ಬೆಂಗಳೂರು: ಮುಂಬರುವ ಯುಗಾದಿಗೆ ಸರ್ಕಾರ ಉಳಿಯುತ್ತೋ ಉರುಳುತ್ತೋ ಗೊತ್ತಿಲ್ಲ ಎಂಬ ಗೊಂದಲದ ಹೇಳಿಕೆಯನ್ನು ಸಂಸದ ಡಿಕೆ ಸುರೇಶ್ ಕಾರ್ಯಕರ್ತರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.
ಬೆಂಗಳೂರು ಹೊರವಲಯ ಬನ್ನೇರುಘಟ್ಟ ಸಮೀಪದ ಮಂಟಪ ಗ್ರಾಮ ಪಂಚಾಯತ್ ಸಭೆಯಲ್ಲಿ ಮಾತನಾಡಿದ ಸಂಸದ ಡಿಕೆ ಸುರೇಶ್, ಮುಂದಿನ ಲೋಕಸಭಾ ಚುನಾವಣೆಗೆ ಎದುರಾಳಿ ಸ್ಪರ್ಧಿ ಆರ್ ಅಶೋಕ್ ಎಂದು ಯಾರೋ ಕೇಳಿದ್ದರು. ಆರ್. ಅಶೋಕ್ ಗೆ ಏಕೆ ಕಾಯೋದು ನರೇಂದ್ರ ಮೋದಿಯವರನ್ನೇ ಮೀಟ್ ಮಾಡುತ್ತೇನೆ. ಅವರೇ ಎದುರಾಳಿ ಅಭ್ಯರ್ಥಿ ಆದರೆ ಒಳ್ಳೆಯದು ಎಂದು ವ್ಯಂಗ್ಯವಾಡಿದರು.
Advertisement
Advertisement
ಬಿಜೆಪಿ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿಯ ಆನೇಕರು ಹೇಳುತ್ತಿದ್ದರು ಹೊಸ ವರ್ಷಕ್ಕೆ ಸರ್ಕಾರ ಬೀಳುತ್ತೆ, ಸಂಕ್ರಾಂತಿಗೆ ಬೀಳುತ್ತೆ ಎಂದು. ನೋಡೋಣ ಮುಂಬರುವ ಯುಗಾದಿಗೆ ಸರ್ಕಾರ ಇರುತ್ತೋ ಬಿಡುತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಈಗ ಸರ್ಕಾರ ಸುಭದ್ರವಾಗಿದೆ. ಮುಂದಿನ ಲೋಕಸಭಾ ಚುನಾವಣೆಗೆ ಕಾರ್ಯಕರ್ತರು ತಯಾರಾಗಿ ಎಂದು ತಿಳಿಸಿದ್ದಾರೆ.
Advertisement
ಪ್ರತಾಪ್ ಸಿಂಹ ಹೇಳಿದ್ದೇನು?
ಜಗತ್ತಿನಲ್ಲಿ ಒಳ್ಳೆಯ ಬದಲಾವಣೆಗಳು ಆಗಬೇಕಿದೆ. ಚುನಾವಣೆಯಲ್ಲಿ ಅಲ್ಪ ಮತಗಳ ಹಿನ್ನಡೆಯಲ್ಲಿ ಸರ್ಕಾರ ರಚಿಸುವಲ್ಲಿ ನಾವು ವಿಫಲರಾಗಿದ್ದೇವೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವುದು ಖಚಿತ, ಸಂಕ್ರಾಂತಿ ಅಲ್ಲದಿದ್ದರೂ, ಯುಗಾದಿಯಾದ್ರೂ ಆಗ್ತಾರೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಈ ಹಿಂದೆ ಹೇಳಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv