Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಬೊಮ್ಮಾಯಿಗೆ ಪತ್ರ ಬರೆದ ಡಿಕೆಶಿ

Public TV
Last updated: May 31, 2022 8:51 pm
Public TV
Share
2 Min Read
DK SHIVAKUMAR
SHARE

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.

CM Basavaraja Bommai

ಪತ್ರದಲ್ಲಿ ಏನಿದೆ?
ಪಠ್ಯ ಪುಸ್ತಕ ಸಮಿತಿಯು ಪ್ರಮುಖ ದಾರ್ಶನಿಕರ ಮತ್ತು ದೇಶಭಕ್ತರ ಬಗೆಗಿನ ಪಠ್ಯಗಳನ್ನು ಕೈ ಬಿಟ್ಟಿದೆ. ರಾಜ್ಯದ ಹೆಮ್ಮೆಯ ಸಾಹಿತಿಗಳ ಮತ್ತು ಬಹುತ್ವದ ಸಂಸ್ಕೃತಿಗೆ ಪೂರಕವಾದ ಲೇಖನಗಳನ್ನು ಕೈ ಬಿಟ್ಟಿದೆ. ಸಂಕುಚಿತವಾದವನ್ನು ಬೆಂಬಲಿಸುವ ಹಾಗೂ ಮತೀಯವಾದವನ್ನು ಪ್ರಚೋದಿಸುವ ವ್ಯಕ್ತಿಗಳ ಲೇಖನಗಳನ್ನು ಸೇರಿಸಲಾಗಿದೆ. ಈ ಕುರಿತಂತೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ ಎಂದಿದ್ದಾರೆ. ಇದನ್ನೂ ಓದಿ: ಕಣ್ಣು ಮಂಕಾಗ್ತಿದೆ, ಬೆರಳು ಅಲುಗಾಡ್ತಿದೆ – ಪುಟಿನ್ ಬದುಕಿರೋದು ಇನ್ನೂ ಮೂರೇ ವರ್ಷ!

TEXTBOOK

ಕನ್ನಡಿಗರು, ಹೆತ್ತವರು ಮತ್ತು ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. ಕನ್ನಡದ ಹೆಮ್ಮೆಯ ಮತ್ತು ಅತ್ಯಂತ ಗೌರವಾನ್ವಿತ ರಾಷ್ಟ್ರಕವಿಗಳಾದ ಕುವೆಂಪುರವರ ಬಗ್ಗೆ ಅತ್ಯಂತ ಕೀಳಾಗಿ ಅಪಮಾನ ಮಾಡಲಾಗಿದೆ. ನಾಡಗೀತೆಗೆ ಅವಮಾನ ಮತ್ತು ಧ್ವಜವನ್ನು ಅಪಹಾಸ್ಯ ಮಾಡಿರುವ ಸಮಿತಿಯ ಅಧ್ಯಕ್ಷರ ಬಗ್ಗೆ ಜನರು ರೊಚ್ಚಿಗೆದ್ದಿದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಜೆಡಿಎಸ್‍ಗೆ ಸಿದ್ದರಾಮಯ್ಯ ಚೆಕ್ – ಬಿಜೆಪಿಗೆ ಕುದುರುತ್ತಾ ಲಕ್?

kuvempu

ಸಮಿತಿಯ ಪಠ್ಯಪುಸ್ತಕಗಳಲ್ಲಿ ಬಾಬಾಸಾಹೇಬ ಅಂಬೇಡ್ಕರ್, ಬಸವಣ್ಣ, ಬುದ್ದ, ನಾರಾಯಣಗುರುಗಳು ಮತ್ತು ಸಾರಾ ಅಬೂಬಕರ್ ಅವರ ಪಾಠಗಳನ್ನು ತಿರುಚಲಾಗಿದೆ. ಇತಿಹಾಸಕ್ಕೆ ಕೋಮುದ್ವೇಷದ ಲೇಪ ಹಚ್ಚಲಾಗಿದೆ. ಶ್ರೀಮತಿ ಬಿ ಟಿ ಲಲಿತಾ ನಾಯಕ್‍ರವರ ಪದ್ಯವನ್ನು ಕಿತ್ತು ಹಾಕಲಾಗಿದೆ. ಕೋಮುವಾದ ಎಂದರೇನು? ಮುಸ್ಲಿಂ ಕೋಮುವಾದ ಎಂದು ಬಿಂಬಿಸಿದೆ. ಪ್ರಾದೇಶಿಕವಾದ ಎಂದರೆ ದೇಶದ್ರೋಹ ಅಂತ ಬಿಂಬಿಸಿದೆ ಎಂದಿದ್ದಾರೆ.

ambedkar 1 1

ಮಹಿಳೆಯರನ್ನು ಕೀಳಾಗಿ ಚಿತ್ರಿಸಿದ ಪಾಠ ಸೇರಿಸಲಾಗಿದೆ. ವಿದ್ಯಾ ರಂಗದ ಮೇಲೆ ಇತ್ತೀಚಿಗೆ ಅಸಂವಿಧಾನಿಕ ದಾಳಿ ಮತ್ತು ದಬ್ಬಾಳಿಕೆ ನಡೆಯುತ್ತಿದೆ. ಇದರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಮೌನ ಮತ್ತು ಬಹಿರಂಗವಾಗಿಯೇ ಮತೀಯ ದ್ವೇಷವನ್ನು ಹೊರಡುವವರನ್ನು ಸರ್ಕಾರ ನಿಗ್ರಹಿಸಿಲ್ಲ. ನಿಷ್ಕ್ರಿಯತೆಯಿಂದ ಕೆಲ ಸಾಹಿತಿಗಳು ಪುಸ್ತಕದಲ್ಲಿ ಅಳವಡಿಸಲು ನೀಡಿರುವ ಸಮ್ಮತಿಯನ್ನು ವಾಪಸು ಪಡೆದಿದ್ದಾರೆ. ಎಸ್ ಜಿ ಸಿದ್ದರಾಮಯ್ಯ, ಎಚ್ ಎಸ್ ರಾಘವೇಂದ್ರರಾವ್, ನಟರಾಜ ಬೂದಾಳು, ಚಂದ್ರಶೇಖರ್ ನಂಗ್ಲಿ, ಕೆ ಎಸ್ ಮಧುಸೂದನ್ ಸೇರಿದಂತೆ ಮುಂತಾದವರು ರಾಜ್ಯ ಸರ್ಕಾರದ ಸಮಿತಿಗೆ ರಾಜೀನಾಮೆ ಕೂಡ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

basavanna

ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವ ಈರಪ್ಪ ಕಂಬ್ಳಿ ಶ್ರೀ ಚಂದ್ರಶೇಖರ ತಾಳ್ಯ ಮುಂತಾದವರು. ತಮ್ಮ ಲೇಖನಗಳನ್ನು ಪಠ್ಯದಲ್ಲಿ ಪುಸ್ತಕದಲ್ಲಿ ಅಳವಡಿಸಲು ನೀಡಿರುವ ಸಮ್ಮತಿಯನ್ನು ವಾಪಸ್ ಪಡೆದಿದ್ದಾರೆ. ವಿದ್ಯಾ ರಂಗಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಈ ಆತಂಕದ ವಿದ್ಯಮಾನಗಳನ್ನು ತಾವು ಆದ್ಯತೆಯ ಮೇಲೆ ಪರಿಗಣಿಸಬೇಕು. ಪಠ್ಯಪುಸ್ತಕ ಪರಿಷ್ಕೃತ ಸಮಿತಿಯನ್ನು ತಕ್ಷಣದಿಂದಲೇ ರದ್ದುಗೊಳಿಸಬೇಕು. ಹೊಸ ಪಠ್ಯ ಪುಸ್ತಕಗಳನ್ನು ಹಿಂಪಡೆದು ಹಳೆಯ ಪಠ್ಯಪುಸ್ತಕಗಳನ್ನು ಮುಂದುವರಿಸಿ ವಾತಾವರಣವನ್ನು ತಿಳಿಗೊಳಿಸಬೇಕು. ಈ ವಿಚಾರವಾಗಿ ಎಲ್ಲ ಕಡೆಯಿಂದ ವ್ಯಾಪಕವಾದ ಆಕ್ರೋಶ ವ್ಯಕ್ತವಾಗುತ್ತಿದೆ ಎಂದಿದ್ದಾರೆ.

TAGGED:Basavaraj BommaibengaluruDK Shivakumarlettertext Bookಡಿಕೆ ಶಿವಕುಮಾರ್ಪಠ್ಯ ಪುಸ್ತಕಪತ್ರಬಸವರಾಜ ಬೊಮ್ಮಾಯಿಬೆಂಗಳೂರು
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Shivarajkumar steps into a father–daughter saga with DAD Movie Muhurtha Nandi Temple Mysuru Chamundi Hill 2
ಶಿವರಾಜ್‌ಕುಮಾರ್‌ ನಟನೆಯ ಡ್ಯಾಡ್ ಚಿತ್ರಕ್ಕೆ ಚಾಲನೆ
Cinema Latest Sandalwood Top Stories
Mahesh Babu Namrata Shirodkar
ಪತ್ನಿ ಜೊತೆ ಸ್ಟೈಲ್‌ ಆಗಿ ಕಾಣಿಸಿಕೊಂಡ ಮಹೇಶ್ ಬಾಬು
Cinema Latest South cinema Top Stories
Yo yo singh
ಒಂದೇ ತಿಂಗಳಲ್ಲಿ ಬರೋಬ್ಬರಿ 18 ಕೆಜಿ ತೂಕ ಇಳಿಸಿಕೊಂಡ ಹನಿ ಸಿಂಗ್
Cinema Latest Sandalwood Top Stories
vijayalakshmi
ಪರಪ್ಪನ ಅಗ್ರಹಾರ ಜೈಲಲ್ಲಿ ಗಂಟೆಗಟ್ಟಲೆ ಕಾದು ದರ್ಶನ್ ಭೇಟಿಯಾದ ವಿಜಯಲಕ್ಷ್ಮಿ
Cinema Latest Sandalwood Top Stories
Vishnuvardhan 3
ದಾದಾ ಫ್ಯಾನ್ಸ್‌ಗೆ ಶುಭ ಸುದ್ದಿ – ಬರುತ್ತಿದೆ ಹೊಸ ಸ್ಮಾರಕ
Cinema Latest Top Stories

You Might Also Like

Dog
Latest

ಬೀದಿ ನಾಯಿಗಳ ಜನನ ನಿಯಂತ್ರಣ ವಿಫಲವಾಗಿದ್ದೇಕೆ? – ಸಂತಾನಹರಣ ನಾಯಿಗಳಿಗೆ ಟ್ರ್ಯಾಕಿಂಗ್‌ಗೆ ಚಿಪ್‌ ಅಳವಡಿಸಬೇಕೆ?

Public TV
By Public TV
14 minutes ago
Udyog Sakhi
Latest

ಉದ್ಯಮ ಆರಂಭಿಸಲು ಆಸಕ್ತಿ ಇರುವ ಮಹಿಳೆಯರಿಗೆ ಗುಡ್ ನ್ಯೂಸ್!

Public TV
By Public TV
26 minutes ago
Former Team India bowler RP Singh visited Chamundi Hill Mysuru
Cricket

ಚಾಮುಂಡಿ ಬೆಟ್ಟಕ್ಕೆ ಟೀಂ ಇಂಡಿಯಾ ಮಾಜಿ ಬೌಲರ್‌ ಆರ್‌ಪಿ ಸಿಂಗ್‌ ಭೇಟಿ

Public TV
By Public TV
36 minutes ago
Dharwad Thinner Bottle Fire Father Dead
Crime

ಥಿನ್ನರ್ ಬಾಟಲಿ ಬಿದ್ದು ಬಾಲಕ ಸಾವನ್ನಪ್ಪಿದ ಪ್ರಕರಣ – ಗಂಭೀರ ಸ್ಥಿತಿಯಲ್ಲಿದ್ದ ತಂದೆಯೂ ಸಾವು

Public TV
By Public TV
38 minutes ago
Haveri Government Hospital
Districts

ಸೋರುತಿದೆ ಬಂಕಾಪುರ ಆರೋಗ್ಯ ಕೇಂದ್ರದ ಕಟ್ಟಡ – ನೀರು ಬೀಳುತ್ತಿರುವ ಬೆಡ್ ಮೇಲೆಯೇ ರೋಗಿಗಳಿಗೆ ಚಿಕಿತ್ಸೆ

Public TV
By Public TV
40 minutes ago
Hosur Bus Accident
Bengaluru Rural

ಬೆಂಗಳೂರಿಗೆ ಬರುತ್ತಿದ್ದಾಗ ಹೊಸೂರು ಬಳಿ ಕಂದಕಕ್ಕೆ ಉರುಳಿದ ಬಸ್ಸು

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?