ತುಮಕೂರು: ಕೋಟಿ ಕೋಟಿ ಲೂಟಿ ಹೊಡೆದು ತಿಹಾರ್ ಜೈಲಿಗೆ (Tihar Jail) ಹೋಗಿ ಬಂದ ಡಿಕೆಶಿ (DK Shivakumar) ನಮಗೆ ನೀತಿ ಪಾಠ ಹೇಳೋದು ಬೇಡ ಎಂದು ಶಾಸಕ ಸುರೇಶ್ ಗೌಡ (B Suresh Gowda) ಕಿಡಿಕಾರಿದ್ದಾರೆ.
ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ (Hemavathi Express Canal) ವಿರೋಧಿ ಹೋರಾಟಗಾರರು ಬ್ಲಾಕ್ ಮೇಲ್ ಮಾಡುತಿದ್ದಾರೆ ಎಂದು ಡಿಸಿಎಂ ಡಿಕೆಶಿ ಹೇಳಿರೋದು ತುಮಕೂರು ಜಿಲ್ಲೆಯಲ್ಲಿ ಇನ್ನಷ್ಟು ಕಿಚ್ಚು ಹೆಚ್ಚಿಸಿದೆ. ಡಿಕೆಶಿ ಹೇಳಿಕೆಗೆ ಪಾದಯಾತ್ರಿಗಳು ಮುಗಿ ಬಿದ್ದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸುರೇಶ್, ವೈಕೆ ರಾಮಯ್ಯನವರು ಹೋರಾಟ ಮಾಡಿ ಹೇಮಾವತಿ ನೀರು ತಂದಾಗ ಡಿಕೆಶಿ ಹುಟ್ಟೇ ಇರಲಿಲ್ಲ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಸಿಎಂ ಪಟ್ಟಕ್ಕೆ ಕುಮಾರಸ್ವಾಮಿ, ಅಶೋಕ್ ಕನಸು – 5 ವರ್ಷ ನಮ್ಮದೇ ಸರ್ಕಾರ ಎಂದ ಸಿದ್ದರಾಮಯ್ಯ
Advertisement
Advertisement
ಮಾಜಿ ಶಾಸಕ ಮಸಾಲಾ ಜಯರಾಮ್ ಕೂಡ ಉಪಮುಖ್ಯಮಂತ್ರಿಗಳು ಹಠದ ಧೋರಣೆ ಬಿಡಲಿ ಎಂದಿದ್ದಾರೆ. ಇದೇ ರೀತಿ ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ, ಡಿಕೆ ಶಿವಕುಮಾರ್ ಅವರ ಸ್ವಪ್ರತಿಷ್ಠೆಯಿಂದ ಜಿಲ್ಲೆಯ ಜನತೆಗೆ ಅನ್ಯಾಯ ಆಗುತ್ತಿದೆ. ನಮ್ಮ ಧ್ವನಿ ಅಡಗಿಸಲು ಅವರಿಂದ ಸಾಧ್ಯ ಇಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಸೇತುವೆಯಿಂದ ಕೆರೆಗೆ ಬಿದ್ದ ವಿದ್ಯಾರ್ಥಿನಿ; ಜೀವದ ಹಂಗು ತೊರೆದು ರಕ್ಷಿಸಿದ ಗೃಹರಕ್ಷಕ
Advertisement