ಬೆಂಗಳೂರು: ಈಶ್ವರಪ್ಪನವರು (K.S. Eshwarappa) ಯಾಕೆ ತಡ ಮಾಡುತ್ತಿದ್ದಾರೆ ಮೊದಲು ಅವರು ನ್ಯಾಯಾಧೀಶರಾಗಿ ನನ್ನನ್ನು ಜೈಲಿಗೆ ಕಳಿಸಿ ಬಿಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಅವರು ಈಶ್ವರಪ್ಪನವರ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ಮೀರಿ ಆಧಿಕ ಆಸ್ತಿ ಗಳಿಕೆ ಪ್ರಕರಣದ ವಿಚಾರವಾಗಿ ಮಾಜಿ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ನಾನು ಇದುವರೆಗೂ ಒಬ್ಬ ಗುತ್ತಿಗೆದಾರನಿಗೆ ಕೆಲಸ ಕೊಟ್ಟಿಲ್ಲ. ಎಲ್ಲಾ ಕಾಂಟ್ರ್ಯಾಕ್ಟ್ ಕೊಟ್ಟಿದ್ದು ಬಿಜೆಪಿ ಸರ್ಕಾರ. ಬಿಜೆಪಿಯವರದ್ದನ್ನು ನಾವು ಇನ್ನೂ ಈಚೆ ತೆಗೆದಿಲ್ಲ. ಈಗ ಆ ಮಾತು ಬೇಡ ಸರಿಯಾದ ಸಮಯದಲ್ಲಿ ಉತ್ತರ ಕೊಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ಚುನಾವಣೆಯಲ್ಲಿ ಮಹಿಳೆಯರಿಗೆ ಯಾಕೆ ಆದ್ಯತೆ?
Advertisement
Advertisement
ಹೆಚ್‍ಡಿಕೆಯಷ್ಟು ಮೂರ್ಖ ಅಲ್ಲ: ಮಾಜಿ ಸಿಎಂ ಕುಮಾರಸ್ವಾಮಿ ( H.D. Kumaraswamy) ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿ, ನಾನು ಹೆಚ್‍ಡಿಕೆಯಷ್ಟು ಮೂರ್ಖ ಅಲ್ಲ. ಅವರು ಐಟಿ ಇಲಾಖೆಯ ಸ್ಪೋಕ್ಸ್ ಮೆನ್ ಆಗಿದ್ದರು. ನಾನು ಐಟಿ ಬುಲೆಟಿನ್ ನೋಡಿದ್ದೇನೆ ಹಣ ಯಾರದ್ದು ಎಂದು ಅದರಲ್ಲಿ ಇದೆ ಎಂದಿದ್ದಾರೆ.
Advertisement
Advertisement
ಕುಮಾರಸ್ವಾಮಿ ಅವರನ್ನು ರಾಮನಗರದಿಂದ ಗಂಟು ಮೂಟೆ ಕಟ್ಟಿಸಿ ಹಾಸನಕ್ಕೆ ಓಡಿಸ್ತೀನಿ ಎಂದು ಹೇಳಿಲ್ಲ ಹಾಗೆ ಹೇಳುವಷ್ಟು ಮೂರ್ಖ ನಾನಲ್ಲ. ಕುಮಾರಸ್ವಾಮಿ ಗಂಟೆಗೊಂದು ಗಳಿಗೆಗೊಂದು ಮಾತಾಡಬಹುದು. ಅವರ ತಂದೆ ದೇವೇಗೌಡರು ಹಾಗೂ ಹೆಚ್‍ಡಿಕೆ ಅವರ ಪತ್ನಿಯವರು ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದರು. ನನ್ನ ಜೊತೆ ಸೇರಿ ಸರ್ಕಾರನೂ ಮಾಡಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನ ವಿಚಾರಣೆ ಮಾಡೇ ಇಲ್ಲ, 90% ತನಿಖೆ ಪೂರ್ಣ ಹೇಗೆ ಆಗುತ್ತೆ: ಡಿಕೆಶಿ ಪ್ರಶ್ನೆ
Web Stories