– ರಾಮನಗರ ಹೆಸರು ಬದಲಾವಣೆಗೆ ಶೀಘ್ರದಲೇ ಶುಭ ಮುಹೂರ್ತ ಬರುತ್ತಿದೆ
ಮೈಸೂರು: ವಿಪಕ್ಷದವರು ಗ್ರೇಟರ್ ಬೆಂಗಳೂರನ್ನ ಕ್ವಾರ್ಟರ್ ಅಲ್ಲ, ಫುಲ್ ಬಾಟಲ್ ಆದ್ರೂ ಹೇಳಲಿ. ನಾವು ತಲೆ ಕೆಡಿಸಿಕೊಳ್ಳಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್(D K Shivakumar) ಹೇಳಿದರು.
ಮೈಸೂರಿನಲ್ಲಿ(Mysuru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು(Greater Bengaluru) ವಿಚಾರವಾಗಿ ಶೀಘ್ರದಲ್ಲೇ ಸರ್ವಪಕ್ಷ ಸಭೆ ಕರೆಯುತ್ತೇನೆ. ಈಗಿನ ಬೆಂಗಳೂರು ವ್ಯಾಪ್ತಿಗೆ ಹೊಸ ಬಡಾವಣೆ ಸೇರ್ಪಡೆ ಮಾಡುವುದಿಲ್ಲ. ಇರುವ ವ್ಯಾಪ್ತಿಯಲ್ಲೇ ಗ್ರೇಟರ್ ಬೆಂಗಳೂರು ಅನುಷ್ಠಾನ ಹಾಗೂ ಇದೇ ವ್ಯಾಪ್ತಿ ಇಟ್ಟುಕೊಂಡೇ ಚುನಾವಣೆಯನ್ನ ಮಾಡುತ್ತೇವೆ. ಅತಿ ಶೀಘ್ರದಲ್ಲೇ ಚುನಾವಣೆ ಮಾಡಲೇಬೇಕಿದೆ ಮಾಡುತ್ತೇವೆ. ಮೂರು ನಾಲ್ಕು ದಿನಗಳಲ್ಲಿ ಚುನಾವಣೆ ದಿನಾಂಕ ನಿಗದಿ ಮಾಡುತ್ತೇವೆ. ಚುನಾವಣೆ ವಿಳಂಬ ಮಾಡುವುದರಲ್ಲಿ ಯಾವುದೇ ಅರ್ಥ ಇರುವುದಿಲ್ಲ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಅವಧಿಯಲ್ಲಿ ದೇಶದ ರಕ್ಷಣಾ ಕ್ಷೇತ್ರ ಬಲಪಡಿಸಿಲ್ಲ: ಶೋಭಾ ಕರಂದ್ಲಾಜೆ
ಇದು ಗ್ರೇಟರ್ ಬೆಂಗಳೂರು ಅಲ್ಲ, ಕ್ವಾರ್ಟರ್ ಬೆಂಗಳೂರು ಎಂಬ ಆರ್.ಅಶೋಕ್(R Ashok) ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಕ್ವಾರ್ಟರ್ ಆದರೂ ಹೇಳಲಿ. ಫುಲ್ ಬಾಟಲ್ ಹೇಳಲಿ ನಾವು ತಲೆ ಕಡೆಸಿಕೊಳ್ಳುವುದಿಲ್ಲ. ವಿರೋಧ ಪಕ್ಷದವರಾಗಿ ಅಷ್ಟು ವಿರೋಧ ಮಾಡದಿದ್ದರೆ ಹೇಗೆ ಹೇಳಿ. ಅವರು ನಿಜವಾಗಲೂ ವಿರೋಧ ಮಾಡಬೇಕಿದ್ದರೇ ವಿಧಾನಸಭೆಯಲ್ಲೇ ಅದನ್ನು ಹೇಳಬಹುದಿತ್ತು. ವಿಧಾನಸಭೆಯಲ್ಲಿ ಬೆಂಬಲ ಕೊಟ್ಟು ಈಗ ಈ ರೀತಿ ಹೇಳಿದರೆ ಅದರಲ್ಲಿ ಅರ್ಥ ಇದ್ಯಾ. ಅವರು ಬೆಂಗಳೂರಿನ ಒಂದು ಭಾಗ. ಅವರ ಎಲ್ಲಾ ಸಲಹೆಗಳನ್ನ ಮತ್ತೊಂದು ಬಾರಿ ಪಡೆಯುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಗಂಗಾವತಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆ – ಸಿಎಂ
ರಾಮನಗರ(Ramanagara) ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿ, ಈ ಪ್ರಕ್ರಿಯೆಯಲ್ಲಿ ವಿಳಂಬವೇ ಆಗಿಲ್ಲ. ಅದರ ಎಲ್ಲಾ ಪ್ರಕ್ರಿಯೆ ನಡೆಯುತ್ತಲ್ಲೇ ಇದೆ. ಶುಭಗಳಿಗೆ ಶುಭ ಮುಹೂರ್ತ ಬರಬೇಕು. ಶೀಘ್ರದಲ್ಲೇ ಶುಭ ಮುಹೂರ್ತ ಬರುತ್ತಿದೆ. ಆಗ ಅದನ್ನ ಹೇಳುತ್ತೇನೆ ಎಂದರು. ಇದನ್ನೂ ಓದಿ: ನಾಳೆ ಚಿನ್ನಸ್ವಾಮಿ ಸುತ್ತಮುತ್ತ ನೋ ಪಾರ್ಕಿಂಗ್ – ಎಲ್ಲಿ ಪಾರ್ಕ್ ಮಾಡಬಹುದು?
ಭಾರತ ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿ, ವ್ಯಕ್ತಿಗಿಂತ ದೇಶ ಮುಖ್ಯ. ಯಾವ ರಾಷ್ಟ್ರದಲ್ಲೂ ಈ ರೀತಿ ನಡೆಯಬಾರದು. ಸರ್ವಪಕ್ಷ ಸಭೆ ಕರೆಯಬೇಕೆಂದು ಒತ್ತಾಯ ಮಾಡಿದ್ದೇವೆ. ಏನು ನಡೆದಿದೆ ಎಲ್ಲವನ್ನೂ ಎಲ್ಲರಿಗೂ ಹೇಳಬೇಕಲ್ಲಾ ಎಂದು ಹೇಳಿದರು. ಇದನ್ನೂ ಓದಿ: ಕೌಶಲ್ಯ ಅಭಿವೃದ್ಧಿ ಇಲಾಖೆಯಲ್ಲಿ ಶಿಫಾರಸು ಆಧಾರಿತ ವರ್ಗಾವಣೆ ಇನ್ಮುಂದೆ ಬಂದ್: ಶರಣ ಪ್ರಕಾಶ್ ಪಾಟೀಲ್
ಈ ಬಾರಿ ನಾನು ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಯಾರು ಹುಟ್ಟುಹಬ್ಬ ಆಚರಿಸಬಾರದು ಎಂದು ನಾನು ಹೇಳಿದ್ದೆ. ಕುಟುಂಬದ ಜೊತೆ ನಮ್ಮದೇ ಕಬಿನಿ ಕಾಡಿನಲ್ಲಿ ಕುಟುಂಬದ ಜೊತೆ ಮೂರು ದಿನ ಕಾಲ ಕಳೆದಿದ್ದೇನೆ. ಎಲ್ಲರ ಆಶೀರ್ವಾದ ನನಗೆ ಇರಲಿ ಎಂದರು.