ಬೆಂಗಳೂರು: ಪಿಎಸ್‍ಐ ಅಕ್ರಮದ ವಿಷಯವಾಗಿ ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡಿದ್ದಾರೆ. ನೊಂದವರು ನನ್ನ ಹತ್ತಿರ ಬಂದಿದ್ದರು ಆ ಭಾಗದ ವಿಷಯ ಆದ್ದರಿಂದ ಇದನ್ನು ಸ್ಟಡಿ ಮಾಡಿ ಅಂತ ನಾನೇ ಪ್ರಿಯಾಂಕ್ ಖರ್ಗೆಗೆ ಹೇಳಿದ್ದು. ಆದರೆ ಮಾಹಿತಿ ನೀಡಿದವರಿಗೆ ನೋಟಿಸ್ ನೀಡ್ತಿರಾ? ದಾಖಲೆ ಬಹಿರಂಗ ಪಡಿಸಿದವರನ್ನು ಹೆದರಿಸ್ತೀರಾ? ಈ ಆಟ ನಮ್ಮಲ್ಲಿ ನಡೆಯಲ್ಲ ಎಂದು ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗುಡುಗಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ತಾಕತ್ತಿದ್ದರೆ ನನಗೂ ಸಿದ್ದರಾಮಯ್ಯಗೂ ನೋಟಿಸ್ ಕೊಡಲಿ ನೋಡ್ತೀವಿ. ಪ್ರಿಯಾಂಕ್ ಖರ್ಗೆಗೆ ವಿಚಾರಣೆಗೆ ಹಾಜರಾಗದಂತೆ ಪಕ್ಷದಿಂದ ಸೂಚನೆ ನೀಡಿದ್ದೇವೆ. ಬರ್ಲಿ ನೋಡೋಣ ಏನಾಗತ್ತೆ ಅಂತ? ನಿನ್ನೆ ನೋಟಿಸ್ ನೀಡಿದ್ದ ಬಗ್ಗೆ ಪಕ್ಷದ ನಾಯಕರ ಜೊತೆಗೆ ಚರ್ಚೆ ಮಾಡಿಯೇ ವಿಚಾರಣೆಗೆ ಹಾಜರಾಗಬೇಡಿ ಅಂತ ಸೂಚಿಸಿದ್ದೇನೆ. ಆರೋಪಿ ಗೃಹ ಸಚಿವರ ಜೊತೆಗೆ ನಿಂತು ಪೋಟೋ ತೆಗೆದುಕೊಳ್ಳುತ್ತಾರೆ. ಹಲವು ಸಚಿವರ ಜೊತೆಗೆ ಅವರು ನಿಂತಿದ್ದಾರೆ. ಹಾರ ತುರಾಯಿ ಹಾಕಿಸಿಕೊಂಡು ಪೋಟೋ ಕೂಡ ತೆಗೆಸಿಕೊಳ್ತಾರೆ. ಗೃಹ ಸಚಿವರಿಗೆ ಮೊದಲು ನೋಟಿಸ್ ಕೊಡಲಿ. ಅವರಿಗೂ ದಿವ್ಯಾ ಹಾಗರಗಿಗೂ ಇರುವ ಲಿಂಕ್ ಏನು? ಅವರ ಆಶೀರ್ವಾದ ಇತ್ತಾ? ಎಲ್ಲಾ ತನಿಖೆ ಆಗಲಿ. ಆರೋಪಿ ಭ್ರಷ್ಟಾಚಾರದ ಅಂಗಡಿ ಓಪನ್ ಮಾಡಿಕೊಂಡಿದ್ದಾರೆ. ಅಂಗಡಿ ಓಪನ್ ಆಗಿದಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ ಎಲ್ಲರೂ ಅಂಗಡಿಗೆ ಹೋಗಿದ್ದಾರೆ ಎಂದರು. ಇದನ್ನೂ ಓದಿ: ಕೈ ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್
Advertisement
Advertisement
ವಿದ್ಯಾರ್ಥಿಗಳು ಹಾಗೂ ಯುವಕರ ಭವಿಷ್ಯದ ದೃಷ್ಟಿಯಿಂದ ನಮ್ಮ ಹೋರಾಟ ನಡೆಯುತ್ತೆ. ಯಾರೇ ತಪ್ಪು ಮಾಡಿದ್ದರು ಒದ್ದು ಒಳಗೆ ಹಾಕಲಿ. ನಮ್ಮನ್ನು ಹೆದರಿಸಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ವಿರುದ್ಧ ಮಾತೇ ಆಡಬಾರದಾ? ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ಪ್ರಾಣ ಹೋದರು ನಾವು ಹೆದರಲ್ಲ. ತನಿಖೆಗೆ ಸಹಕಾರ ಮಾಡ್ತಿಲ್ಲ ಅನ್ನೋದು ತಪ್ಪು. ಈ ಹಿಂದೆ ಪರಿಷತ್ ಸದಸ್ಯ ವಿಶ್ವನಾಥ್ ಅವರು ಯಡಿಯೂರಪ್ಪ ಮೇಲೆ ಕಮಿಷನ್ ಆರೋಪ ಮಾಡಿದ್ರು. ಯಾಕೆ ಎಸಿಬಿ ಅವರು ಕೇಸ್ ರಿಜಿಸ್ಟರ್ ಮಾಡಿ ವಿಶ್ವನಾಥ್‍ಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡ್ಲಿಲ್ಲ? ಯತ್ನಾಳ್ ಹೇಳಿದ್ರು ಆಗ ಕೇಸ್ ರಿಜಿಸ್ಟರ್ ಮಾಡ್ಲಿಲ್ಲ?. ಹಾಗಾದರೆ ಆರೋಪಿ ಜೊತೆಗೆ ಇದ್ದವರಿಗೆಲ್ಲರಿಗೂ ನೋಟಿಸ್ ಕೊಡಬೇಕಿತ್ತು. ಹೋಮ್ ಮಿನಿಸ್ಟರ್‌ಗೆ ನೋಟಿಸ್ ಕೊಡಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸರ್ಕಾರ ಕತ್ತೆ ಕಾಯ್ತಿದ್ಯಾ? ಕಡ್ಲೆಪುರಿ ತಿಂತಿದ್ಯಾ? ಆರೋಪಿ ವಿರುದ್ಧ FIR ದಾಖಲಿಸಿಲ್ಲ ಯಾಕೆ – ಪ್ರಿಯಾಂಕ್ ಖರ್ಗೆ ಪ್ರಶ್ನೆ
Advertisement
ಮುಸ್ಲಿಂ ಸಮುದಾಯದ ವ್ಯಾಪಾರಿಗಳ ಚಿನ್ನದ ಅಂಗಡಿಯಿಂದ ಚಿನ್ನ ಖರೀದಿಸಬೇಡಿ ಎಂಬ ವಿಚಾರದ ಕುರಿತಾಗಿ ಮಾತನಾಡಿ, ಇವತ್ತು ಚಿನ್ನ ತಗೊಬೇಡ, ಚಿನ್ನದ ಅಂಗಡಿಗೆ ಹೋಗಬೇಡ ಅಂತ ಅದ್ಯಾರೋ ಬಿಜೆಪಿ ಕಾರ್ಯಕರ್ತರು ಅಂತಿದ್ದಾರೆ. ಏನ್ ಮಾಡ್ತಿದ್ದಾರೆ ಸಿಎಂ ಬೊಮ್ಮಾಯಿ? ಏನ್ ಮಾಡ್ತಿದ್ದಾರೆ ಗೃಹ ಸಚಿವರು? ಏನಾಗಬೇಡ ಆರ್ಥಿಕ ಭವಿಷ್ಯ? ಚಿನ್ನ ಖರೀದಿಗೆ, ಹೊಟೇಲ್‍ಗೆ ಹೋಗೋದಕ್ಕೆ, ವ್ಯಾಪಾರ ಮಾಡೋದಕ್ಕೆ ಜಾತಿ ಬಣ್ಣ ಕಟ್ಟಿದ್ರೆ ಏನ್ ಆಗ್ಬೇಡಾ? ಏನ್ ಆಗ್ತಿದೆ ರಾಜ್ಯದಲ್ಲಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ದಿವ್ಯಾ ಹಾಗರಗಿ & ಟೀಂಗೆ ನೀರಿಕ್ಷಣಾ ಜಾಮೀನು ಕೊಡಬೇಡಿ: ಸಿಐಡಿ ತಕರಾರು ಅರ್ಜಿ ಸಲ್ಲಿಕೆ