ಬೆಂಗಳೂರು: ಮೇಕೆದಾಟು ವಿಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಅವರು ತಮ್ಮ ಸ್ನೇಹಿತ ಸ್ಟಾಲಿನ್ ಅವರನ್ನು ಒಪ್ಪಿಸಲಿ ಎಂದು ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸವಾಲ್ ಹಾಕಿದ್ದಾರೆ.ಇದನ್ನೂ ಓದಿ:ರೀಲ್ಸ್ ತಂದ ಸಂಕಷ್ಟ: ವಿಚಾರಣೆಗೆ ಹಾಜರಾದ ವಿನಯ್, ರಜತ್
ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೇಕೆದಾಟು ಯೋಜನೆಗೆ ನಾವು ಅವಕಾಶ ಕೊಡುವುದಿಲ್ಲ ಎಂಬ ತಮಿಳುನಾಡು ಸಿಎಂ ಸ್ಟಾಲಿನ್ (MK Stalin) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನೀರಾವರಿ ವಿಚಾರದಲ್ಲಿ ಸೌಹಾರ್ದವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಅಂತ ಐಎನ್‌ಡಿ (IND) ಕೂಟಕ್ಕೆ ಇಷ್ಟ ಇಲ್ಲ ಅನಿಸುತ್ತದೆ. ಇದೇ ಕಾರಣದಿಂದ ಸ್ಟಾಲಿನ್ ಅವರು ವಿರೋಧ ಮಾಡುತ್ತಿದ್ದಾರೆ ಎಂದರು.
ನಾವು ನೀರಿನ ವಿಚಾರದಲ್ಲಿ ಆ ಪಕ್ಷ, ಈ ಪಕ್ಷ ಎಂದು ತಾರತಮ್ಯ ಮಾಡಬಾರದು. ಇದು ನಮ್ಮ ರಾಜ್ಯದ ನೀರಿನ ವಿಚಾರ. ನಾವು ಒಗ್ಗಟ್ಟಾಗಿ ಹೋಗಬೇಕು. ನಾಡು, ನುಡಿ, ಭಾಷೆ ಎಂದು ಬಂದಾಗ ನಾವು ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತೇವೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಸ್ಟಾಲಿನ್ ಜೊತೆ ಮಾತಾಡಿ ಅವರನ್ನು ಒಪ್ಪಿಸಲಿ ಎಂದು ಹೇಳಿದರು.ಇದನ್ನೂ ಓದಿ:ಸಂವಿಧಾನ ಬದಲಾವಣೆ ಮಾಡ್ತೀನಿ ಅಂದರೆ ಜನರೇ ಡಿಕೆಶಿ ನೆಟ್ಟು-ಬೋಲ್ಟ್ ಟೈಟ್ ಮಾಡ್ತಾರೆ: ನಿಖಿಲ್ ಕುಮಾರಸ್ವಾಮಿ