ಬೆಂಗಳೂರು: ವಿಧಾನಸಭೆ ಅಧಿವೇಶನದ ಒಳಗಾಗಿ ವಿಪಕ್ಷ ನಾಯಕ ಹಾಗೂ ಸಿಎಲ್ ಪಿ ನಾಯಕರ ಆಯ್ಕೆ ಜೊತೆ ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಖಚಿತವಾಗಿದೆ. ಫೆಬ್ರವರಿ 15ರೊಳಗೆ ಅಧಿಕೃತವಾಗಿ ಹೆಸರು ಪ್ರಕಟಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿಗೆ ಹೈ ಕಮಾಂಡ್ ಸೂಚನೆ ನೀಡಿದೆ. ಎಐಸಿಸಿ ಅಧ್ಯಕ್ಷೆ ಸೋನಿಯ ಗಾಂಧಿ ಅವರಿಂದ ರಾಜ್ಯ ಕಾಂಗ್ರೆಸ್ ನಾಯಕರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಯಾರಿಗೆ ಯಾವ್ಯಾವ ಸ್ಥಾನಮಾನ ಅನ್ನೋ ಎಕ್ಸ್ ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
1. ಸಿದ್ದರಾಮಯ್ಯ: ವಿಪಕ್ಷ ನಾಯಕ ಹಾಗೂ ಸಿಎಲ್ ಪಿ ಎರಡರಲ್ಲೂ ಮುಂದುವರಿಕೆ
2. ಡಿ.ಕೆ.ಶಿವಕುಮಾರ್: ಕೆಪಿಸಿಸಿ ಅಧ್ಯಕ್ಷ
3. ಈಶ್ವರ್ ಖಂಡ್ರೆ: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಮುಂದುವರಿಕೆ
4. ಮಲ್ಲಿಕಾರ್ಜುನ ಖರ್ಗೆ: ಎಐಸಿಸಿ ಪ್ರಧಾನ ಕಾರ್ಯದರ್ಶಿ
5. ಎಂ.ಬಿ.ಪಾಟೀಲ್: ಪ್ರಚಾರ ಸಮಿತಿ ಅಧ್ಯಕ್ಷ
6. ಡಾ.ಜಿ.ಪರಮೇಶ್ವರ್: ಸಮನ್ವಯ ಸಮಿತಿ ಮುಖ್ಯಸ್ಥ
Advertisement
Advertisement
ಹೀಗೆ ಒಟ್ಟು ಏಳು ಸ್ಥಾನಗಳಿಗೆ 6 ನಾಯಕರಿಗೆ ಮಣೆ ಹಾಕಲು ಕಾಂಗ್ರೆಸ್ ಹೈ ಕಮಾಂಡ್ ನಿರ್ಧರಿಸಿದೆ. ಇಷ್ಟು ಸ್ಥಾನಗಳಿಗೆ ನಾಯಕರುಗಳ ಹೆಸರನ್ನ ಅಂತಿಮಪಡಿಸಿ ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ಪಟ್ಟಿ ರವಾನಿಸಿದ್ದಾರಂತೆ. ದೆಹಲಿ ಫಲಿತಾಂಶದ ನಂತರ ಯಾವ ಕ್ಷಣದಲ್ಲಿ ಬೇಕಾದರೂ ಅಧಿಕೃತವಾಗಿ ಹೆಸರುಗಳು ಪ್ರಕಟವಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.