ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಪ್ರಕರಣದ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರನ್ನು ವಿಶೇಷ ಕೋರ್ಟ್ ಸೆ. 13 ರವರೆಗೂ ಜಾರಿ ನಿರ್ದೇಶನಾಲಯ ಕಸ್ಟಡಿಗೆ ನೀಡಿದೆ. ಕೋರ್ಟ್ ಆದೇಶದ ಬಳಿಕ ನ್ಯಾಯಾಲಯದಿಂದ ಇಡಿ ಕಚೇರಿಗೆ ಡಿಕೆಶಿರನ್ನ ಕರೆದ್ಯೊಯಲಾಗಿತ್ತು. ಅಲ್ಲಿಂದ ಅವರನ್ನು ಪೊಲೀಸ್ ಠಾಣೆಗೆ ಕರೆತರಲಾಗಿದೆ.
Advertisement
ದೆಹಲಿಯ ಲೋಕ್ ನಾಯಕ್ ಭವನದಲ್ಲಿರುವ ಇಡಿ ಕಚೇರಿಗೆ ಕರೆತಂದು ಕೆಲ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದ್ದರು. ಅಲ್ಲಿಯೇ ಊಟ ಸೇವಿಸಿದ ಡಿಕೆಶಿ ಅವರನ್ನು ಬಳಿಕ ಠಾಣೆಗೆ ಕರೆತಂದರು. ಇಂದು ರಾತ್ರಿಯನ್ನು ಡಿಕೆಶಿ ಅವರು ಪೊಲೀಸ್ ಠಾಣೆಯಲ್ಲೇ ಕಳೆಯಲಿದ್ದಾರೆ. ಕೋರ್ಟ್ ಆದೇಶ ಬರುತ್ತಿದಂತೆ ಇಡಿ ಕಚೇರಿಗೆ ಹೆಚ್ಚಿನ ಭದ್ರತೆ ನೀಡಲಾಗಿತ್ತು. ಇಂದು ಬೆಳಗ್ಗೆ ಇಂದ ಇಡಿ ಕಚೇರಿ, ನ್ಯಾಯಾಲಯದ ಎದುರು ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ವೇಳೆಗೆ ಅಲ್ಲಿಂದ ತೆರಳಿದ್ದರು. ಕೆಲ ಮಂದಿಯಷ್ಟೇ ಕಚೇರಿ ಬಳಿ ಉಳಿದಿದ್ದರು.
Advertisement
ಇದಕ್ಕೂ ಮುನ್ನ ನ್ಯಾಯಾಲಯ ಆವರಣದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಡಿಕೆ ಸುರೇಶ್ ಅವರು, ಬಿಜೆಪು ಸರ್ಕಾರ ಗೂಂಡಾ ಪ್ರವೃತ್ತಿ ತೋರುತ್ತಿದ್ದು, ದೇಶದ್ಯಾಂತ ಇದರ ವಿರುದ್ಧ ಹೋರಾಟ ನಡೆಸುತ್ತೇವೆ. ನ್ಯಾಯಾಲಯದ ಆದೇಶ ಗೌರವಿಸಿ ಮುಂದಿನ ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದರು.