– ಪಕ್ಷ ಕಷ್ಟದಲ್ಲಿದ್ದಾಗ ರಾಜಣ್ಣ ಮಾತನಾಡಿರಲಿಲ್ಲ
ಬಳ್ಳಾರಿ: ಡಿಕೆ ಶಿವಕುಮಾರ್ (DK Shivakumar) ಮುಖ್ಯಮಂತ್ರಿ ಆಗಲೇಬೇಕು. ಆಗಿಯೇ ಆಗುತ್ತಾರೆ ಎಂದು ಚೆನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ (Shivanga Basavaraj) ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
Advertisement
ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಮಾತನಾಡಿದ ಅವರು, ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದ್ದು ಡಿಕೆ ಶಿವಕುಮಾರ್. ಹೀಗಾಗಿ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗಬೇಕು. ರಾಜ್ಯದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬರಲು ಮತ್ತು ಲೋಕಸಭಾ ಚುನಾವಣೆಯಲ್ಲಿ (Lok Sabha Election) ಒಂದರಿದ ಒಂಭತ್ತು ಸ್ಥಾನ ಗೆಲ್ಲಲು ಡಿಕೆಶಿಯೇ ಕಾರಣ. ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಿದ ಬಳಿಕ ಡಜನ್ ವ್ಯಕ್ತಿಗಳನ್ನು ಡಿಸಿಎಂ ಮಾಡಲಿ. ಕೆಪಿಸಿಸಿ ಅಧ್ಯಕ್ಷರನ್ನೇ ಸಿಎಂ ಮಾಡುವುದು ಕಾಂಗ್ರೆಸ್‌ನಲ್ಲಿ ನಡೆದು ಬಂದ ಪದ್ದತಿ. ಈ ಬಾರಿ ಕೆಲ ಕಾರಣಕ್ಕಾಗಿ ಸಿದ್ದರಾಮಯ್ಯರನ್ನು (Siddaramaiah) ಹೈಕಮಾಂಡ್ ಸಿಎಂ ಮಾಡಿದೆ. ಡಿಕೆ ಶಿವಕುಮಾರ್ ಅಧ್ಯಕ್ಷರಾದ ನಂತರ ತಳ ಮಟ್ಟದಿಂದ ಪಕ್ಷ ಸಂಘಟಿಸಿದ್ದಾರೆ ಎಂದು ಮೆಚ್ಚುಗೆಯ ಮಾತನ್ನು ಆಡಿದರು. ಇದನ್ನೂ ಓದಿ: ಕಾಲಭೈರವನ ತಾಣದಲ್ಲಿ ಪ್ರವಾಸಿಗರ ಹುಚ್ಚಾಟ – ಕುಡಿದು ರಸ್ತೆ ಮಧ್ಯೆ ಡ್ಯಾನ್ಸ್ ಮಾಡಿದ ಪುಂಡರು
Advertisement
ಡಿಸಿಎಂ ಹುದ್ದೆಗಾಗಿ ಸಚಿವ ರಾಜಣ್ಣ (Rajanna) ಬಹಿರಂಗ ಚರ್ಚೆ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, ಡಿಸಿಎಂ ಹುದ್ದೆ ಬೇಕೆಂದವರು ಪಕ್ಷದ ಹೈಕಮಾಂಡ್ ಬಳಿ ತೆರಳಿ ಚರ್ಚಿಸಬೇಕು. ಹಿರಿಯರು, ಅನುಭವಿಗಳು, ನಮ್ಮಂತ ಕಿರಿಯ ಶಾಸಕರಿಗೆ ಮಾದರಿ ಆಗಬೇಕು. ಅಧ್ಯಕ್ಷರು ಎಚ್ಚರಿಕೆ ಸಂದೇಶ ನೀಡಿದ್ದರೂ ಅದನ್ನು ಮೀರಿ ಮತ್ತೆ ಮಾತನಾಡುತ್ತಿದ್ದಾರೆ. ಡಿಕೆಶಿ ಶ್ರಮದಿಂದ ಪಕ್ಷ ಸದೃಢವಾಗಿದೆ. ಈಗ ಬಂದು ರಾಜ್ಯಾಧ್ಯಕ್ಷರಾಗಲು ಸಿದ್ಧ ಅಂತಿದ್ದಾರೆ. ಪಕ್ಷ ಕಷ್ಟದ ಕಾಲದಲ್ಲಿದ್ದಾಗ ರಾಜಣ್ಣ ಮಾತನಾಡಲಿಲ್ಲ. ಆಗ ಕಾಂಗ್ರೆಸ್ ಪಕ್ಷ ಗಟ್ಟಿಗೊಳಿಸಿದ್ದು ಡಿಕೆ ಶಿವಕುಮಾರ್ ಎಂದು ತಿರುಗೇಟು ನೀಡಿದರು.
ಡಿಕೆಶಿ ಸಿಎಂ ಆಗಲಿ ಎಂದು ಒಕ್ಕಲಿಗ ಸ್ವಾಮೀಜಿ ಅಂತ ಹೇಳಿರೋದ್ರಲ್ಲಿ ತಪ್ಪೇನಿಲ್ಲ. ರಾಜ್ಯದ ಜನರ ಭಾವನೆಗಳಿಗೆ, ಭಕ್ತರ ಆಶಯವನ್ನ ಸ್ವಾಮೀಜಿ ವ್ಯಕ್ತಪಡಿಸಿದ್ದಾರೆ ಅಷ್ಟೇ. ಸಿಎಂ, ಡಿಸಿಎಂ ಹುದ್ದೆಗಳಿಗೆ ನಮ್ಮ ಪಕ್ಷದೊಳಗೆ ಮಾತುಗಳು ಕೇಳಿ ಬರುತ್ತಿವೆ. ಹಿಂಬಾಗಿಲಿಂದ ಅಧಿಕಾರ ಹಿಡಿಯಲು ಬಿಜೆಪಿ ದೊಡ್ಡದಾಗಿ ಬಿಂಬಿಸಿ ಪ್ರಚಾರ ಮಾಡುತ್ತಿದೆ. ಬಿಜೆಪಿ ಅಧಿಕಾರ ಹಿಡಿಯುವ ಕನಸು ಕಾಣೋದನ್ನ ಬಿಡಬೇಕು. ಕಾಂಗ್ರೆಸ್ಸೇ ಐದು ವರ್ಷ ಅಧಿಕಾರ ನಡೆಸುತ್ತದೆ ಎಂದರು.
ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಸಕ ಬಸವರಾಜ್ ಶಿವಗಂಗಾ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಹೆಸರಿನ ಮೇಲೆ ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. 8 ತಿಂಗಳ ಹಿಂದೆ ಮುಂದಿನ ಎರಡೂವರೆ ವರ್ಷದ ಬಳಿಕ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿ ಸಂಚಲನ ಮೂಡಿಸಿದ್ದರು.