅವರಿಗೆ ಆಪರೇಷನ್ ಆಗಬೇಕು ಅಂತ ಆಸ್ಪತ್ರೆಗೆ ಹೋಗ್ತಿದ್ದಾರೆ, ಒಳ್ಳೆದಾಗ್ಲಿ ಎಂದರು. ಇದನ್ನೂ ಓದಿ: ರಾಜಕೀಯವಾಗಿ ಡಿಕೆಶಿ ನನಗೆ ವಿಷ ಹಾಕಿದ್ದಾರೆ: ಹೆಚ್‍ಡಿಕೆ ಕಿಡಿ

ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಫ್ಯಾರ ಮಿಲಿಟರಿ ಕರೆಸಬೇಕೆಂಬ ವಿಚಾರ ಸಂಬಂಧ, ಯಾರನ್ನ ಬೇಕಾದ್ರೂ ಕರೆಸಲಿ. ಪ್ಯಾರ ಮಿಲಿಟರಿಯನ್ನೇ ಕರೆಸಲಿ, ಪ್ರಧಾನಿ ಮೋದಿಯನ್ನೇ ಕರೆಸಲಿ. ನಾನು ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ, ಕೂಲಿ ಕೇಳ್ತಿದ್ದೇನೆ ಎಂದು ಹೇಳಿದರು.

ನನಗೆ ಬಲವಂತ ಮಾಡುವ ಅವಶ್ಯಕತೆ ಇಲ್ಲ. ಅವರ ನಾಯಕರನ್ನ ಮೆಚ್ಚಿಸಲು ಸಿಪಿವೈ ಮಾಧ್ಯಮದ ಮುಂದೆ ಹೇಳ್ತಾರೆ. ನಾನು ಮಾಧ್ಯಮದ ಮುಂದೆ ಹೇಳುವ ಅವಶ್ಯಕತೆಯೂ ಇಲ್ಲ ಎಂಬುದಾಗಿ ಬಲವಂತವಾಗಿ ಕಾರ್ಯಕರ್ತರನ್ನ ಸೇರ್ಪಡೆ ಮಾಡ್ತಿದ್ದಾರೆಂಬ ಸಿಪಿವೈ ಆರೋಪಕ್ಕೆ ಟಾಂಗ್ ಕೊಟ್ಟರು.

ಜೆಡಿಎಸ್‍ಗೆ ಶಾಕ್: ರಾಮನಗರದಲ್ಲಿ ಜೆಡಿಎಸ್ ಗೆ ಸಂಸದ ಡಿ.ಕೆ ಸುರೇಶ್ ಶಾಕ್ ಕೊಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದೆ. ಹಾರೋಹಳ್ಳಿ ಜೆಡಿಎಸ್ ಅಧ್ಯಕ್ಷ ಮಲ್ಲಪ್ಪ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ. ಜೊತೆಗೆ ಹಾರೋಹಳ್ಳಿ ಭಾಗದ ಸುಮಾರು 30ಕ್ಕೂ ಹೆಚ್ಚು ಜನ ಜೆಡಿಎಸ್ ಮುಖಂಡರು, ಕಾರ್ಯಕರ್ತರು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.

Share This Article