-ನೂರಕ್ಕೂ ಹೆಚ್ಚು ಶಾಸಕರು ಬದಲಾವಣೆ ಬಯಸಿದ್ದಾರೆ ಎಂದ ಶಾಸಕ
ರಾಮನಗರ: ನೂರಕ್ಕೂ ಹೆಚ್ಚು ಶಾಸಕರು ಬದಲಾವಣೆ ಬಯಸಿದ್ದಾರೆ, ಶೀಘ್ರದಲ್ಲೇ ಡಿಸಿಎಂ ಡಿಕೆಶಿ ಸಿಎಂ ಆಗ್ತಾರೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಹೊಸ ಬಾಂಬ್ ಸಿಡಿಸಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಡಿಸಿಎಂ ಡಿಕೆಶಿ ಸಿಎಂ ಆಗುವ ವಿಚಾರ ಮಾತನಾಡಿದ ಅವರು, ನೂರಕ್ಕೂ ಹೆಚ್ಚು ಶಾಸಕರು ಬದಲಾವಣೆ ಬಯಸಿದ್ದಾರೆ. ಡಿಸಿಎಂ ಡಿಕೆಶಿಗೂ ಒಂದು ಬಾರಿ ಅವಕಾಶ ಸಿಗಬೇಕು. ಸಾಕಷ್ಟು ಕಷ್ಟಪಟ್ಟು ಪಕ್ಷ ಸಂಘಟನೆ ಮಾಡಿ ಸರ್ಕಾರ ತಂದಿದ್ದಾರೆ. ಕಷ್ಟಕಾಲದಲ್ಲಿದ್ದ ಪಕ್ಷಕ್ಕೆ ಶಕ್ತಿತುಂಬಿ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಹಾಗಾಗಿ ಅವರ ಪರವಾಗಿ ಸಾಕಷ್ಟು ಶಾಸಕರು ಧ್ವನಿಗೂಡಿಸ್ತಾರೆ. ಈ ವಿಚಾರವನ್ನ ಸುರ್ಜೇವಾಲ ಅವರ ಮುಂದೆ ಇಡುತ್ತೇವೆ. ಈ ವಿಚಾರ ಚರ್ಚೆ ಮಾಡಲ್ಲ ಎಂದ ಮೇಲೆ ಅಲ್ಲಿಗೆ ಯಾಕೆ ಹೋಗಬೇಕು? ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: Bengaluru | ಸ್ಪೋರ್ಟ್ಸ್ ಪ್ರಾಕ್ಟಿಸ್ ನೋಡಲು ಹೋಗಿದ್ದ ವಿದ್ಯಾರ್ಥಿ ನಾಪತ್ತೆ
ನನ್ನ ಕ್ಷೇತ್ರದ ಬಗ್ಗೆ ಮಾತನಾಡಿದ ಮೇಲೆ ಪ್ರಬಲವಾಗಿ ಈ ವಿಚಾರವನ್ನೂ ಚರ್ಚೆ ಮಾಡ್ತೇನೆ. ಇದೇನು ಬಸ್ಸಾ? ಈ ಟ್ರಿಪ್ ಬೇಡ, ನೆಕ್ಸ್ಟ್ ಟ್ರಿಪ್ ಮಾಡಿ ಅಂತ ಹೇಳೋಕಾಗುತ್ತಾ? ಈ ಟರ್ಮ್ ಅಲ್ಲದೇ ಇನ್ಯಾವ ಟರ್ಮ್ ಮಾಡಿ ಅನ್ನೋದಕ್ಕೆ ಆಗುತ್ತಾ? ಡಿಕೆಶಿ ಸಿಎಂ ಆಗುವ ಕಾಲ ಹತ್ತಿರ ಬಂದಿದೆ. ಕ್ರಾಂತಿ ಅಂತ ಹೇಳಿರುವವರೇ ಡೇಟ್ ಕೊಟ್ಟಿದ್ದಾರೆ. ಶೀಘ್ರದಲ್ಲೇ ಡಿಕೆಶಿ ಸಿಎಂ ಆಗ್ತಾರೆ ಎಂದು ಹೇಳಿದರು.
ಇದೇ ವೇಳೆ ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ (Randeep Surjewala) ಭೇಟಿ ವಿಚಾರವಾಗಿ ಮಾತನಾಡಿ, ಈಗಾಗಲೇ 40 ಜನ ಶಾಸಕರ ಜೊತೆ ಸುರ್ಜೇವಾಲ ಚರ್ಚೆ ಮಾಡಿದ್ದಾರೆ. ಇಂದು ಮಧ್ಯಾಹ್ನ 3ಕ್ಕೆ ನನ್ನನ್ನೂ ಕರೆದಿದ್ದಾರೆ. ಶಾಸಕರ ಅಹವಾಲು, ಸಮಸ್ಯೆ, ಅಭಿಪ್ರಾಯಗಳನ್ನ ಚರ್ಚೆ ಮಾಡಲಿದ್ದಾರೆ. ನಾನು ಹೋಗಿ ಕ್ಷೇತ್ರದ ಬಗ್ಗೆ ಒಂದಿಷ್ಟು ಚರ್ಚೆ ಮಾಡಿ, ಪ್ರಸಕ್ತ ರಾಜಕೀಯ ಬೆಳವಣಿಗೆ ಬಗ್ಗೆಯೂ ಮಾತನಾಡುತ್ತೇನೆ. ಮುಂದೆ ಪಕ್ಷ ಸಂಘಟನೆ ಆಗಬೇಕು ಅಂದರೆ ಕೆಲ ಸಚಿವರ ಮಾತಿಗೆ ಕಡಿವಾಣ ಬೀಳಬೇಕು. ಹಾಗಾಗಿ ಹೈಕಮಾಂಡ್‌ಗೆ ಈ ಬಗ್ಗೆ ಕ್ರಮವಹಿಸುವಂತೆ ಮನವಿ ಮಾಡುತ್ತೇನೆ. ನನ್ನನ್ನೂ ಸೇರಿದಂತೆ ಎಲ್ಲರನ್ನೂ ಹತೋಟಿಗೆ ತನ್ನಿ ಎಂದು ಹೇಳುತ್ತೇನೆ ಎಂದು ತಿಳಿಸಿದರು.ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಂಕಿ ಅವಘಡ – ಡ್ಯೂಟಿ ಡಾಕ್ಟರ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ