ಬಳ್ಳಾರಿ: ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದು ಸಚಿವ ಡಿ.ಕೆ.ಶಿವಕುಮಾರ್ ಬಿಡುವು ಮಾಡಿಕೊಂಡು ಬಿಸಿಲ ನಾಡಿನಲ್ಲಿ ಕೂಲ್ ಕೂಲ್ ಆಗಿ ಶಾಪಿಂಗ್ ಮಾಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ನಾಮಪತ್ರ ಸಲ್ಲಿಕೆ ನಂತರ ಶಾಸಕರು ಪಕ್ಷದ ಮುಖಂಡರ ಜೊತೆ ಸಭೆ ನಡೆಸಿದರು. ಸಭೆಯ ಬಳಿಕ ಶಾಪಿಂಗ್ ನಡೆಸಿದ ಡಿಕೆಶಿ ನಗರದ ವಿವಿಧ ಬಟ್ಟೆ ಮಳಿಗೆಗಳಿಗೆ ತೆರಳಿ ಉಡುಪುಗಳನ್ನು ಖರೀದಿಸಿದರು.
Advertisement
Advertisement
ತಮ್ಮ ಮಳಿಗೆಗೆ ಆಗಮಿಸಿದ ಸಚಿವರ ಜೊತೆ ಅಲ್ಲಿಯ ಸಿಬ್ಬಂದಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು. ಮಳಿಗೆಯಲ್ಲಿದ್ದ ಇತರೆ ಗ್ರಾಹಕರು ಸಚಿವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಕಳೆದ ಬಳ್ಳಾರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಚಿವರು ದಿಢೀರ್ ಎಂದು ಮಳಿಗೆ ತೆರಳಿ ತಮಗೆ ಬೇಕಾದ ಜೀನ್ಸ್ ಪ್ಯಾಂಟ್ ಖರೀದಿಸಿದ್ದರು.
Advertisement
ನಾಮಪತ್ರ ಸಲ್ಲಿಕೆಯ ಬಳಿಕ ಮಾತನಾಡಿದ್ದ ಡಿಕೆ ಶಿವಕುಮಾರ್, ಮಂಗಳವಾರದ ಶುಭ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ. ದೇಶದಲ್ಲಿ ಬದಲಾವಣೆ ಆಗಬೇಕು. ಎಲ್ಲ ವರ್ಗದವರಿಗೂ ರಕ್ಷಣೆ ಸಿಗಬೇಕು. ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಮತದಾರರು ಜವಾಬ್ದಾರಿಯಿಂದ ಮತ ನೀಡಬೇಕು. ಬಳ್ಳಾರಿಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಆಗಬೇಕಿದೆ. ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ನಾನು ಉಪಚುನಾವಣೆಯಲ್ಲೇ ಉಗ್ರಪ್ಪರ ಪರವಾಗಿ ನಾನು ಐದೂವರೆ ವರ್ಷಗಳಿಗೆ ಮತ ನೀಡುವಂತೆ ಮನವಿ ಮಾಡಿದ್ದೇನೆ. ನಮಗೆ ಚುನಾವಣೆಯಲ್ಲಿ ಹಣದ ಅವಶ್ಯಕತೆ ಇಲ್ಲ. ನಮಗೆ ಜನರ ಆರ್ಶಿವಾದ ಬೇಕು. ಬಿಜೆಪಿಯವರು ಬೇಕಾದಷ್ಟು ಹಣ ಹಂಚಿಕೆ ಮಾಡಲಿ ಎಂದು ಹೇಳಿದರು.