ಬೆಂಗಳೂರು : ಪೆನ್ ಡ್ರೈವ್ (Prajwal Pendrive Case) ಲೀಕ್ ಕೇಸ್ ನ ಆಡಿಯೋ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ (DK Shivakumar) ರಾಜೀನಾಮೆ ಕೊಡಬೇಕು ಅಂತ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಒತ್ತಾಯ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ನಾವು ಹೇಳಿ ಆಯ್ತು. ಇಷ್ಟೆಲ್ಲ ಪ್ರಕರಣದಲ್ಲಿ ಭಾಗಿಯಾದ ಮೇಲೂ ಅವರನ್ನು ಮುಂದುವರಿಸಿರೋದು ಇದು. ಈ ಸರ್ಕಾರ ಇಂತಹವರಿಗೆ, ತಪ್ಪಿತಸ್ಥರಿಗೆ ರಕ್ಷಣೆ ಕೊಡೋಕೆ ಇರೋದು. ಡಿ.ಕೆ ಶಿವಕುಮಾರ್ ಇದರಲ್ಲಿ ಏನ್ ಮಾಡಿದ್ದಾರೆ ಅನ್ನೋ ಜಗಜ್ಜಾಹೀರು ಆಗಿದೆ. ಆದರೂ ಡಿ.ಕೆ ಶಿವಕುಮಾರ್ ರನ್ನ ರಕ್ಷಣೆ ಮಾಡೋ ಕೆಲಸ ಮಾಡ್ತಿದ್ದಾರೆ. ಸರ್ಕಾರ ಮುಂದೆ ಇದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಈ ನೆಲದ ಕಾನೂನಿನಲ್ಲಿ ಯಾರೇ ಇದ್ದರೂ ತಲೆ ಬಾಗಲೇಬೇಕು. ನಿತ್ಯ ಹಣ, ಅಧಿಕಾರ ದುರುಪಯೋಗ ಪಡಿಸಿಕೊಂಡು ಬಹಳ ದಿನ ಉಳಿಯೋದಕ್ಕೆ ಆಗೋದಿಲ್ಲ.ಅದಕ್ಕೂ ಅಂತಿಮ ದಿನಗಳು ಬರುತ್ತವೆ ಎಂದರು.
ಪೆನ್ ಡ್ರೈವ್ ಕೇಸನ್ನ ಸಿಬಿಐ ತನಿಖೆಗೆ ಕೊಡಲು ಕಾನೂನು ಹೋರಾಟ ಮಾಡೋದಾಗಿ ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ. ಪೆನ್ ಡ್ರೈವ್ ಕೇಸ್ ಸಿಬಿಐ ತನಿಖೆಗೆ ಕೊಡಲಿ ಹೈಕೋರ್ಟ್ ಮೊರೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಏನ್ ಮಾಡಬೇಕು ಅಂತ ಕಾನೂನು ತಜ್ಞರ ಜೊತೆ ಚರ್ಚೆ ಮಾಡ್ತೀವಿ. ಈ ವಿಷಯದಲ್ಲಿ ಕಾನೂನು ಚೌಕಟ್ಟಿನಲ್ಲಿ, ದೇಶದ ಕಾನೂನು ವ್ಯವಸ್ಥೆಯಲ್ಲಿ ಸತ್ಯಾಂಶ ಹೊರಗೆ ತರೋಕೆ ಏನೇನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ತೀವಿ ಎಂದರು. ಇದನ್ನೂ ಓದಿ: ಬಂದ್ರೆ ಬರ್ತಾರೆ, ಕಮ್ ಆ್ಯಂಡ್ ಜಾಯ್ನ್: ಡಿಕೆಶಿಗೆ ಕಾಯದೇ ಗರಂ ಆದ ಸಿಎಂ ಸಿದ್ದರಾಮಯ್ಯ
ದೇವರಾಜೇಗೌಡ ಜೀವಕ್ಕೆ ಆಪತ್ತು: ಇದೇ ವೇಳೆ ಡಿಕೆಶಿ ಆಡಿಯೋ ರಿಲೀಸ್ ಮಾಡಿದ್ದ ದೇವರಾಜೇಗೌಡಗೆ ಜೈಲಿನಲ್ಲಿ ಥ್ರೆಟ್ ಇರಬಹುದು ಎಂಬ ಜೆಡಿಎಸ್ ಮಾಜಿ ಶಾಸಕ ಸುರೇಶ್ ಗೌಡ ಆರೋಪಕ್ಕೆ ದನಿಗೂಡಿಸಿದ ಅವರು, ದೇವರಾಜೇಗೌಡ ಗೌಡ ಜೀವಕ್ಕೆ ಆಪತ್ತು ಇರಬಹುದು. ಈ ಸರ್ಕಾರದಲ್ಲಿ ಇರೋ ಬಹಳ ಜನರು ಯಾವ ಹಿನ್ನೆಲೆಯಿಂದ ಬಂದಿದ್ದಾರೆ ಅನ್ನೋ ದೃಷ್ಟಿಯಿಂದ ನಮ್ಮ ಮಾಜಿ ಶಾಸಕ ಸುರೇಶ್ ಗೌಡ ಹೇಳಿರಬಹುದು ಎಂದರು.