– ಭ್ರಷ್ಟಾಚಾರ, ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರ್ಕಾರದ ಸಾಧನೆ
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹತಾಶೆಯಿಂದ ತ್ಯಾಗದ ಮಾತು ಆಡುತ್ತಿದ್ದಾರೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಲೇವಡಿ ಮಾಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ತ್ಯಾಗದ ಮಾತು ಆಡಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಶಿವಕುಮಾರ್ ಇಂತಹ ಹೇಳಿಕೆ ನೋಡಿದ್ರೆ ಪಾಪ ಅವರು ಹತಾಶೆ ಆಗಿದ್ದಾರೆ. ಅವರು ಪಾಪ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಬಿಹಾರಕ್ಕೆ ಸಾಕಷ್ಟು ದುಡ್ಡು ಕೊಟ್ಟಿದ್ದಾರೆ. ಬಿಹಾರದ ದೊಡ್ಡ ದೊಡ್ಡ ನಾಯಕರು ತಿಂಗಳು ಗಟ್ಟಲೆ ಪ್ರಚಾರ ಮಾಡಿದ್ರು. ಹೀನಾಯವಾಗಿ ಸೋತ್ರು. ಡಿಕೆಶಿ ಭ್ರಮನಿರಸನಾಗಿದ್ದಾರೆ. ಬಿಹಾರದ ಚುನಾವಣೆ ನಂತರ ಸಿದ್ದರಾಮಯ್ಯ ಮುಂದೆ ಹೈಕಮಾಂಡ್ ಸರೆಂಡರ್ ಆಗಿದೆ. ಹೈಕಮಾಂಡ್‌ಗೆ ಏನಾದ್ರು ಗೊಂದಲ ಸೃಷ್ಟಿ ಮಾಡಿದ್ರೆ ಕರ್ನಾಟಕವನ್ನು ಕಳೆದುಕೊಳ್ಳುವ ಆತಂಕ ಇದೆ. ಹೀಗಾಗಿ ಏನು ಮಾತನಾಡುತ್ತಿಲ್ಲ ಎಂದರು. ಇದನ್ನೂ ಓದಿ: ಧರ್ಮಸ್ಥಳ ತಲೆಬುರುಡೆ ಕೇಸ್; ಬೆಳ್ತಂಗಡಿ ಕೋರ್ಟ್‌ಗೆ 3,923 ಪುಟಗಳ ತನಿಖಾ ವರದಿ ಸಲ್ಲಿಕೆ
ಡಿಕೆ ಶಿವಕುಮಾರ್ ಕಡೆ ಶಾಸಕರಿಲ್ಲ, ಗಾಯಬ್ ಆಗಿದ್ದಾರೆ. ನನ್ನ ಉಚ್ಚಾಟನೆ ಮಾಡುವಾಗ ಎರಡೂವರೆ ವರ್ಷ ಬಿಟ್ಟು ಸಿದ್ದರಾಮಯ್ಯ ಇಳಿಯುತ್ತಾರೆ. ಡಿಕೆ ಕಡೆ 60 ಶಾಸಕರು ಇರುತ್ತಾರೆ ಅಂತ ಚರ್ಚೆ ಆಗಿತ್ತು. ಡಿಕೆ ಸಿಎಂ,ವಿಜಯೇಂದ್ರ ಡಿಸಿಎಂ ಆಗುತ್ತಾರೆ ಅಂತ ಹೇಳಿದ್ರು. ಡಿಕೆಶಿ-ವಿಜಯೇಂದ್ರ ನೇತೃತ್ವದಲ್ಲಿ ಸರ್ಕಾರ ಆಗುತ್ತದೆ. ಅದಕ್ಕೆ ನಾನು ತೊಡಕಾಗುತ್ತೇನೆ ಅಂತ ನನ್ನನ್ನ ಉಚ್ಚಾಟನೆ ಮಾಡಿದ್ರು. ಇದನ್ನ ರಾಷ್ಟ್ರೀಯ ನಾಯಕರೇ ನನಗೆ ಹೇಳಿದ್ದಾರೆ. ಡಿಕೆ-ವಿಜಯೇಂದ್ರ ಸರ್ಕಾರ ಮಾಡಿದ್ರೆ ಕರ್ನಾಟಕದಲ್ಲಿ ಗಿಡ, ಮರ, ಬಂಗಾರ, ಬೆಳ್ಳಿ ಉಳಿಯುತ್ತಿರಲಿಲ್ಲ. ಇಬ್ಬರು ಸೇರಿ ಸ್ವಚ್ಛ ಮಾಡುತ್ತಿದ್ದರು. ಪುಣ್ಯಕ್ಕೆ ಆದ್ರೆ ಡಿಕೆಶಿ ಜೊತೆ ಶಾಸಕರು ಇಲ್ಲ. ಉಪಮುಖ್ಯಮಂತ್ರಿ ಆಗುವ ಆಸೆಯಲ್ಲಿದ್ದ ವಿಜಯೇಂದ್ರ ಹತಾಶರಾಗಿದ್ದಾರೆ. ಡಿಕೆ ಶಿವಕುಮಾರ್ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮನೆ ಮುಂದೆ ಬೊಕ್ಕೆ ಇಟ್ಟುಕೊಂಡು ಇಷ್ಟು ಸಾಧನೆ ಮಾಡಿದ್ದೇನೆ ಅಂತ ಹೇಳುತ್ತಿದ್ದಾರೆ. ರಾಹುಲ್ ಗಾಂಧಿ ನಾನೇ ಝೀರೋ ಆಗಿದ್ದೇನೆ ಏನು ಮಾಡಲಿ ಅಂತ ಹೇಳುತ್ತಿದ್ದಾರೆ. ಇದು ಕರ್ನಾಟಕದ ಪರಿಸ್ಥಿತಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಸ್ಕ್ಯಾನಿಂಗ್‌ಗೆ ಬಂದ ಮಹಿಳೆಗೆ ಕಿರುಕುಳ ಕೇಸ್ – ಖಾಸಗಿ ಅಂಗ ಮುಟ್ಟಿ ಕೃತ್ಯ ಎಸಗಿದ್ದ ರೆಡಿಯಾಲಜಿಸ್ಟ್ ಅರೆಸ್ಟ್
ಕಾಂಗ್ರೆಸ್ ಸರ್ಕಾರಕ್ಕೆ 2.5 ವರ್ಷ ಪೂರೈಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎರಡೂವರೆ ವರ್ಷದಲ್ಲಿ ಭ್ರಷ್ಟಾಚಾರ ಮತ್ತು ಅಭಿವೃದ್ಧಿ ಶೂನ್ಯ ಈ ಸರ್ಕಾರದ ಸಾಧನೆ. ಈ ಸರ್ಕಾರದಲ್ಲಿ ಗ್ಯಾರಂಟಿ ಒಂದು ಬಿಟ್ಟು ಇನ್ನೇನು ಈಡೇರಿಕೆ ಆಗಿಲ್ಲ. ಕಾನೂನು ಸುವ್ಯವಸ್ಥೆ ಸರಿ ಮಾಡುತ್ತೇವೆ ಅಂದಿದ್ದರು, ಕೋಮು ಗಲಭೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ರು, ಆದರೆ ಏನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹೈದರಾಬಾದ್-ಬೆಂಗಳೂರು ಹೆದ್ದಾರಿಯಲ್ಲಿ ಆ್ಯಸಿಡ್ ಟ್ಯಾಂಕರ್‌ಗೆ ಸ್ಲೀಪರ್ ಬಸ್ ಡಿಕ್ಕಿ – ತಪ್ಪಿದ ಭಾರೀ ದುರಂತ!
ನೀರಾವರಿ ಯೋಜನೆಗಳಿಗೆ ಒಂದು ರೂಪಾಯಿ ಕೊಟ್ಟಿಲ್ಲ. ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಅನುದಾನ ಕೊಟ್ಟಿದ್ದಾರೆ. ಶಾಸಕರು ಬಂಡೇಳಬಾರದು. ನನ್ನ ಕುರ್ಚಿ ಉಳಿಯಬೇಕು ಅಂತ 50 ಕೋಟಿ ಅನುದಾನ ಸಿಎಂ ಕೊಟ್ಟಿದ್ದಾರೆ. ಬಿಜೆಪಿ ಅವರಿಗೆ 25 ಕೋಟಿ ಘೋಷಣೆ ಮಾಡಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಜನರಿಗೆ ಸಿಗಬೇಕಾದದ್ದು ಸಿಕ್ಕಿಲ್ಲ. ಎಲ್ಲಾ ನೇಮಕಾತಿ ಸ್ಥಗಿತವಾಗಿದೆ. 2.5 ವರ್ಷದ ಸಾಧನೆ ಶೂನ್ಯ, ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಮಸೂದೆ ಅಂಗೀಕರಿಸಲು ರಾಜ್ಯಪಾಲರಿಗೆ ಸಮಯ ನಿಗದಿ ಪಡಿಸಲು ಸಾಧ್ಯವಿಲ್ಲ: ಸುಪ್ರೀಂ


