ಬೆಂಗಳೂರು: ನಾಮಪತ್ರ ಸಲ್ಲಿಕೆಗೆ ಎರಡೇ ದಿನ ಬಾಕಿ ಉಳಿದಿದೆ. ಹೀಗಾಗಿ ಚುನಾವಣಾ ಕಣ ರಂಗೇರುತ್ತಿದ್ದು ಪದ್ಮನಾಭನಗರದ (Padmanabhanagar) ಕಾಂಗ್ರೆಸ್ (Congress) ಅಭ್ಯರ್ಥಿ ಯಾರು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.
ಕಾಂಗ್ರೆಸ್ ಈಗಾಗಲೇ ರಘುನಾಥ್ ನಾಯ್ಡು (Raghunath Naidu) ಅವರಿಗೆ ಫಾರಂ ಬಿ (Form B) ನೀಡಿದೆ. ಆದರೆ ಈಗ ಬಿ ಫಾರಂಗೆ ತಡೆ ಹಿಡಿಯಲಾಗಿದ್ದು ಹಾಲಿ ಶಾಸಕ ಅಶೋಕ್‌ಗೆ (Ashok) ಠಕ್ಕರ್ ನೀಡಲು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿಕೆ ಸುರೇಶ್ (DK Suresh) ಸ್ಪರ್ಧೆ ಮಾಡುತ್ತಾರಾ ಎನ್ನುವುದು ಸದ್ಯದ ಕುತೂಹಲ.
Advertisement
Advertisement
ಕನಕಪುರದಲ್ಲಿ ಬಿಜೆಪಿ (BJP) ಅಚ್ಚರಿ ಎಂಬಂತೆ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಅಶೋಕ್ ಅವರನ್ನು ನಿಲ್ಲಿಸಿದೆ. ರಾಮನಗರದಲ್ಲಿ ಸಂಘಟನೆ ದೃಷ್ಟಿಯಿಂದ ಬಲಿಷ್ಠ ಅಭ್ಯರ್ಥಿ ಹಾಕಿದರೆ ಮುಂದೆ ಬಿಜೆಪಿಗೆ ಲಾಭ ಎಂಬ ದೃಷ್ಟಿಯಿಂದ ಅಶೋಕ್ ಅವರನ್ನು ಕಣಕ್ಕೆ ಇಳಿಸಿದೆ. ಇದನ್ನೂ ಓದಿ: ಕಾಂಗ್ರೆಸ್ 4ನೇ ಪಟ್ಟಿ ರಿಲೀಸ್ – ಸಿ.ಟಿ. ರವಿ ವಿರುದ್ಧ ಮಾಜಿ ಆಪ್ತನಿಗೆ ಟಿಕೆಟ್
Advertisement
ಅಶೋಕ್ ಅವರನ್ನು ಕನಕಪುರದಲ್ಲಿ ಕಣಕ್ಕೆ ಇಳಿಸಿದ ಬೆನ್ನಲ್ಲೇ ಪದ್ಮನಾಭನಗರದಲ್ಲಿ ಅಶೋಕ್‌ಗೆ ಠಕ್ಕರ್ ನೀಡಲು ಡಿಕೆ ಸುರೇಶ್ ಅವರನ್ನು ಇಳಿಸಲಾಗುತ್ತದೆ ಎಂಬ ವದಂತಿ ಕೇಳಿ ಬಂದಿತ್ತು. ಈ ಮಾತಿಗೆ ಆರಂಭದಲ್ಲಿ ಡಿಕೆ ಸುರೇಶ್, ನಾನು ರಾಜ್ಯ ರಾಜಕೀಯಕ್ಕೆ ಬರುವುದಿಲ್ಲ. ಲೋಕಸಭಾ ಸದಸ್ಯನಾಗಿ ಇರುತ್ತೇನೆ ಎಂದು ಹೇಳಿದ್ದರು. ಆದರೆ ರಘುನಾಥ್ ನಾಯ್ಡು ಅವರಿಗೆ ನೀಡಿದ್ದ ಬಿ ಫಾರಂ ತಡೆ ಹಿಡಿದ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆ ಎದುರಾಗಿದೆ.
Advertisement
ಪದ್ಮನಾಭನಗರದ ಅಭ್ಯರ್ಥಿ ರಘುನಾಥ್ ನಾಯ್ಡು ಡಿ.ಕೆ.ಸುರೇಶ್ ಬಂದು ಸ್ಪರ್ಧೆ ಮಾಡಿದರೆ ನಾನು ಸ್ಥಾನ ಬಿಟ್ಟುಕೊಡಲು ರೆಡಿ ಎಂದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಸಂಸದ ಡಿ.ಕೆ.ಸುರೇಶ್ ಪದ್ಮನಾಭನಗರದಿಂದ ಸ್ಪರ್ಧೆ ಮಾಡ್ತಾರಾ ಎಂಬ ಅನುಮಾನ ಮೂಡಿಸುವಂತಿದೆ. ಪದ್ಮನಾಭನಗರ ಸ್ಪರ್ಧೆಗೆ ಸಂಬಂಧಿಸಿದಂತೆ ಎದ್ದಿರುವ ಎಲ್ಲಾ ಅಂತೆ ಕಂತೆ ಸುದ್ದಿಗಳಿಗೆ ಇಂದೇ ತೆರೆ ಬೀಳಲಿದೆ.