ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಅವರು ತೀವ್ರ ಜ್ವರದಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರು ದೆಹಲಿಯ (Delhi) ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಡಿ.ಕೆ ಶಿವಕುಮಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ನಿನ್ನೆಯೂ ಜಾರಿ ನಿರ್ದೇಶನಾಲಯಕ್ಕೆ(ED) ಕೆಮ್ಮುತ್ತಲೇ ವಿಚಾರಣೆಗೆ ಹಾಜರಾಗಿದ್ದರು. ಆದಾಯ ತೆರಿಗೆ ಇಲಾಖೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಎಪಿಜೆ ಅಬ್ದುಲ್ ಕಲಂ ಮಾರ್ಗ್‍ನಲ್ಲಿರುವ ಕೇಂದ್ರ ಕಚೇರಿಯಲ್ಲಿ ರಾಜೀವ್ ಕುಮಾರ್ ನೇತೃತ್ವದ ಅಧಿಕಾರಗಳ ತಂಡದಿಂದ ಸೋಮವಾರ ಡಿಕೆಶಿ ವಿಚಾರಣೆ ನಡೆಯಿತು. ಇದನ್ನೂ ಓದಿ: ಕೆಮ್ಮುತ್ತಲೇ ವಿಚಾರಣೆಗೆ ಹಾಜರಾದ ಡಿ.ಕೆ ಶಿವಕುಮಾರ್
ಒಟ್ಟಿನಲ್ಲಿ ಇದೀಗ ಡಿಕೆಶಿಯವರು ಸತ್ಯೇಂದ್ರ ಜೈನ್ (Sathyendra Jain) ಮಾದರಿಯಲ್ಲಿ ಜೈಲು ಸೇರುತ್ತಾರಾ ಅನ್ನೋ ಅನುಮಾನವೊಂದು ಎದ್ದಿದೆ. ಎರಡು ವರ್ಷಗಳ ಹಿಂದೆ 2020ರಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಸಿಬಿಐ (CBI) ದಾಖಲಿಸಿರುವ ಪ್ರಕರಣದಲ್ಲಿ ಡಿಕೆಶಿ ವಿಚಾರಣೆ ನಡೆಸಿದೆ. ಸಿಬಿಐ ಎಫ್‍ಐಆರ್ (FIR) ಮೇಲೆ ಇಸಿಐಆರ್ ದಾಖಲಿಸಿರುವ ಇಡಿ, ಆದಾಯಕ್ಕೂ ಮೀರಿದ ಆಸ್ತಿಗಳಿಗೆ ಪ್ರಕರಣದಲ್ಲಿ ಮನಿ ಲಾಂಡರಿಂಗ್ ಅಂಶಗಳು ಹುಡುಕಿ ತನಿಖೆ ಮಾಡುವಂತೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಐಟಿ ದಾಖಲಿಸಿದ್ದ ಪ್ರಕರಣವನ್ನು ರದ್ದು ಮಾಡಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಇದನ್ನೂ ಓದಿ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ – ಇಡಿ ಬೆನ್ನಲ್ಲೇ ಡಿಕೆಶಿಗೆ ಐಟಿ ಶಾಕ್