ಬೆಂಗಳೂರು: ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಮಧ್ಯಪ್ರದೇಶದಲ್ಲಿರುವ ಉಜ್ಜಯಿನಿ (Ujjain) ಮಹಾಕಾಲೇಶ್ವರನ ಮೊರೆ ಹೋಗಿದ್ದಾರೆ. ಉಜ್ಜಯಿನಿಗೆ ಕುಟುಂಬ ಸಮೇತರಾಗಿ ತೆರಳಿ ಮಹಾಕಾಲೇಶ್ವರನ ದರ್ಶನ ಪಡೆದಿದ್ದಾರೆ.
Advertisement
ಉಜ್ಜಯಿನಿಗೆ ಕುಟುಂಬ ಸಮೇತವಾಗಿ ತೆರಳಿದ ಡಿಕೆಶಿ ರುದ್ರಾಭಿಷೇಕ, ವಿಶೇಷ ಹೋಮ ನೆರವೇರಿಸಿ ದೇವರ ದರ್ಶನ ಪಡೆದಿದ್ದಾರೆ. ಡಿಕೆಶಿ ಉಜ್ಜಯಿನಿಯಿಂದ ನಾಳೆ ದೆಹಲಿಗೆ ತೆರಳಿ ಇಡಿ (ED) ವಿಚಾರಣೆಗೆ ಹಾಜರಾಗಲಿದ್ದಾರೆ. ಇದನ್ನೂ ಓದಿ: ಬಾದಾಮಿಯಲ್ಲಿ ಸ್ಪರ್ಧೆ ಇಲ್ಲ: ಸಿದ್ದರಾಮಯ್ಯ ಅಧಿಕೃತ ಘೋಷಣೆ
Advertisement
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾ ಕಾಲಭೈರವೇಶ್ವರ ದೇವಸ್ಥಾನಕ್ಕೆ ಇಂದು ಕುಟುಂಬ ಸಮೇತವಾಗಿ ಭೇಟಿ ನೀಡಿ ದರ್ಶನ ಪಡೆದೆ. ಪುರಾಣದಿಂದ ಹಿಡಿದು ಕಾಳಿದಾಸನ ಮೇಘ ಸಂದೇಶದಲ್ಲೂ ಉಜ್ಜಯಿನಿಯ ಉಲ್ಲೇಖವಿದೆ. ಶಿವನು ಇಲ್ಲಿ ವಾಸಿಸುತ್ತಿದ್ದ ಎಂದು ಪುರಾಣಗಳು ಹೇಳುತ್ತವೆ. pic.twitter.com/9ikOqj9yF7
— DK Shivakumar (@DKShivakumar) November 13, 2022
Advertisement
ಉಜ್ಜಯಿನಿ ಮಹಾಕಾಲೇಶ್ವರನ ದರ್ಶನ ಪಡೆದ ಡಿಕೆ ಶಿವಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದು, ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾ ಕಾಲಭೈರವೇಶ್ವರ ದೇವಸ್ಥಾನಕ್ಕೆ ಇಂದು ಕುಟುಂಬ ಸಮೇತವಾಗಿ ಭೇಟಿ ನೀಡಿ ದರ್ಶನ ಪಡೆದೆ. ಪುರಾಣದಿಂದ ಹಿಡಿದು ಕಾಳಿದಾಸನ ಮೇಘ ಸಂದೇಶದಲ್ಲೂ ಉಜ್ಜಯಿನಿಯ ಉಲ್ಲೇಖವಿದೆ. ಶಿವನು ಇಲ್ಲಿ ವಾಸಿಸುತ್ತಿದ್ದ ಎಂದು ಪುರಾಣಗಳು ಹೇಳುತ್ತವೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಡಿಕೆಶಿ ಧರಿಸಿರುವ ಶಾಲಿನಲ್ಲಿ ಜೈ ಶ್ರೀರಾಮ್ ಎಂದು ಬರೆದುಕೊಂಡಿರುವುದಕ್ಕೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಮೆಕಾಲೆ ಶಿಕ್ಷಣ ಪದ್ಧತಿ ಗುಲಾಮಗಿರಿಗೆ ದೂಡಿತ್ತು: ಬಿ.ಸಿ ನಾಗೇಶ್