Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮುಸ್ಲಿಂ ಮೀಸಲಾತಿ ಸಮರ್ಥನೆ ಭರದಲ್ಲಿ ಡಿಕೆ ವಿವಾದ- ಸಂಸತ್‌ನ ಉಭಯ ಸದನಗಳಲ್ಲಿ ಕೋಲಾಹಲ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಮುಸ್ಲಿಂ ಮೀಸಲಾತಿ ಸಮರ್ಥನೆ ಭರದಲ್ಲಿ ಡಿಕೆ ವಿವಾದ- ಸಂಸತ್‌ನ ಉಭಯ ಸದನಗಳಲ್ಲಿ ಕೋಲಾಹಲ

Latest

ಮುಸ್ಲಿಂ ಮೀಸಲಾತಿ ಸಮರ್ಥನೆ ಭರದಲ್ಲಿ ಡಿಕೆ ವಿವಾದ- ಸಂಸತ್‌ನ ಉಭಯ ಸದನಗಳಲ್ಲಿ ಕೋಲಾಹಲ

Public TV
Last updated: March 24, 2025 7:33 pm
Public TV
Share
2 Min Read
DK Shivakumar muslims
SHARE

– ಡಿಕೆಶಿ ರಾಜೀನಾಮೆಗೆ ಬಿಜೆಪಿ ನಾಯಕರ ಆಗ್ರಹ

ನವದೆಹಲಿ: ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ (Muslims) 4% ರಷ್ಟು ಮೀಸಲಾತಿ ನೀಡುವುದನ್ನು ಸಮರ್ಥನೆ ನೀಡುವ ಭರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಾಹಿನಿಯೊಂದರ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆ ಈಗ ಬಿಜೆಪಿ (BJP) ಹೊಸ ಅಸ್ತ್ರ ಸಿಕ್ಕಿದಂತಾಗಿದೆ.

ಸಂವಿಧಾನದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಸಂವಿಧಾನವನ್ನೇ (Constitution) ಬದಲಾಯಿಸುವ ತೀರ್ಪುಗಳಿವೆ ಎಂದು ದೆಹಲಿ (Delhi) ಕಾರ್ಯಕ್ರಮದಲ್ಲಿ ಡಿಸಿಎಂ ಹೇಳಿದ್ದರು.

ಇದನ್ನೇ ಅಸ್ತ್ರ ಮಾಡಿಕೊಂಡ ಬಿಜೆಪಿ ಸಂಸತ್‌ನ ಉಭಯ ಸದನಗಳಲ್ಲಿ ಗದ್ದಲ ಎಬ್ಬಿಸಿತು. ಕಾಂಗ್ರೆಸ್ (Congress) ನಾಯಕರೊಬ್ಬರು ಮುಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನವನ್ನು ಬದಲಾಯಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಕಾಂಗ್ರೆಸ್ ಸಂವಿಧಾನವನ್ನು ತುಂಡು ತುಂಡಾಗಿ ಮಾಡುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ರಾಜ್ಯಸಭೆಯಲ್ಲಿ ಆರೋಪ ಮಾಡಿದರು. ನಡ್ಡಾ(JP Nadda) ಆರೋಪಕ್ಕೆ ಲೆಹರ್ ಸಿಂಗ್ ದನಿಗೂಡಿಸಿದರು. ಇದನ್ನೂ ಓದಿ: ಸಂಸದರ ಸಂಬಳ 24% ಏರಿಕೆ – ಈಗ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?

ನಡ್ಡಾ ಆರೋಪವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಖಂಡಿಸಿದರು. ಇದು ಗದ್ದಲಕ್ಕೆ ಕಾರಣವಾಯ್ತು. ಅತ್ತ ಲೋಕಸಭೆಯಲ್ಲೀ ಇದೇ ವಿಚಾರ ಪ್ರತಿಧ್ವನಿಸಿತು. ಹಿರಿಯ ಕಾಂಗ್ರೆಸ್ ನಾಯಕರೊಬ್ಬರು, ಮುಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನ ಬದಲಿಸ್ತೇವೆ ಎಂದಿದ್ದಾರೆ. ಇದನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಈ ಕೂಡಲೇ ಡಿ.ಕೆ ಶಿವಕುಮಾರ್ ರಾಜೀನಾಮೆ ಪಡೀಬೇಕು ಎಂದು ಕಾನೂನು ಸಚಿವ ಕಿರಣ್ ರಿಜಿಜು ಆಗ್ರಹಿಸಿದರು.

ತುಷ್ಟಿಕರಣ ನೀತಿಯ ಪರಾಕಾಷ್ಠೆ. ಮು’ಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನ ಬದಲಾಯಿಸುತ್ತಾರಂತೆ ಉಪಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ಅವರು.

ಮು’ಸ್ಲಿಮರ ತುಷ್ಟಿಕರಣಕ್ಕೆ, ಡಾ ಬಿ ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಾಯಿಸುವ ಮಟ್ಟಕ್ಕೂ ಇಳಿಯುತ್ತಾರೆ ಕಾಂಗ್ರೆಸ್ಸಿಗಳು ಅನ್ನುವುದು ನಮ್ಮ ದೇಶದ ದುರಂತ.

ನಾಚಿಕೆಯಾಗಬೇಕು… pic.twitter.com/5vgtOn5noN

— C T Ravi 🇮🇳 ಸಿ ಟಿ ರವಿ (@CTRavi_BJP) March 24, 2025

ಇದನ್ನು ಖಂಡಿಸಿದ ಶಶಿ ತರೂರ್, ಅದು ರಾಜ್ಯ ವಿಚಾರ. ಇಲ್ಲೇಕೆ ಪ್ರಸ್ತಾಪ ಮಾಡಬೇಕು ಎಂದು ಕೇಳಿದರು. ಸದನದ ಸಮಯವನ್ನು ಬಿಜೆಪಿಗರು ಹಾಳು ಮಾಡ್ತಿದ್ದಾರೆ ಅಂತಾ ಪ್ರಿಯಾಂಕಾ ವಾದ್ರಾ ಕಿಡಿಕಾರಿದರು.

ಗದ್ದಲದಿಂದಾಗಿ ಹಲವು ಬಾರಿ ಉಭಯ ಸದನಗಳು ಮುಂದೂಡಿಕೆ ಆದ್ವು. ಇದರ ಮಧ್ಯೆ, ರಿಜಿಜು ವಿರುದ್ಧ ಕಾಂಗ್ರೆಸ್‌ನ ಜೈರಾಮ್ ರಮೇಶ್ ಹಕ್ಕುಚ್ಯುತಿ ನೋಟಿಸ್‌  ನೀಡಿದ್ದಾರೆ.

 

 ಡಿಕೆ ಶಿವಕುಮಾರ್ ಹೇಳಿದ್ದೇನು?
ಮುಸ್ಲಿಮರಿಗೆ ಮೀಸಲಾತಿ ನೀಡುವ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ಮುಸ್ಲಿಮರು ಪಂಕ್ಚರ್ ಹಾಕೋರು ಎಂದು ಬಿಜೆಪಿಯ ಅನೇಕರು ಹೇಳಿದ್ದಾರೆ. ಸಮಾಜದ ಪ್ರತಿಯೊಂದು ವರ್ಗ ಮೇಲಕ್ಕೆತ್ತುವುದು ನಮ್ಮ ಜವಾಬ್ದಾರಿ. ನಾವು ಏನಾದರೂ ಪ್ರಾರಂಭಿಸಿದಾಗ ಎಲ್ಲರೂ ನ್ಯಾಯಾಲಯಕ್ಕೆ ಹೋಗುತ್ತಾರೆ ಎನ್ನುವುದು ಗೊತ್ತಿದೆ. ನ್ಯಾಯಾಲಯದಿಂದ ಯಾವ ತೀರ್ಮಾನ ಬರುತ್ತದೆಯೋ ನೋಡೋಣ. ಒಳ್ಳೆಯ ದಿನಕ್ಕಾಗಿ ಕಾಯೋಣ. ಬಹಳಷ್ಟು ಬದಲಾವಣೆಗಳಿವೆ. ಸಂವಿಧಾನ ಬದಲಾಗಲಿದೆ. ಸಂವಿಧಾನವನ್ನೇ ಬದಲಾಯಿಸುವ ತೀರ್ಪುಗಳಿವೆ.

TAGGED:congressDK Shivakumarmuslimsಕಾಂಗ್ರೆಸ್ಡಿಕೆ ಶಿವಕುಮಾರ್ಮೀಸಲಾತಿಮುಸ್ಲಿಮ್
Share This Article
Facebook Whatsapp Whatsapp Telegram

Cinema news

Hansika Motwani Sohael Khaturiya
ಉದ್ಯಮಿ‌ ಸೊಹೇಲ್‌ ಜೊತೆಗಿನ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯಹಾಡಿದ ‘ಬಿಂದಾಸ್‌’ ನಟಿ
Cinema Latest South cinema Top Stories
d53acfe5 1562 41db 9d81 d5b390041c73
ಪ್ರಿಯಕರ ಫರ್ಮಾನ್‌ ಖಾನ್‌ ಜೊತೆ ಕುಂಭಮೇಳದ ವೈರಲ್‌ ತಾರೆ ಮೊನಾಲಿಸಾ ಮದುವೆ
Cinema Latest Main Post
Monalisa Viral Video
ಮದುವೆಗೆ ಬಲವಂತ ಆರೋಪ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ‘ಕುಂಭಮೇಳ ಚೆಲುವೆ’ ಮೊನಾಲಿಸಾ
Cinema Latest Main Post
Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories

You Might Also Like

IndiGo Flight
Latest

ವಿಮಾನಯಾನಕ್ಕೂ ತಟ್ಟಿದ ಸಂಘರ್ಷದ ಎಫೆಕ್ಟ್‌ – ಇಂಡಿಗೋ ವಿಮಾನದಲ್ಲಿ ಇಂಧನ ಬೆಲೆ ನಿಗದಿ

Public TV
By Public TV
1 hour ago
WhatsApp Image 2026 03 13 at 9.50.51 PM
Districts

ಡಿಸಿಎಂ ಡಿಕೆಶಿ ಭೇಟಿಯಾದ ವೀರಪ್ಪನ್ ಪುತ್ರಿ ವಿದ್ಯಾರಾಣಿ

Public TV
By Public TV
1 hour ago
Auto LPG
Chamarajanagar

ಚಾ.ನಗರ: ಮಧ್ಯಪ್ರಾಚ್ಯ ಯುದ್ಧದ ಎಪೆಕ್ಟ್ – ಗ್ಯಾಸ್ ಇಲ್ಲದೇ ಬಂಕ್ ಕ್ಲೋಸ್

Public TV
By Public TV
2 hours ago
2 Indians Killed 10 Injured In Drone Strike In Oman
Latest

ಒಮಾನ್‌ನಲ್ಲಿ ಇರಾನ್ ಡ್ರೋನ್‌ ದಾಳಿ – ಇಬ್ಬರು ಭಾರತೀಯರು ಸಾವು, 11 ಮಂದಿಗೆ ಗಾಯ

Public TV
By Public TV
3 hours ago
Strait of Hormuz India Flagged Fuel Tanker
Latest

ಹಾರ್ಮುಜ್ ಪೂರ್ವದಿಂದ ಹೊರಟ ಭಾರತ ಧ್ವಜ ಹೊತ್ತ ಇಂಧನ ಟ್ಯಾಂಕರ್‌

Public TV
By Public TV
3 hours ago
byrati basavaraj release from jail
Bengaluru City

ಮಾಜಿ ಸಚಿವ ಬೈರತಿ ಬಸವರಾಜ್ ಜೈಲಿನಿಂದ ಬಿಡುಗಡೆ

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?