ರಾಯಚೂರು: ಕಾಂಗ್ರೆಸ್ ಪಕ್ಷದಲ್ಲೀಗ ಸಿದ್ದರಾಮಯ್ಯ (Siddaramaiah) -ಡಿ.ಕೆ ಶಿವಕುಮಾರ್ (Dk Shivakumar) ಬಣಗಳು ಸೃಷ್ಟಿಯಾಗಿದ್ದು, ಕನಕಪುರದ ಬಂಡೆ ಒಂದು ಭಾಗವಾಗಿದೆ ಎಂದು ಸಚಿವ ಶ್ರೀರಾಮುಲು (Sriramulu) ವ್ಯಂಗ್ಯವಾಡಿದ್ದಾರೆ.
Advertisement
ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಪರಿಶಿಷ್ಟ ಪಂಗಡಗಳ ವಸತಿ ಶಾಲೆ ಹಾಗೂ ನೂತನ ಬಸ್ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್ (Congress) ಪಕ್ಷ ದೇಶದಲ್ಲಿ ಬ್ರೇಕ್ ಫೇಲ್ ಆದ ಪಕ್ಷ. ಈ ಬ್ರೇಕ್ ಇಲ್ಲದ ಪಾರ್ಟಿ ಯಾವತ್ತಾದರೂ ಒಂದು ದಿನ ಅಪಘಾತವಾಗಿ (Accident) ಜೀವ ಕಳೆದುಕೊಳ್ಳುತ್ತದೆ ಅಂತ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರಾಮನಗರದಿಂದ ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಅರ್ಪಣೆ
Advertisement
Advertisement
ಗುಜರಾತ್ ಮಾಡಲ್ ಗೊಂದಲ ಸೃಷ್ಟಿಸಲು ಕಾಂಗ್ರೆಸ್ಸಿಗರು ನಿಪುಣರು. ಅವರಿಗೆ ತಮ್ಮ ಪಕ್ಷದ ಗೊಂದಲಗಳನ್ನೇ ಸರಿಪಡಿಸಿಕೊಳ್ಳಲು ಆಗ್ತಿಲ್ಲ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಅವರಿಂದ ಸೇರಿ ಪಾರ್ಟಿಯಲ್ಲಿ ಬಣಗಳು ಸೃಷ್ಟಿಯಾಗಿವೆ. ಒಂದನೇ ಭಾಗ ಕನಕಪುರ ಬಂಡೆ. ಹಳೆ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಅವರದ್ದು ಮತ್ತೊಂದು ಭಾಗ. ತುಮಕೂರು ಭಾಗದಲ್ಲಿ ಪರಮೇಶ್ವರ್ ಅವರ ಭಾಗ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ಬಳಿಕ ಅವರದೊಂದು ಗುಂಪಾಗಿದೆ. ಈ ಗುಂಪುಗಳು ಸೃಷ್ಟಿಯಾಗಿ ಕಾಂಗ್ರೆಸ್ ಕೋಮಾ ಸ್ಥಿತಿಯಲ್ಲಿದೆ ಎಂದಿದ್ದಾರೆ.
Advertisement
ಕಾಂಗ್ರೆಸ್ ಇಡೀ ದೇಶದಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಅಸ್ತಿತ್ವ ಕಳೆದುಕೊಂಡ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದೆ. ಆದ್ರೆ ಬಿಜೆಪಿ (BJP) ಬಹಳ ಸ್ಪಷ್ಟವಾಗಿದೆ. 2023ರಲ್ಲಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸದನದ ಬಗ್ಗೆ ಹಗುರವಾಗಿ ಯಾರೂ ಮಾತನಾಡಬಾರದು, ಅದನ್ನು ಸಹಿಸಲಸಾಧ್ಯ: ಕಾಗೇರಿ