ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ನಿವಾಸದ ಮೇಲೆ ದಾಳಿ ಮಾಡಿ ಸತತ 3 ದಿನಗಳಿಂದ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ನಡುವೆ ಎರಡು ದಿನಗಳಿಂದ ಗೃಹಬಂಧನದಲ್ಲಿದ್ದ ಡಿಕೆ ಶಿವಕುಮಾರ್ ಇಂದು ಮನೆಯಿಂದ ಹೊರಗೆ ಬಂದು ಅಭಿಮಾನಿಗಳಿಗೆ ಕೈಮುಗಿದರು.
ಮನೆಯ ಮೊದಲನೇ ಮಹಡಿಗೆ ಬಂದು ಡಿಕೆಶಿ ತನ್ನ ಬೆಂಬಲಿಗರನ್ನ ಮಾತನಾಡಿಸಿದ್ರು. ಬೆಳ್ಳಂಬೆಳಗ್ಗೆ ಮನೆಯ ಬಾಲ್ಕನಿಗೆ ಬಂದು ವಾಪಾಸು ಹೋದ್ರು. ಈ ವೇಳೆ ‘ನೀವ್ಯಾಕ್ರೋ ಇಲ್ಲಿದ್ದೀರಾ?’ ಮನೆಗೆ ಹೋಗಿ ಎಂದು ಬೆಂಬಲಿಗರಿಗೆ ಹೇಳಿದ್ರು.
Advertisement
Advertisement
ತಡರಾತ್ರಿ 12:45ಕ್ಕೆ ಮೂವರು ಆಡಿಟರ್ಸ್‍ಗಳನ್ನು ಐಟಿ ಅಧಿಕಾರಿಗಳು ಕರೆಸಿಕೊಂಡಿದ್ರು. ಡಿಕೆಶಿ ಆಪ್ತ ಸಹಾಯಕ ಚಂದ್ರಶೇಖರ್ ಜೊತೆಯಲ್ಲಿ ಇಬ್ಬರು ಐಟಿ ಅಧಿಕಾರಿಗಳು ತಡರಾತ್ರಿ ಕೇಂದ್ರ ಕಚೇರಿಯಿಂದ ಆಗಮಿಸಿದ್ರು. ಐಟಿ ದಾಳಿಯ ಸಂಪೂರ್ಣ ವಿವರವುಳ್ಳ ಲ್ಯಾಪ್‍ಟ್ಯಾಪ್ ಸದಾಶಿವನಗರದ ಡಿಕೆಶಿ ಮನೆಯಲ್ಲಿರುವ ಹಿರಿಯ ಐಟಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಿ ವಾಪಸ್ ತೆರಳಿದ್ರು.
Advertisement
Advertisement
ಡಿಕೆಶಿ ಮನೆಯಲ್ಲಿರುವ ಅಧಿಕಾರಿಗಳು ಒಂದು ಗಂಟೆವರೆಗೂ ದಾಖಲಾತಿಗಳ ಪರಿಶಿಲನೆ ನಡೆಸಿದ್ರು. ಮತ್ತೊಂದು ಕಡೆ ಡಿಕೆಶಿ ಆಪ್ತನ ಮನೆಯಲ್ಲಿಯೂ ದಾಳಿ ಮುಂದುವರೆದಿದೆ. ಡಿಕೆಶಿ ಆಪ್ತ ಸುನೀಲ್ ಶರ್ಮಾ ಮನೆಯಲ್ಲಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಎನ್‍ಆರ್ ಕಾಲೋನಿಯಲ್ಲಿರುವ ಸುನೀಲ್ ಶರ್ಮಾ ಮನೆಯಲ್ಲಿ ಎಂಟು ಜನ ಅಧಿಕಾರಿಗಳಿಂದ ಕಾರ್ಯಚರಣೆ ಮುಂದುವರೆದಿದೆ. ಇಂದು ಕೂಡ ಹಲವಡೆ ಐಟಿ ಅಧಿಕಾರಿಗಳು ತನಿಖೆ ಮುಂದುವರೆಸಲಿದ್ದಾರೆ.
ಯಾವುದೇ ಕ್ಷಣದಲ್ಲಿ ಡಿಕೆಶಿ ಬಂಧನ ಸಾಧ್ಯತೆ- ಐಟಿ ರೇಡ್‍ನಲ್ಲಿ ಸಿಕ್ಕ ಆಸ್ತಿಪಾಸ್ತಿಯ ಮೌಲ್ಯವೆಷ್ಟು ಗೊತ್ತಾ? https://t.co/nZLxcP65jQ #DKShivakumar #ITRaid pic.twitter.com/iqf1TRBbYS
— PublicTV (@publictvnews) August 5, 2017
ಡಿಕೆಶಿ ಆಪ್ತನ ಮನೆಯಲ್ಲಿ ಹಣದ ಗೋಪುರ: ವಿಚಾರಣೆ ವೇಳೆ ಆಂಜನೇಯ ಹೇಳಿದ್ದೇನು? https://t.co/SHh1xbYF07 #incometax #dkshivakumar #itraid pic.twitter.com/a6iN7Z0NQK
— PublicTV (@publictvnews) August 4, 2017
ಐಟಿ ಡ್ರಿಲ್ಲಿಂಗ್: ಅಧಿಕಾರಿಗಳ ಆ ಎಲ್ಲ ಪ್ರಶ್ನೆಗಳಿಗೆ ಡಿಕೆಶಿ ಉತ್ತರಿಸಿದ್ದು ಹೀಗೆ https://t.co/CoGy9AJj4O#incometax #dkshivakumar #itraid #bengaluru pic.twitter.com/q4MiF774Z0
— PublicTV (@publictvnews) August 4, 2017