ಡಿಕೆಶಿ ಮಾಜಿ ಸಚಿವ ಆಗೋದಿಲ್ಲ, ಸಿಎಂ ಆಗುತ್ತಾರೆ: ಶಿವಗಂಗಾ ಬಸವರಾಜ್

Public TV
1 Min Read
Congress MLA Sivaganga Basavaraj

ದಾವಣಗೆರೆ: ರಮೇಶ್ ಜಾರಕಿಹೊಳಿ (Ramesh Jarkiholi) ಆಟ ಈ ಬಾರಿ ನಡೆಯುವುದಿಲ್ಲ. ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ, ಡಿಕೆ ಶಿವಕುಮಾರ್‌ (DK Shivakumar) ಮಾಜಿ ಮಂತ್ರಿ ಆಗುವುದಿಲ್ಲ ಸಿಎಂ‌ ಆಗುತ್ತಾರೆ ಎಂದು ದಾವಣಗೆರೆಯಲ್ಲಿ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ (Shivaganga Basavaraj) ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ದ ಕಿಡಿ ಕಾರಿದ್ದಾರೆ.

ತಮ್ಮ ನಿವಾಸದಲ್ಲಿ ಮಾತನಾಡಿದ ಅವರು ಡಿಕೆಶಿ ಮಾಜಿ ಹೇಗೆ ಆಗುತ್ತಾರೆ? ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಸಂಖ್ಯೆ ಕಡಿಮೆ ಇದ್ದ ಕಾರಣ ಬೆಂಕಿ ಹಚ್ಚುವ ಕೆಲಸ ಮಾಡಿದ್ದರು. ಆಗ ಸರ್ಕಾರ ಕೆಡವಿದ್ದರು. ಈಗ ಅದು ಆಗೋದಿಲ್ಲ. 136 ಜನ ಕಾಂಗ್ರೆಸ್ ಶಾಸಕರು ಜೊತೆಗಿದ್ದೇವೆ. ಸರ್ಕಾರ ಬೀಳಿಸುವು ವಿಚಾರ ಹೇಳಿ ನಮ್ಮ ನಮ್ಮಲ್ಲೇ ಬೆಂಕಿ ಇಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಅಪರೇಷನ್ ಕಮಲ (Operation Kamala) ಮಾಡಲು ಎಲ್ಲಾ ರೀತಿಯ ಕೆಲಸ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಆಡಿಯೋ, ವೀಡಿಯೋ ಬಿಡುಗಡೆ ಮಾಡುತ್ತೇವೆ. ಪರಮೇಶ್ವರ್ ಮನೆಗೆ ಸಿದ್ದು ಬೆಂಬಲಿಗರು ಸಭೆ ನಡೆಸಿಲ್ಲ. ನಮ್ಮ ನಮ್ಮ ಶಾಸಕರು ಸಚಿವರು ನಮ್ಮ ಮುಖಂಡರ ಮನೆಗೆ ಹೋಗುತ್ತಾರೆ. ಅದರಲ್ಲಿ ಬೇರೆ ಯಾವುದೇ ಅರ್ಥ ‌ಕಲ್ಪಿಸುವುದು ಬೇಡ. ಸಿಎಂ ಡಿಸಿಎಂ ಸ್ಥಾನ ಖಾಲಿ ಇಲ್ಲ ಕಾಲ‌ ಬಂದಾಗ ನೋಡೋಣಾ ಎಂದರು. ಇದನ್ನೂ ಓದಿ: ಇನ್ನು ಮುಂದೆ ಶಾಸಕರು, ಮಂತ್ರಿಗಳು ಪಕ್ಷ ವಿರೋಧಿ ಹೇಳಿಕೆ ಕೊಡಬಾರದು: ಕೋಳಿವಾಡ ಎಚ್ಚರಿಕೆ

ಸತೀಶ್ ಜಾರಕಿಹೊಳಿ ದುಬೈಗೆ (Dubai) ನನ್ನನ್ನು ಕರೆದರೂ ಹೋಗುತ್ತೇನೆ. ನಮ್ಮ ನಾಯಕರು ಎಲ್ಲಿಗೆ ಕರೆಯುತ್ತಾರೋ ಹೋಗಿ ಬರುತ್ತೇನೆ. ನಮ್ಮಲ್ಲಿ ಯಾವುದೇ ಬಣ ಇಲ್ಲ,  ಯಾವುದೇ ನಿಗಮ ಮಂಡಳಿಯನ್ನು ನಾನು ಕೇಳಿಲ್ಲ. ಅದನ್ನು ನಮ್ಮ ನಾಯಕರು ನೋಡಿಕೊಳ್ಳುತ್ತಾರೆ. ಅಧಿಕಾರ ನಿಂತ ನೀರಾಗಬಾರದು ಎಲ್ಲರಿಗೂ ಅಧಿಕಾರ ಸಿಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article