ಹುಬ್ಬಳ್ಳಿ: 58ನೇ ಹುಟ್ಟುಹಬ್ಬದ ಸಂತಸದಲ್ಲಿರುವ ಸಚಿವ ಡಿ.ಕೆ.ಶಿವಕುಮಾರ್ ಖಾಸಗಿ ಹೋಟೆಲ್‍ವೊಂದರಲ್ಲಿ ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ಸಂಭ್ರಮ ಪಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‍ನವರೆಲ್ಲ ನರ ಸತ್ತವರು ಎಂಬ ಈಶ್ವರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದರು. ನರ ಇದೆಯೋ ಸತ್ತಿದೆಯೋ ಅಂತ ಪರೀಕ್ಷೆ ಮಾಡೋ ಶಕ್ತಿ ಅವರಿಗಿದ್ದರೆ ನಮ್ಮ ಜನ ತೋರಿಸುತ್ತಾರೆ. ನರ, ಗಂಡಸ್ತನದ ಬಗ್ಗೆ ಪರೀಕ್ಷೆ ಕೊಟ್ಟು ನೋಡಲಿ. ಗಂಡಸ್ತನದ ಬಗ್ಗೆ ಪರೀಕ್ಷೆ ಮಾಡಿಸಲಿ. ಆಗ ಯಾರು ಗಂಡಸು, ನರ ಸತ್ತವರು ಅನ್ನೋದು ತಿಳಿಯುತ್ತೆ. ಈಶ್ವರಪ್ಪ ಅವರಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಶ್ರೇಯಸ್ಸು. ಈ ರೀತಿ ಕೆಟ್ಟದಾಗಿ ಮಾತನಾಡುವುದೇ ಈಶ್ವರಪ್ಪನ ಸಂಸ್ಕೃತಿ ಎಂದು ತಿರುಗೇಟು ನೀಡಿದರು.
ಮೈತ್ರಿ ಸರ್ಕಾರದಲ್ಲಿರುವ ಅಸಮಾಧಾನದ ಬಗ್ಗೆ ದೇವೇಗೌಡರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವ ಪತ್ರ ವ್ಯವಹಾರವೂ ಆಗಿಲ್ಲ. ಇದು ಕೇವಲ ವದಂತಿ. ರಾಗಾ, ದೇವೇಗೌಡರ ಒಪ್ಪಂದ ಮುಂದುವರೆಯುತ್ತೆ. ದೋಸ್ತಿ ಸರ್ಕಾರವನ್ನು ಕಿತ್ತೆಸೆಯೋಕೆ ಕಡಲೇಕಾಯಿ ಗಿಡ ಅಲ್ಲ. 20 ಜನ ಶಾಸಕರು ನಮ್ಮ ಜತೆ ಇದ್ದಾರೆ ಎಂದು ಬಿಜೆಪಿ ಅವರು ಹೇಳುತ್ತಾರೆ. ಗೊಂದಲ ಸೃಷ್ಟಿ ಮಾಡೋದೆ ಬಿಜೆಪಿ ಅವರ ಕೆಲಸ ಎಂದು ಕಿಡಿಕಾರಿದರು.
ಮೈತ್ರಿ ಬೇಡ ಚುನಾವಣೆಗೇ ಹೋಗೋಣ ಎಂದು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ನಾವೇನು ಇದನ್ನ ನೋಡಿಕೊಂಡು ಸುಮ್ಮನಿರಲ್ಲ. ಪ್ರಾರಂಭದಿಂದ ಅನೇಕ ಗಡುವು ನೀಡಿದ್ದಾರೆ. ಇವರ ರಾಜಕೀಯ ನೋಡಿ ಅಸಹ್ಯ ಆಗುತ್ತಿದೆ. ಅಧಿಕಾರ ಇಲ್ಲದೆ ಇರೋಕೆ ಆಗಲ್ವಾ? ಇದ್ದಾಗ ಅದನ್ನ ಬಳಸಿಕೊಂಡಿಲ್ಲ ಎಂದರು.
ಬಳಿಕ ಐಟಿ ವಿಚಾರಕ್ಕೆ ಕೇಳಿದ ಪ್ರಶ್ನೆಗೆಸ ಕಾನೂನು, ನ್ಯಾಯ ಇದೆ. ಎಲ್ಲದ್ದಕ್ಕೂ ಲೆಕ್ಕ ಕೊಡುತ್ತೇವೆ ಎಂದು ಹೇಳಿದರು.