ರಾಯಚೂರು: ನಟ ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಸ್ವಾಗತ ಕೋರಿದ್ದಾರೆ. ಉಪೇಂದ್ರ ಅವರು ಬಣ್ಣ ಹಚ್ಚಿ ಸಿನೆಮಾ ಮಾಡ್ತಿದ್ದರು. ಈಗ ಬಣ್ಣ ಹಚ್ಚದೆ ಸಿನೆಮಾದಂತಹ ರಾಜಕೀಯ ಮಾಡಲಿ ಎಂದು ಹೇಳಿದ್ದಾರೆ.
ರಾಯಚೂರಿನ ಶಕ್ತಿನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ಪ್ರತ್ಯೇಕ ಪಕ್ಷ ಕಟ್ಟುವುದಾದರೆ ಜ್ಯಾತ್ಯಾತೀತ ತತ್ವದ ಮೇಲೆ ಎಲ್ಲಾ ವರ್ಗದ ಜಾತಿಯವರನ್ನು ಸೇರಿಸಿಕೊಂಡು ಪಕ್ಷ ನಿರ್ಮಿಸಲಿ. ಜನರ ಸೇವೆ ಮಾಡಲು ಬರುತ್ತಿರುವ ಉಪೇಂದ್ರ ಅವರಿಗೆ ಮನಃಪೂರ್ವಕವಾಗಿ ಸ್ವಾಗತಿಸಿ ಶುಭ ಕೋರುವೆ ಎಂದು ಹೇಳಿದರು.
ನನ್ನ ವಿರುದ್ಧ ಎಸ್‍ಆರ್ ಹಿರೇಮಠ ಸೇರಿದಂತೆ ಯಾವುದೇ ರಾಜಕೀಯ ನಾಯಕರು ಯಾರಿಗೆ ದೂರು, ಅರ್ಜಿ ನೀಡಲಿ ಅಥವಾ ಹೋರಾಟ ಮಾಡಲಿ ನನ್ನದೇನು ಅಭ್ಯಂತರವಿಲ್ಲ. ಎಲ್ಲರಿಗೂ ಕಾನೂನು ಚೌಕಟ್ಟಿನಲ್ಲಿ ಉತ್ತರಿಸುವೆ ಅಂದ್ರು.
ಮುಂಬರುವ ಚಳಿಗಾಲ ಮತ್ತು ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಲಿದೆ. ಮಳೆ ಕೊರತೆಯಿಂದ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರಿದ್ದು, ವಿದ್ಯುತ್ ಸಮಸ್ಯೆಯಾಗದಂತೆ ಸಾವಿರ ಮೆಗಾವ್ಯಾಟ್ ಖರೀದಿಗೆ ನಿರ್ಧರಿಸಲಾಗಿದೆ ಅಂತ ಹೇಳಿದ್ರು.
https://www.youtube.com/watch?v=Wk2ZwYMCkXs