ದಾವಣಗೆರೆ: ಈ ಅವಧಿಯಲ್ಲೇ ಡಿಕೆಶಿ ಸಿಎಂ ಆಗುತ್ತಾರೆ ಎಂದು ಚನ್ನಗಿರಿ ಕ್ಷೇತ್ರದ ಶಾಸಕ ಶಿವಗಂಗಾ ಬಸವರಾಜ್ ಡಿಸಿಎಂ ಪರವಾಗಿ ಬ್ಯಾಟ್ ಬೀಸಿದ್ದಾರೆ.
ದಾವಣಗೆರೆಯ ನಿವಾಸದಲ್ಲಿ ಮಾತನಾಡಿದ ಅವರು, ಶಿವಕುಮಾರ್ ಪಕ್ಷವನ್ನು ಸಂಘಟನೆ ಮಾಡಿ 136 ಕ್ಷೇತ್ರ ಗೆಲ್ಲುವಂತೆ ಮಾಡಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಅವರ ಸಾಮರ್ಥ್ಯ ಎಷ್ಟು ಎನ್ನುವುದು ತೋರಿಸಿದ್ದಾರೆ. ಸಾಹೇಬರು ಕಷ್ಟಪಟ್ಟಿದ್ದಾರೆ ಅದಕ್ಕೆ ತಕ್ಕ ಪ್ರತಿಫಲ ಇದ್ದೇ ಇದೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ ಎಂದಿದ್ದಾರೆ.
Advertisement
ಶೃಂಗೇರಿಯಲ್ಲಿ ಶನಿವಾರ, ಕಾರ್ಯಕರ್ತರು ಹಾಗೂ ಶಾಸಕರ ಬಗ್ಗೆ ಡಿಕೆಶಿ ಒಳ್ಳೇಯ ಅರ್ಥದಲ್ಲೇ ಮಾತನಾಡಿದ್ದಾರೆ. ಅದು ನೋಡುವ ದೃಷ್ಟಿಕೋನದ ಮೇಲೆ ಹೋಗುತ್ತೆ. ಕೆಟ್ಡದಾಗಿ ನೋಡಿದರೆ ಕೆಟ್ಡದಾಗಿ ಕಾಣುತ್ತೆ, ತಪ್ಪಾಗಿ ಅರ್ಥೈಸಿದರೆ ತಪ್ಪಾಗಿ ಕೇಳಿಸುತ್ತೆ. ಹೋರಾಟ ಮಾಡಿ ಕಷ್ಟಪಟ್ಟು ಎಲ್ಲಾ ಶಾಸಕರನ್ನು ಗೆಲ್ಲಿಸಿದ್ದಾರೆ. ಡಿಕೆಶಿಯವರು ಶಾಸಕರನ್ನು ಅರ್ಡರ್ ಮಾಡಿ ಕೇಳಬೇಕು. ಅವರು ಹೇಳಿರುವುದು ಸರಿ ಇದೆ ಎಂದು ಡಿಕೆಶಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
Advertisement
Advertisement
ನಾವೇಲ್ಲ ಒಗ್ಗಟ್ಟಾಗಿ ಇದ್ದೇವೆ, ಏನಾದರೂ ತೀರ್ಮಾನ ತೆಗೆದುಕೊಳ್ಳಬೇಕಾದರೆ ಅದಕ್ಕೆ ಹೈಕಮಾಂಡ್ ಇದೆ. ಅಧಿಕಾರ ಹಂಚಿಕೆ ಪವರ್ ಶೇರಿಂಗ್ ಯಾವುದು ಇಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ. ಸಿಎಂ ಸ್ಥಾನ ಹಂಚಿಕೆ ವಿಚಾರವಾಗಿ ರಾಜಣ್ಣನವರು ಹೇಳಿದ್ದು ಸರಿ ಇದೆ, ಹಿಂದೆನೂ ಹೇಳಿದ್ದೇನೆ ಈಗಲೂ ಹೇಳುತ್ತೇನೆ ಡಿಕೆಶಿ ಸಿಎಂ ಆಗೇ ಆಗುತ್ತಾರೆ. ಡಿಕೆಶಿಯವರು ಈ ಐದು ವರ್ಷ ಸಿಎಂ ಆಗಬೇಕಿತ್ತು, ಕೆಲ ಬೆಳವಣಿಗೆಯಿಂದ ಸಿದ್ದರಾಮಯ್ಯನವರು ಸಿಎಂ ಆಗಿದ್ದಾರೆ. ಸಿದ್ದರಾಮಯ್ಯನವರು ಕೂಡ ಒಳ್ಳೆಯ ಆಡಳಿತ ಮಾಡ್ತಿದ್ದಾರೆ. ಕುರ್ಚಿ ಖಾಲಿಯಾದ ತಕ್ಷಣ ನಾವು ಡಿಕೆಶಿಯವರನ್ನು ಸಿಎಂ ಮಾಡಲು ಕ್ಲೈಂ ಮಾಡುತ್ತೇವೆ ಎಂದಿದ್ದಾರೆ.
Advertisement
ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆ ಎಂಬ ವಿಚಾರವಾಗಿ, ಅವರಾಗಿಯೇ ಬರ್ತಾರೆ ಎಂದರೆ ಸೇರಿಸಿಕೊಳ್ಳದೆ ಇರಲು ಆಗುತ್ತಾ. ಒಟ್ಟು 11 ಜನ ಜೆಡಿಎಸ್ ಶಾಸಕರು ಕಾಂಗ್ರಸ್‌ಗೆ ಬರುವವರಿದ್ದಾರೆ. ಡಿಕೆಶಿರವರು ಪಕ್ಷದ ಸಂಘಟನೆಗೆ ಎಲ್ಲರನ್ನೂ ಒಟ್ಟುಗೂಡಿಸುತ್ತಿದ್ದಾರೆ. ಉಳಿದವರು ಯಾರನ್ನೂ ಕೂಡ ಕರೆತರಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಅಧಿಕಾರ ಬೇಕು ಅಷ್ಟೇ, ಈ ರೀತಿ ಅಪರೇಷನ್ ಮಾಡಿ ಕರೆತರಲಿ ನೋಡೋಣಾ? ಕೆಲವರು ಮಾತನಾಡುತ್ತಾರೆ ಡಿಕೆಶಿ ಕೆಲಸ ಮಾಡುತ್ತಾರೆ ಅವರಿಗೆ ಮಾಡಿಟ್ಟ ಊಟವನ್ನು ಮಾಡಲು ಮಾತ್ರ ಬರ್ತಾರೆ ಎಂದಿದ್ದಾರೆ.