ಬಿಜೆಪಿ ಸರ್ಕಾರ ಮಹಿಳಾ ವಿರೋಧಿ ಸರ್ಕಾರ, ಮಹಿಳೆಯರು ನಿಮ್ಮನ್ನು ಕ್ಷಮಿಸುವುದಿಲ್ಲ: ಡಿಕೆಶಿ

Public TV
3 Min Read
DK SHIVAKUMAR 4

ಬೆಂಗಳೂರು: ಬಿಜೆಪಿ ಸರ್ಕಾರ ಮಹಿಳಾ ವಿರೋಧಿ ಸರ್ಕಾರ. ನಿಮಗೆ ಹೆಣ್ಣು ಮಕ್ಕಳ ಬಗ್ಗೆ ಗೌರವವಿಲ್ಲ ಎಂಬುದಕ್ಕೆ ನಿಮ್ಮ ಬಜೆಟ್ ಸಾಕ್ಷಿ. ಮಹಿಳೆಯರು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.

DK SHIVAKUMAR 2 1

ಕೆಪಿಸಿಸಿಯಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಮಹಿಳಾ ದಿನದಂದು ಎಲ್ಲ ಮಹಿಳೆಯರಿಗೆ ಶುಭಾಶಯ ಕೋರುತ್ತೇನೆ. ಜೊತೆಗೆ ಈ ದಿನ ನಿಮಗೆ ಹೊಸ ಆಲೋಚನೆಗಳು ಶುರುವಾಗಲಿ ಎಂದು ಇಚ್ಛಿಸುತ್ತೇನೆ. ಈ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಮಹಿಳಾ ವಿರೋಧಿ ಸರ್ಕಾರ. ನಾವು ಹೆಣ್ಣು ಕುಟುಂಬದ ಕಣ್ಣು ಎಂದು ಬೇಕಾದಷ್ಟು ಕಾರ್ಯಕ್ರಮ ಆರಂಭಿಸಿದ್ದೆವು. ಇಡೀ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದೆವು. ಆದರೆ ಕಳೆದ ಚುನಾವಣೆಯಲ್ಲಿ ಬಿಜೆಪಿಯವರು ಮಹಿಳೆಯರ ಅಭಿವೃದ್ಧಿಗೆ 10 ಸಾವಿರ ಕೋಟಿ ಕೊಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದರು. ಮಹಿಳೆಯರಿಗೆ 2 ಲಕ್ಷದವರೆಗೂ ಸಾಲ, ಬಡ ಮಹಿಳೆಯರಿಗೆ ಸ್ಮಾರ್ಟ್ ಫೋನ್ ವಿತರಣೆ ಎಂಬ ಭರವಸೆಗಳನ್ನು ನೀಡಿದ್ದರು. 3 ಗ್ರಾಂ ತಾಳಿ, 25 ಸಾವಿರ ಹಣ ನೀಡುವುದಾಗಿ ಹೇಳಿದ್ದರು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನನ್ನ ದಾರಿ ತಪ್ಪಿಸಲು ಈಶ್ವರಪ್ಪ ಜಗಳ ಮಾಡುಬೇಕು ಅಂತಾ ಬರ್ತಾರೆ: ಸಿದ್ದರಾಮಯ್ಯ ಹಾಸ್ಯ ಚಟಾಕಿ

ಮುಖ್ಯಮಂತ್ರಿಗಳೇ ನಿಮ್ಮ ಬಜೆಟ್ ಬಂದಾಯ್ತು, ನೀವು ವಿಫಲವಾಗಿಯಾಯ್ತು. ನೀವು ಕ್ಷಮಾಪಣೆ ಕೇಳುವುದು ಬೇಡ. ನಿಮಗೆ ಹೆಣ್ಣು ಮಕ್ಕಳ ಬಗ್ಗೆ ಗೌರವವಿಲ್ಲ ಎಂಬುದಕ್ಕೆ ನಿಮ್ಮ ಬಜೆಟ್ ಸಾಕ್ಷಿ. ಬಿಜೆಪಿ ಸರ್ಕಾರ ಈಗಾಗಲೇ 3 ಬಜೆಟ್ ಮಂಡಿಸಿದ್ದು, ಈ ಬಜೆಟ್ ಚುನಾವಣೆ ಬಜೆಟ್ ಆಗಿದೆ. ಈ ಬಿಜೆಪಿ ಸರ್ಕಾರ ಮಹಿಳಾ ವಿರೋಧಿ ಸರ್ಕಾರ. ಮಹಿಳೆಯರು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

DK SHIVAKUMAR 1 2

ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಹೊಸ ಹೆಜ್ಜೆ ಇಟ್ಟಿದ್ದು, ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಅವರು ದೇಶದಲ್ಲೇ ದೊಡ್ಡ ಪರಿವರ್ತನಾ ಹೆಜ್ಜೆ ಇಟ್ಟಿದ್ದಾರೆ. ಅವರ ತಂದೆ ರಾಜೀವ್ ಗಾಂಧಿ ಅವರು ಮಹಿಳೆಯರಿಗೆ ಮೀಸಲಾತಿಯಂತಹ ಕ್ರಾಂತಿಕಾರಿ ಬದಲಾವಣೆಗೆ ಪ್ರಯತ್ನ ಮಾಡಿದ್ದರು. ನಾವು ನಮ್ಮ ಪ್ರಣಾಳಿಕೆಯಲ್ಲಿ ಶೇ.33 ರಷ್ಟು ಮೀಸಲಾತಿ ನೀಡುತ್ತೇವೆ ಎಂದು ಹೇಳಿದ್ದು, ರಾಜ್ಯಸಭೆಯಲ್ಲಿ ಪಾಸ್ ಆಗಿ ಲೋಕಸಭೆಯಲ್ಲಿ ಬಿಜೆಪಿ ಇನ್ನು ಕಾರ್ಯರೂಪಕ್ಕೆ ತಂದಿಲ್ಲ. ಇದನ್ನೂ ಓದಿ: ಬಿಜೆಪಿಯದ್ದು ಸಬ್ ಕಾ ವಿಕಾಸ್ ನಹೀ ಹೇ, ಸಬ್ ಕಾ ಸರ್ವ ನಾಶ್ ಹೇ: ಸಿದ್ದರಾಮಯ್ಯ

ಮಹಿಳೆಯರಿಗೆ ಪುರುಷರಿಗೆ ಸಮಾನವಾಗಿ ಅವಕಾಶ ನೀಡಬೇಕು ಎಂದು ಧ್ವನಿ ಎತ್ತಿರುವ ಈ ಸಂದರ್ಭದಲ್ಲಿ ಪಕ್ಷ ಹಾಗೂ ರಾಜ್ಯದ ಪರವಾಗಿ ಪ್ರಿಯಾಂಕಾ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂದು ನಮ್ಮ ಪಕ್ಷದ ವತಿಯಿಂದ ಪಕ್ಷದ ಕಾರ್ಯಕರ್ತರಲ್ಲದವರಿಗೆ ಒಂದು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ 3 ನಿಮಿಷ ವೀಡಿಯೋ ಹಾಕಿ, ಮಹಿಳೆ ಯಾವ ರೀತಿ ಹೋರಾಟ ಮಾಡಬಲ್ಲಳು ಎಂಬ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದು ಮುಕ್ತ ಸ್ಪರ್ಧೆಯಾಗಿದ್ದು, ನಾನು ಕೂಡ ಈ ವಿಚಾರವಾಗಿ ವೀಡಿಯೋ ಮಾಡಿಸಿ, ಬೇರೆಯವರು ಮಾಡುವಂತೆ ಮನವಿ ಮಾಡುತ್ತೇನೆ. ಅತ್ಯುತ್ತಮ ವೀಡಿಯೋಗಳಿಗೆ ಬಹುಮಾನ ಘೋಷಣೆ ಬಗ್ಗೆಯೂ ಚಿಂತನೆ ನಡೆಸುತ್ತೇನೆ.

ಮುಂದಿನ ದಿನಗಳಲ್ಲಿ ನಮಗೆ ಒಂದು ಅವಕಾಶ ಮಾಡಿಕೊಡಿ ಎಂದು ರಾಜ್ಯದ ಎಲ್ಲ ತಾಯಂದಿರು, ಸೋದರಿಯರಿಗೆ ಮನವಿ ಮಾಡುತ್ತೇನೆ. ನಿಮ್ಮ ವಿಚಾರಗಳನ್ನು ನಮಗೆ ಕೊಡಿ, ನಾವು ಅವುಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿಕೊಂಡು ಜನರ ಮುಂದೆ ಹೋಗಲು ಇಚ್ಛಿಸುತ್ತೇವೆ. ನಾವು “ನಾ ನಾಯಕಿ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಆದಷ್ಟು ಬೇಗ ನಾವು ಈ ಕಾರ್ಯಕ್ರಮ ಉದ್ಘಾಟನೆ ಮಾಡುತ್ತೇವೆ. ಸದಸ್ಯತ್ವ ಅಭಿಯಾನದ ನಂತರ ನಾವು ಇದನ್ನು ಮಾಡುತ್ತೇವೆ ಎಂದರು. ಇದನ್ನೂ ಓದಿ: ಕೈಗಾರಿಕೆಗಳಲ್ಲಿ 80% ಉದ್ಯೋಗ ಕನ್ನಡಿಗರಿಗೆ ಕಡ್ಡಾಯವಾಗಿ ನೀಡಬೇಕು: ಮುರುಗೇಶ್ ನಿರಾಣಿ

Share This Article
Leave a Comment

Leave a Reply

Your email address will not be published. Required fields are marked *