ಹಾವೇರಿ: ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರು ಅನ್ಯಪಕ್ಷಗಳ ನಾಯಕರ ಬಗ್ಗೆ ಏಕೆ ಅವಹೇಳನ ಮಾಡುತ್ತಿದ್ದಾರೆ ಎಂಬುದನ್ನು ನೀವು ವಿಮರ್ಶೆ ಮಾಡಬೇಕು. ಜನರ ಬಳಿ ಮತ ಕೇಳಲು ಅವರು ಸಾಧನೆಯನ್ನೇ ಮಾಡಿಲ್ಲ. ಜನರ ನೋವು ಮರೆಸಲು ಮಾಧ್ಯಮಗಳ ಮೂಲಕ ಇಂತಹ ಹೇಳಿಕೆ ನೀಡುತ್ತಿದ್ದಾರೆ. ನೀವು ಯಾಕೆ ಸುಮ್ಮನಿದ್ದೀರಿ ಎಂದು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದೀರಿ. ನಾವು ಚುನಾವಣೆ ಮುಗಿಯಲಿ ಎಂದು ತಾಳ್ಮೆ ವಹಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
Advertisement
ಹಾನಗಲ್ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಪ್ರಚಾರ ಮಾಡುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಕಾಂಗ್ರೆಸ್ ಪಕ್ಷದ ಸೈನ್ಯವೇ ಇದೆ. ಇದು ಕೇವಲ ಚುನಾವಣೆ ವಿಚಾರ ಮಾತ್ರವಲ್ಲ. ರಾಹುಲ್ ಗಾಂಧಿ ಕುಟುಂಬದ ತ್ಯಾಗದ ಮುಂದೆ ಇಡೀ ಬಿಜೆಪಿ ಪಕ್ಷ ಶೇ.1ರಷ್ಟು ಸಮಕ್ಕೂ ನಿಲ್ಲುವುದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಟೀಲ್ ಆರೋಪಕ್ಕೆ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ಸಾಕ್ಷ್ಯ ನೀಡಿದ ಬಿಜೆಪಿ
Advertisement
Advertisement
ನಮ್ಮ ಪಕ್ಷ ಬದುಕಿದೆ. ಈ ದೇಶದ ಇತಿಹಾಸದ ಪಕ್ಷ ನಮ್ಮದಾಗಿದೆ. ನಮಗೂ ಕೇಸರಿ ಬಣ್ಣದ ಮೇಲೆ ಗೌರವವಿದೆ. ಅದು ನಮ್ಮ ರಾಷ್ಟ್ರಧ್ವಜದ ಭಾಗ. ಚುನಾವಣೆ ಮುಗಿದ ಮೇಲೆ ಈ ವಿಚಾರವಾಗಿ ನಾವು ಮಾತಾಡುತ್ತೇವೆ. ಈ ಮಾನಸಿಕ ಅಸ್ವಸ್ಥರಿಗೆ ಯಾವ ರೀತಿ ಉತ್ತರ ಕೊಡಬೇಕೋ ಅದಕ್ಕೂ ಸಮಯ ನಿಗದಿ ಮಾಡುತ್ತೇವೆ. ಚುನಾವಣೆ ಸಮಯದಲ್ಲಿ ಜನರ ನೋವು, ಬದುಕಿನ ಬಗ್ಗೆ ಮಾತನಾಡಲಿ. ಪ್ರತಿ ವ್ಯಕ್ತಿಯ ಬದುಕಿನಲ್ಲಿ ಬಿಜೆಪಿ ಏನಾದರೂ ಬದಲಾವಣೆ ತಂದಿದೆಯಾ?, ಇಲ್ಲವೇ? ಎಂಬುದಷ್ಟೇ ನಮ್ಮ ಪ್ರಶ್ನೆ. ಇದಕ್ಕೆ ಅವರು ಉತ್ತರ ನೀಡಲಿ ಎಂದು ಸವಾಲು ಹಾಕಿದರು.
Advertisement
ಬಿಜೆಪಿ ನಾಯಕರು ಚುನಾವಣೆ ಎದುರಿಸಲಿ. ಜನರು ಇದಕ್ಕೆಲ್ಲ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ. ನೊಂದ ಜನ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲಿದ್ದಾರೆ. ಇದು ಮುಖ್ಯಮಂತ್ರಿಗಳ ಜಿಲ್ಲೆಯ ಕ್ಷೇತ್ರವಾಗಿದ್ದು, ಅವರಿಗೆ ಸೋಲಿನ ಭಯ ಕಾಡುತ್ತಿದೆ. ಹೀಗಾಗಿ ಜನರ ಸಮಸ್ಯೆಗಳ ವಿಚಾರ ಮರೆಮಾಚಲು ವೈಯಕ್ತಿಕ ಟೀಕೆಗೆ ನಿಂತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬ್ಲೂ ಫಿಲಂಗಳ ಬಗ್ಗೆ ಹೆಚ್‍ಡಿಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ: ಅಶ್ವಥ್ ನಾರಾಯಣ