ಬೆಂಗಳೂರು: ಎರಡೂವರೆ ವರ್ಷಕ್ಕೆ ಯಾಕೆ ಪ್ರಯತ್ನಿಸುತ್ತೀರಿ? ಮುಂದಿನ ಐದು ವರ್ಷದ ಅವಧಿಗೆ ಮುಖ್ಯಮಂತ್ರಿ ಆಗಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ (DK Shivakumar) ಸಚಿವ ಕೆ.ಎನ್ ರಾಜಣ್ಣ (KN Rajanna) ಸಲಹೆ ನೀಡಿದ್ದಾರೆ.
`ಪಬ್ಲಿಕ್ ಟಿವಿ’ಯೊಂದಿಗೆ ಅವರು ಮಾತನಾಡಿದರು. ಡಿಕೆಶಿ ಹಣೆಯಲ್ಲಿ ಬರೆದಿದ್ರೆ ಸಿಎಂ ಆಗ್ತಾರೆ ಎಂಬ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಸಿಎಂ ಆಗೇ ಬಿಡುತ್ತಾರೆ ಅಂತನೂ ಹೇಳಿಲ್ಲ. ಆಗಲ್ಲ ಅಂತಾನೂ ಹೇಳಿಲ್ಲ. ಅವರ ಹಣೆಯಲ್ಲಿ ಬರೆದಿದ್ದರೆ ಆಗ್ತಾರೆ ಎಂದಿದ್ದಾರೆ. ಹಣೆಯಲ್ಲಿ ಬರೆದಿದ್ದರೆ ಆಗುತ್ತದೆ. ಎಲ್ಲರದ್ದು ವಿಧಿ ಏನು ಅಂತ ಮೊದಲೇ ತೀರ್ಮಾನ ಆಗಿರುತ್ತದೆ. ಅದರ ಪ್ರಕಾರ ಆಗುತ್ತದೆ. ಡಿಕೆ ಶಿವಕುಮಾರ್ ಎರಡೂವರೆ ವರ್ಷಕ್ಕೆ ಯಾಕೆ ಪ್ರಯತ್ನಿಸುತ್ತೀರಿ? ಮುಂದಿನ ಐದು ವರ್ಷದ ಅವಧಿಗೆ ಸಿಎಂ ಆಗಲಿ ಎಂದರು.ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ: ಹೆಚ್‌ಡಿಕೆ ಆರೋಪ
Advertisement
Advertisement
ಇದೇ ವೇಳೆ, ಡಿಕೆಶಿಯಿಂದ ಪ್ರತ್ಯಂಗಿ ಹೋಮ ವಿಚಾರವಾಗಿ, ನನಗೆ ಪೂಜೆ, ಪುನಸ್ಕಾರ, ನಮನ ವಾಮಾಚಾರದ ಬಗ್ಗೆ ನಂಬಿಕೆ ಇಲ್ಲ. ಅಸಹಾಯಕರಿಗೆ ಒಳ್ಳೆಯದು ಮಾಡಿದರೆ ಅದೇ ಒಳ್ಳೆಯದು. ಯಾರೋ ಒಬ್ಬ ಅಸಹಾಯಕನಿಗೆ ತೊಂದರೆ ನೀಡಿದರೆ ಶಾಪ ಹಾಕುತ್ತಾನೆ. ಅದೇ ನಮಗೆ ಕೆಟ್ಟದಾಗುತ್ತದೆ. ಹಿಂದೆ ನನ್ನ ವಿರುದ್ಧ ಮಾಟ, ವಾಮಾಚಾರದ ಪ್ರಯೋಗ ನಡೆದಿತ್ತು. ಆ ಅನುಭವ ನನಗೆ ಆಗಿದೆ. ನಾನು ಯಾರಿಗೂ ಹೆದರಿಸುವವನು ಅಲ್ಲ ಎಂದು ಹೇಳಿದರು.
Advertisement
ಕೇಂದ್ರ ಸಚಿವ ಕುಮಾರಸ್ವಾಮಿ ಈ ಸರ್ಕಾರದಲ್ಲಿ ರೇಟ್ ಕಾರ್ಡ್ ಫಿಕ್ಸ್ ಆಗಿದೆ ಎಂದರೆ ಅವರ ಕಾಲದಲ್ಲಿ ರೇಟ್ ಕಾರ್ಡ್ ಎಷ್ಟಿತ್ತು ಅಂತ ಹೇಳಬೇಕಲ್ಲ. ಒಂದು ತಿಳ್ಕೊಳ್ಳಿ ಈ ದೇಶದಲ್ಲಿ 90% ರಾಜಕಾರಣಿಗಳು ಭ್ರಷ್ಟರೆ, ಎಲ್ಲಿಂದ ದುಡ್ಡು ತರ್ತಾರೆ ಮನೆಯಿಂದ ಕೊಡ್ತಾರಾ? ಬೇರಯವರ ಹತ್ತಿರ ತಗೊಂಡು ಕೊಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ದರ್ಶನ್ ಸರ್‌ಗೆ 2025 ಒಳ್ಳೆಯದಾಗುತ್ತದೆ: ಶರಣ್
Advertisement